ನವದೆಹಲಿ: ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ವನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ಅದರ ನೂತನ ಚುನಾಯಿತ ಅಧ್ಯಕ್ಷ ಸಂಜಯ್ ಸಿಂಗ್ ಅವರು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಅವರ ದೃಷ್ಟಿಕೋನವನ್ನು ವಿವರಿಸುವುದಾಗಿ ಸಂಜಯ್ ಹೇಳಿದ್ದಾರೆಂದು ವರದಿಗಳು ಉಲ್ಲೇಖಿಸಿವೆ.
ಡಿಸೆಂಬರ್ 21 ರಂದು ಡಬ್ಲೂಎಫ್‌ಐ ಮುಖ್ಯಸ್ಥರಾಗಿ ಸಂಜಯ್ ಆಯ್ಕೆಯಾದ ನಂತರ ಕುಸ್ತಪಟುಗಳು ಅದನ್ನು ತೀವ್ರವಾಗಿ ಖಂಡಿಸಿದ್ದರು ಅಲ್ಲದೆ ತಮಗೆ ದೊರೆತ ಪದ್ಮಶ್ರೀ ಪ್ರಶಸ್ತಿಗಳನ್ನು ವಾಪಾಸು ಮಾಡಿದ್ದರು. ಇದರ ನಂತರ ಕೇಂದ್ರದ ಕ್ರೀಡಾ ಸಚಿವಾಲಯವು ಭಾನುವಾರ “ತರಾತುರಿ” ಘೋಷಣೆ ಮಾಡಿ ಸಂಸ್ಥೆಯನ್ನು ಅಮಾನತುಗೊಳಿಸಿತ್ತು. ಸಂಜಯ್ ಅವರು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ನಿಕಟ ಸಹವರ್ತಿ ಎಂದು ಹೇಳಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಮಸೀದಿ ಗೋಡೆಯಲ್ಲಿ ಜೈಶ್ರೀರಾಮ್ ಎಂದು ಬರೆದ ದುಷ್ಕರ್ಮಿಗಳು
ಡಬ್ಲ್ಯುಎಫ್‌ಐನ ಹೊಸ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯಾಗಿರುವುದು ಒಲಂಪಿಕ್ ಪದಕ ವಿಜೇತ ಸಾಕ್ಷಿ ಮಲಿಕ್ ಅವರ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಪತ್ರಿಕಾಗೋಷ್ಠಿಯೊಲ್ಲಿ ಅವರು ಅವರು ಕುಸ್ತಿಯಿಂದ ರಾಜೀನಾಮೆ ಘೋಷಿಸಿದ್ದರು. ಇದರ ನಂತರ ಮತ್ತೊಬ್ಬ ಒಲಿಂಪಿಯನ್ ಪುನಿಯಾ ಪ್ರಶಸ್ತಿಯನ್ನು ಪ್ರಧಾನಿಯ ನಿವಾಸ ಮುಂದಿನ ಫುಟ್‌ಪಾತ್‌ನಲ್ಲಿ ಇಟ್ಟು ತೆರಳಿದ್ದರು. ಮತ್ತೊಬ್ಬ ಕುಸ್ತಿಪಟು ವಿರೇಂದ್ರ ಸಿಂಗ್ ಅವರು ಕೂಡಾ ಪ್ರಶಸ್ತಿ ವಾಪಾಸು ಮಾಡುವುದಾಗಿ ಹೇಳಿದ್ದರು.
ಇದರ ನಂತರ ಕ್ರೀಡಾ ಸಚಿವಾಲಯವು ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಿತ್ತು. ಹೊಸದಾಗಿ ಚುನಾಯಿತ ಸಂಸ್ಥೆಯಿಂದ ಆತುರದ ನಿರ್ಧಾರಗಳನ್ನು ಉಲ್ಲೇಖಿಸಿರುವ ಸಚಿವಾಲಯವು, “ಕುಸ್ತಿ ಫೆಡರೇಶನ್ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ” ಎಂದು ಡಿಸೆಂಬರ್ 24 ರಂದು ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಮಾನತು | ಕುಸ್ತಿಪಟುಗಳ ಮುಂದೆ ಮಂಡಿಯೂರಿದ ಮೋದಿ ಸರ್ಕಾರ
ಸರ್ಕಾರವು ಫೆಡರೇಷನ್ ಅನ್ನು ವಜಾಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದ ಸಂಜಯ್ ಸಿಂಗ್, ಡಬ್ಲ್ಯುಎಫ್‌ಐ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸರ್ಕಾರಕ್ಕೆ ವಿವರಿಸುವ ಮೂಲಕ ತನ್ನ ಅಮಾನತು ರದ್ದುಗೊಳಿಸುವಂತೆ ಕೋರುತ್ತದೆ. ಒಂದು ವೇಳೆ ಸಮಸ್ಯೆ ಪರಿಹಾರವಾಗದಿದ್ದರೆ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
“ನಾವು ಕ್ರೀಡಾ ಸಚಿವರಿಂದ ಸಮಯ ಕೇಳುತ್ತಿದ್ದು, ಅಮಾನತು ಹಿಂತೆಗೆದುಕೊಳ್ಳುವಂತೆ ವಿನಂತಿಸುತ್ತೇವೆ. ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹಾರವಾಗದಿದ್ದರೆ, ನಾವು ಕಾನೂನು ಆಯ್ಕೆಗಳನ್ನು ಹುಡುಕುತ್ತೇವೆ” ಎಂದು ಸಂಜಯ್ ಸಿಂಗ್ ಪಿಟಿಐಗೆ ತಿಳಿಸಿದ್ದರು.
“ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಯಮಗಳನ್ನು ಅನುಸರಿಸಿದ್ದೇವೆ ಎಂದು ನಾವು ವಿವರಿಸುತ್ತೇವೆ. ಆ ಬಗ್ಗೆ ನಾವು ಪುರಾವೆಗಳನ್ನು ಪ್ರಸ್ತುತಪಡಿಸುತ್ತೇವೆ. ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಒಮ್ಮತದಿಂದ ತೆಗೆದುಕೊಳ್ಳಲಾಗಿದೆ. ಅದು ನನ್ನ ವೈಯಕ್ತಿಕ ನಿರ್ಧಾರವಾಗಿರಲಿಲ್ಲ. 24 ರಾಜ್ಯ ಸಂಘಗಳು ಅಫಿಡವಿಟ್‌ಗಳನ್ನು ನೀಡಿವೆ ಮತ್ತು ನಮಗೆ ಇಮೇಲ್‌ಗಳು ಬಂದಿವೆ, ನಮ್ಮಲ್ಲಿ ಎಲ್ಲವೂ ಲಿಖಿತವಾಗಿ ಇದೆ” ಎಂದು ಕ್ರೀಡಾ ನಿರ್ವಾಹಕರು ಹೇಳಿದ್ದಾರೆ.
ವಿಡಿಯೊ ನೋಡಿ: ಕಲ್ಲಡ್ಕ ಪ್ರಭಾಕರ್ ಭಟ್‌ನದ್ದು ಕೊಳಕು ಮನಸ್ಸು, ಭಯೋತ್ಪಾದಕ ಮನಸ್ಥಿತಿ – ಹೋರಾಟಗಾರರ ಆಕ್ರೋಶ Janashakthi Media