“ಸಂಜೆ ಹೊತ್ತಿನಲ್ಲಿ ಮಹಿಳೆ ಹೊರಗಡೆ ಓಡಾಡಬಾರದು” ಮಹಿಳಾ ಆಯೋಗದ ಸದಸ್ಯೆಯಿಂದ ವಿವಾದಾತ್ಮಕ ಹೇಳಿಕೆ

ಉತ್ತರ ಪ್ರದೇಶ; ಜ, 09 : ಬದಾಯುಂನಲ್ಲಿ ಮಹಿಳೆಯ ಮೇಲಿನ  ನಡೆದ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ  ವಿವಾದಾತ್ಮದ ಹೇಳಿಕೆ ನೀಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

50 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಗೈದ ಘಟನೆ ಉತ್ತರ ಪ್ರದೇಶ ಬದಾಯುಂನಲ್ಲಿ ನಡೆದಿದೆ. ಈ ಘಟನೆಗೆ  ಸಂಬಂಧಿಸಿದಂತೆ ಸಂತ್ರಸ್ತೆ ಗ್ರಾಮಕ್ಕೆ ಭೇಟಿ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಕ್ತಿ ದೇವಿ ಈ ಘಟನೆಗೆ ಕಾರಣ ಸಂತ್ರಸ್ತ  ಮಹಿಳೆ ಸಂಜೆ ಹೊತ್ತಿನಲ್ಲಿ ಒಬ್ಬೊಂಟಿಯಾಗಿ ಹೊರಗಡೆ ಹೋಗಿರುವುದು. ನಾನು ಈ ಮೊದಲಿನಿಂದ ಹೇಳುತ್ತಾ ಬಂದಿರುವೇ ಸಂಜೆ ಹೊತ್ತಲ್ಲಿ ಒಬ್ಬೊಂಟಿ ಮಹಿಳೆಯರು ಹೊರಗಡೆ ಹೋಗಬಾರದು ಎಂದು ಹೇಳಿದ್ದಾರೆ. ಅವರ ಈ ಬೇಜಾವ್ದಾರಿ ಹೇಳಿಕೆಗೆ ಭಾರಿ ಖಂಡನೇ ವ್ಯಕ್ತಿವಾಗಿದೆ.

ಇವರ ಈ ಹೇಳಿಕೆಯನ್ನು ಜನವಾದಿ ಮಹಿಳಾ ಸಂಘಟನೆಯೂ ಬಲವಾಗಿ ಖಂಡಿಸಿದೆ. ಒಬ್ಬ ರಾಷ್ಟ್ರೀಯ ಮಹಿಳೆ ಸದಸ್ಯೆ ಮಹಿಳೆಯರ ಹಿತಾಸಕ್ತಿಯನ್ನು ಕಾಯುವುದರ ಬದಲು ಈ ತರಹದ ಹೇಳಿಕೆ ನೀಡಿರುವುದು ಖಂಡನೀಯ. ಇಂತಹ ಘಟನೆ ನಡೆದ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರು ಮಧ್ಯ ಪ್ರವೇಶ ಮಾಡಿ ಆರೋಪಿಯನ್ನು ಬಂಧಿಸುವ ಕೆಲಸ ಮಾಡಬೇಕು, ಆದರೆ ಇವರ ಹೇಳಿಕೆ ಮನುವಾದವನ್ನು ಮತ್ತೆ ಹೇರಲು ಹೊರಟಿದೆ. ಇವರಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗುವ ನೈತಿಕತೆ ಇಲ್ಲ, ಹಾಗಾಗಿ ಇವರು ರಾಜೀನಾಮೆ ನೀಡಬೇಕು. ಅಲ್ಲದೆ ಈ ಪ್ರಕರಣಕ್ಕೆ ತ್ವರಿತ ನ್ಯಾಯವನ್ನು ನೀಡಬೇಕು, ತಕ್ಷಣ ಸಂತ್ರಸ್ತೆ ಕುಂಟುಬಕ್ಕೆ ರಕ್ಷಣೆ ಕೊಡಬೇಕು, ಪ್ರಮುಖ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *