ಬೆಲೆ ಏರಿಕೆ ತಡೆಗಟ್ಟಲು, ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಜನತೆಗೆ ಸಮರ್ಪಕ ಪ್ಯಾಕೇಜ್‌ಗಾಗಿ ಶಾಸಕರಿಗೆ ಮನವಿ

ಗಜೇಂದ್ರಗಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೀವನವಶ್ಯಕ ವಸ್ತುಗಳು ಸೇರಿದಂತೆ, ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಲಾಕ್‌ಡೌನ್ ನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಸಮರ್ಪಕ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ದೇಶವ್ಯಾಪ್ತಿ ಎಡಪಕ್ಷಗಳು ಕರೆ ನೀಡಿದ್ದ ಪ್ರತಿಭಟನೆ ಭಾಗವಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಗಜೇಂದ್ರಗಡ ತಾಲ್ಲೂಕ ಸಮಿತಿಯಿಂದ ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಪಕ್ಷದ ಕಾರ್ಯಾಕರ್ತರು ಪ್ರತಿಭಟನೆ ನಡೆಯಿಸಿದರು. ನಂತರ ಶಾಸಕರ ಮನೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿಸಿ  ಮನವಿ ಸಲ್ಲಿಸಲಾಯಿತು.

ಈ ವೇಳೆ ಸಿಪಿಐ(ಎಂ) ಜಿಲ್ಲಾ ಸಮಿತಿ ಮುಖಂಡ ಎಂ.ಎಸ್.ಹಡಪದ ಮಾತನಾಡಿ ʻʻಕೇಂದ್ರ ಹಾಗೂ ರಾಜ್ಯ ಸರಕಾರಗಳು ತಜ್ಞರ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ, ಕೋವಿಡ್-19ರ ಎರಡನೇ ಅಲೆಯ ಬಾಧೆಗೆ ದೇಶ ಹಾಗೂ ರಾಜ್ಯವು ತುತ್ತಾಗಬೇಕಾಯಿತು. ಈ ದುಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಲು ಯಾವುದೇ ಪೂರ್ವಬಾವಿ  ಕ್ರಮಗಳನ್ನು ಕೈಗೊಳ್ಳದೇ ಮೇಲಿಂದ ಮೇಲೆ ಲಾಕ್‌ಡೌನ್‌ ಗಳನ್ನು  ಹೇರಿದ್ದರಿಂದ ಕೂಡಾ ರಾಜ್ಯದ ಜನತೆಯನ್ನು  ಆರ್ಥಿಕವಾಗಿ ಅತ್ಯಂತ ದುಸ್ಥಿತಿಗೀಡು ಮಾಡಿತಲ್ಲದೇ ಕೋವಿಡ್ ಮತ್ತಷ್ಟು  ವಿಸ್ಥಾರಗೊಳ್ಳಲು ನೆರವಾಯಿತು. ಇದರಿಂದಾಗಿ ರಾಜ್ಯದಲ್ಲಿ ಹಲವು ಚಿಕಿತ್ಸೆಗಳ ಕೊರತೆಯುಂಟಾಗಿ ಸಾವಿರಾರು ಅಮಾಯಕರು ಪ್ರಾಣಕಳೆದುಕೊಳ್ಳುವಂತಾಗಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ನಿಲ್ಲಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಮೇಲೆ ಪೆಟ್ರೋಲಿಯಂ ಉತ್ಪನ್ನ, ವಿದ್ಯುತ್ ದರ, ರಸಾಯನಿಕ ಗೊಬ್ಬರ ಮತ್ತು  ಸಾರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆಯನ್ನು ಹೇರುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ  ಬಾಲು ರಾಠೋಡ ಮಾತನಾಡಿ ಜನತೆಯ ಒತ್ತಾಯ ಹಾಗೂ ಸುಪ್ರಿಂ ಕೋರ್ಟ್‌ ಮಧ್ಯಪ್ರವೇಶಕ್ಕೆ ಮಣಿದು 18 ವರ್ಷಕ್ಕೆ ಮೇಲಿನವರಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರಕಾರ ಹೇಳಿರುವುದು ದೇಶದ ಜನತೆಯ ಹೋರಾಟಕ್ಕೆ ದೊರೆತ ಜಯವಾಗಿದೆ. ಆದರೇ, ಲಾಕ್‌ಡೌನ್ ಪರಿಹಾರವಾಗಿ ಕೇಂದ್ರ ಸರಕಾರ ನೀಡಿರುವುದು ಕೇವಲ 10 ಕೆ.ಜಿ ಮುಗ್ಗುಲು ಅಕ್ಕಿ ಮಾತ್ರವೇ ? ಇತರ ಪರಿಹಾರದ ಘೋಷಣೆ ಮಾಡಲಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲೂ ರಾಜ್ಯಗಳಿಗೆ ಕೊಡಬೇಕಾದ ಜಿ.ಎಸ್.ಟಿ ಪಾಲನ್ನು ನೀಡದೇ ಸತಾಯಿಸುತ್ತಿರುವುದು ಹೇಯ ವರ್ತನೆಯಾಗಿದೆ.  ಹೊಲಗಳಲ್ಲಿ ಕೊಳೆಯಲು ಬಿಟ್ಟ  ಉತ್ಪನ್ನಗಳಿಗೆ ಸೂಕ್ತ ಪರಿಹಾರ ಈಗಲೂ ನೀಡಿಲ್ಲ. ಕೂಲಿಕಾರರು, ರೈತರು, ಕಸುಬುದಾರರು, ಕಾರ್ಮಿಕರು, ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವು ನೀಡಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.

ಶಾಸಕ ಕಳಕಪ್ಪ ಬಂಡಿಯವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡ ಮಾರುತಿ ಚಿಟಗಿ ಮಾತು ಬೆಳೆಸಿದಾಗ ಶಾಸಕರು ಕೊಟ್ಟ ಮನವಿಯನ್ನು ನನಗೆ ಓದಲು ಬರುತ್ತದೆ. ಹೆಚ್ಚಿನದನ್ನು ಏನೂ ಹೇಳುವ ಅವಶ್ಯಕತೆ ಇಲ್ಲವೆಂದು ಅಸಡ್ಯತೆ ತೋರಿದರು. ಜವಬ್ದಾರಿಯುತ ಜನಪ್ರತಿನಿಧಿಗಳಾದವರು ಹೋರಾಟಗಾರರೊಂದಿಗೆ ಸಂವೇಧನಾಶೀಲತೆ ಮತ್ತು ಸೌಜನ್ಯದಿಂದ ವರ್ತಿಸಬೇಕಾಗಿತ್ತು ಎಂದು ಪಕ್ಷದ ಮುಖಂಡರು  ಮಾದ್ಯಮಗಳ ಮುಂದೆ ತಮ್ಮ ಅಸಮಧಾನ ಹೊರಹಾಕಿದರು.

ಈ ಮೊದಲು ಶಾಸಕರಿಗೆ ಮನವಿ ನೀಡಲು ಪೊಲೀಸರು ಅವಕಾಶ  ನಿರಾಕರಿಸಿ, ಹೋರಾಟಗಾರರಿಗೆ ಮುಂಚಿತ ನೋಟಿಸ್ ಜಾರಿ ಮಾಡಿದರು.ಇದರ ವಿರುದ್ಧ ಪ್ರತಿಭಟಿಸಿದಾಗ ಶಾಸಕರಿಗೆ ಮನವಿ ನೀಡಲು ಅವಕಾಶ ನೀಡಿದರು. ಇದೇ ಸಂದರ್ಭದಲ್ಲಿ ಪೊಲೀಸರ ಈ ನಡೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.

ಪ್ರತಿಭಟನೆಯಲ್ಲಿ ಫಯಾಜ್ ತೋಟದ, ಫೀರು ರಾಠೋಡ, ಮೈಬುಸಾಬ ಹವಲ್ದಾರ, ಅಲ್ಲಾಭಕ್ಷಿ ಮಿಕ್ಷಾವಾಲಿ, ಶಾಂತಮ್ಮ ಹಡಪದ, ಶೋಭಾ ಚವ್ಹಾಣ, ಎಚ್ಚರಪ್ಪ ಬಡಿಗೇರ, ರಾಜೂ ರಾಠೋಡ ಮುಂತಾದವರು ಪಾಲ್ಗೊಂಡಿದ್ದರು.

 

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *