ಸಂಕಷ್ಟಕ್ಕೆ ಒಳಗಾದ ಜನತೆಗೆ ನೆರವಾಗುವುದೇ ಮಾನವೀಯತೆ

ಅರಸೀಕೆರೆ: ಅತಿವೃಷ್ಟಿ-ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗುವವರಿಗೆ ನೆರವಾಗುವ ಮೂಲಕ ಮನವಿಯತೆ ಮೆರೆಯುವುದು ನಾಗರಿಕ ಸಮಾಜದ ಜವಾಬ್ದಾರಿ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ನಗರ ಸೇರಿದಂತೆ ತಾಲೂಕಿನಲ್ಲಿ ಸುರಿದ ಬಾರಿ ಮಳೆಯಿಂದಾಗಿ ವಸತಿ ಮನೆಗಳು ಒಳಗೊಂಡಂತೆ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರು ಕಷ್ಟನಷ್ಟವನ್ನು ಅನುಭವಿಸಿದ್ದು ಸರ್ಕಾರದ ವತಿಯಿಂದ ಬಿಡುಗಡೆಯಾಗಿರುವ ತುರ್ತು ಪರಿಹಾರ ನಿಧಿಯನ್ನು ನಿರಾಶ್ರಿತರಿಗೆ ವಿತರಿಸಿ ಮಾತನಾಡಿದ ಅವರು, ಜೀವನದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ಸಂಭವಿಸುತ್ತದೆ ಅಂತಹ ಸಂದರ್ಭಗಳಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರು ಸಹ ನೆರವಿನ ಹಸ್ತ ಚಾಚುವ ಮೂಲಕ ಮನವಿಯತೆ ಮೆರೆಯುವಂತೆ ಕರೆ ನೀಡಿದರು.

ಭರವಸೆ: ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ಕೆಲವು ಬಡಾವಣೆಗಳ ಜನತೆ ಎದುರಿಸುತ್ತಿರುವ ಸಮಸ್ಯೆಯನ್ನು ಕುದ್ದು ನಾನೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

ತಹಸೀಲ್ದಾರ್ ವಿಭ ವಿದ್ಯ ರಾಥೋಡ್ ಮಾತನಾಡಿ, ಯಾರು ನಿರೀಕ್ಷಿಸದಂತೆ ಸುರಿದ ಅತಿವೃಷ್ಟಿ ಮಳೆ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದು ಶಾಸಕರು ಸೇರಿದಂತೆ ತಾಲೂಕು ಆಡಳಿತ ಘಟನ ಪ್ರದೇಶಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ಮಾಹಿತಿ ಸಂಗ್ರಹಿಸಿಸಲಾಗಿದೆ. ಈಗ ತುರ್ತಾಗಿ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ಚೆಕ್ಕನ್ನು ವಿತರಿಸಲಾಗುತ್ತಿದ್ದು, ಹೆಚ್ಚು ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ತ್ವರಿತವಾಗಿ ಸೂಕ್ತ ಪರಿಹಾರದ ಅನುದಾನ ಕೈ ಸೇರಲಿದೆ. ಸಂತ್ರಸ್ತರು ಆತಂಕಗೊಳ್ಳುವುದು ಬೇಡ. ತಾಲೂಕು ಆಡಳಿತ ನಿಮ್ಮೊಂದಿಗೆ ಇದೆ ಎಂದು ಅಭಯ ನೀಡಿದ್ದರು.

ಮಳೆ ಬರುವ ವೇಳೆ ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ಇರುವುದು ಸೂಕ್ತವಲ್ಲ. ಅಂತ ಸಂದರ್ಭದಲ್ಲಿ ಸಾರ್ವಜನಿಕರು ನಗರದ ಜೇನುಕಲ್ ಬಡಾವಣೆಯಲ್ಲಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ತಾಲೂಕು ಆಡಳಿತ ಹಾರೈಕೆ ಕೇಂದ್ರ ತೆರೆದಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರ್ ವಿಭ ವಿದ್ಯಾ ರಾಥೋಡ್ ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅನ್ನಪೂರ್ಣ, ಶ್ವೇತ ರಮಶ್, ಕಲೈ ಅರಸಿ, ಮನೋರ ಮೇಸ್ತ್ರಿ, ಈಶ್ವರ್, ಬಿಜೆಪಿ ಮುಖಂಡ ಶಿವನ್ ರಾಜ್, ಆರ್.ಐ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *