ನವದೆಹಲಿ: ಸುಪ್ರೀಂ ಕೋರ್ಟ್ ನ ಜಸ್ಟಿಸ್ ಚಂದ್ರಚೂಡ್ ನಿವೃತ್ತಿಯಾಗುತ್ತಿರುವ ಬೆನ್ನಲ್ಲೇ ನೂತನ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ಸಂಜೀವ್ ಖನ್ನಾ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇಂದು ರಾಷ್ಟ್ರಪತಿ ಭವನದಲ್ಲಿ ಸುಪ್ರೀಂ ಕೋರ್ಟ್ ನ 51 ನೇ ಮುಖ್ಯ ನ್ಯಾಯಾಧೀಶರಾಗಿ ಸಂಜೀವ್ ಖನ್ನಾ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ದೌಪದಿ ಮುರ್ಮು ರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ. ಅವರ ಅಧಿಕಾರಾವಧಿ ಒಟ್ಟು ಆರು ತಿಂಗಳು ಇರಲಿದೆ. ಸುಪ್ರೀಂ ಕೋರ್ಟ್ ನ ಎರಡನೇ ಹಿರಿಯ ನ್ಯಾಯಾಧೀಶರಾದ ಅವರು ಚಂದ್ರಚೂಡ್ ರಿಂದ ನಾಮನಿರ್ದೇಶನಗೊಂಡು ಹೊಸ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. 1960 ರಲ್ಲಿ ಜನಿಸಿದ ಸಂಜೀವ್ ಖನ್ನಾ 1983 ರಲ್ಲಿ, ಡೆಲ್ಲಿ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ವ್ಯಕ್ತಿ ಜೀವನ ಆರಂಭಿಸಿದರು.
ಇದನ್ನೂ ಓದಿ: ಒಂದು ದೇಶ, ಒಂದು ಸಮಾನ ವೇತನ ನೀತಿ ಜಾರಿಗೆ ತನ್ನಿ – ಕೆ ಮಹಾಂತೇಶ ಆಗ್ರಹ
ಜಸ್ಟಿಸ್ ಖನ್ನಾಗೆ ಆದಾಯ ತೆರಿಗೆ ವಿಭಾಗದ ಹಿರಿಯ ಸಲಹಗಾರನಾಗಿ ಕೆಲಸ ಮಾಡಿದ ಅನುಭವಿಯಾಗಿದ್ದು, ಕಾನೂನಿನ ವಿವಿಧ ಮಜಲುಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. 2005 ರಲ್ಲಿ ದೆಹಲಿ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾದ ಅವರು 2006 ರಿಂದ ಖಾಯಂ ನ್ಯಾಯಾಧೀಶರಾದರು.
2019 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದರು. ಯಾವುದೇ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗದೇ ಇದೀಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗುವ ಯೋಗ ಅವರದಾಗಿದೆ.
ಈ ಹಿಂದೆ ದೆಹಲಿ ಸಿಎಂ ಆಗಿದಾಗ ಬಂಧನದಲ್ಲಿದ್ದ ಅರವಿಂದ್ ಕೇಜಿವಾಳ್ ಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಮೀನು ನೀಡಿದ್ದರು. ಮನೀಶ್ ಸಿಸೋಡಿಯಾಗೆ ಜಾಮೀನು ಮಂಜೂರು ಮಾಡಿದ ಖ್ಯಾತಿಯೂ ಅವರದಾಗಿದೆ.ಇವರ ತಂದೆ, ಚಿಕ್ಕಪ್ಪ ಕೂಡಾ ನಾಯಾಧೀಶರಾಗಿ ಕೆಲಸ ಮಾಡಿದ್ದವರೇ, ಇದೀಗ ಸಂಜೀವ್ ಖನ್ನಾ ದೇಶದ ಪರಮೋಚ್ಛ ನ್ಯಾಯಾಲಯದ ಚುಕ್ಕಾಣಿ ಹಿಡಿಯುತ್ತಿದ್ದಾರೆ.
ಇದನ್ನೂ ನೋಡಿ: ವಚನಾನುಭವ 19| ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು | ಮೀನಾಕ್ಷಿ ಬಾಳಿ Janashakthi Media