ಅಲ್ ಕಸ್ವ ಫ್ರೆಂಡ್ಸ್ ತಂಡದ ರಂಜಾನ್ ತಿಂಗಳ ಸೌಹಾರ್ದ ಸಾಮೂಹಿಕ ಇಫ್ತಾರ್ ಕಾರ್ಯಕ್ರದ 26ನೇ ದಿನದ ಅತಿಥಿ ಗಳಾಗಿ ನಗರದ ಪೌರ ಕಾರ್ಮಿಕರು ಭಾಗವಹಿಸಿದರು.
ಈ ಸಂಧರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಬಿಕೆ ಇಮ್ತಿಯಾಜ್ ಮಾತನಾಡುತ್ತಾ ಪೌರ ಕಾರ್ಮಿಕರೂ ಜನ ಸಮುದಾಯದ ಅಂಗವಾಗಿದ್ದಾರೆ ಅವರಿಲ್ಲದೆ ಪರಿಪೂರ್ಣ ಸಮಾಜ ಆಗಲು ಸಾಧ್ಯವಿಲ್ಲ. ನಗರದ ದೈನಂದಿನ ಚಟುವಟಿಕೆ ಆರಂಭಗೊಳ್ಳುವುದೇ ಪೌರ ಕಾರ್ಮಿಕರಿಂದ ದಿನನಿತ್ಯ ರಸ್ತೆ ಗುಡಿಸಿ, ಚರಂಡಿ ಸ್ವಚ್ಛಗೊಳಿಸಿ ಕೊಟ್ಟಿರುವುದರಿಂದಲೇ ನಗರದ ಜನರು ಆರೋಗ್ಯವಾಗಿದ್ದಾರೆ ಎಂದರು
ಇದನ್ನು ಓದಿ :ಉತ್ತರ ಪ್ರದೇಶ| ಉತ್ತರ ಪತ್ರಿಕೆಗಳಲ್ಲಿ 200 – 500 ರೂ. ನೋಟುಗಳು ಪತ್ತೆ
ಮಳೆ ಬಿಸಿಲು ಲೆಕ್ಕಿಸದೆ ನಗರದ ಜನರಿಗಾಗಿ ದುಡಿಯುವ ಪೌರ ಕಾರ್ಮಿಕರೂ ಸಮಾಜದ ಅವಿಭಾಜ್ಯ ಅಂಗ ಎಂದು ಪರಿಗಣಿಸದೆ ಅವರನ್ನು ನಿರ್ಲಕ್ಷ್ಯ ಮಾಡಬಾರದು. ಯಾವುದೇ ಹಬ್ಬ ಆಚರಣೆಗಳು ಎಲ್ಲರನ್ನು ಒಳಗೊಂಡು ನಡೆದಾಗ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ಬಲಗೊಳ್ಳಲು ಸಾಧ್ಯ ಎಂದು ಇಮ್ತಿಯಾಜ್ ಹೇಳಿದರು. ಪೌರ ಕಾರ್ಮಿಕರೊಂದಿಗೆ ಸಾಮೂಹಿಕ ಇಫ್ತಾರ್ ಕಾರ್ಯಕ್ರಮ ಅವಿಸ್ಮರಣೀಯ ಮತ್ತು ಐತಿಹಾಸಿಕವಾದ ಕ್ರಾಂತಿಕಾರಕ ಸಮಾಜ ಸುಧಾರಣೆಯ ಹೆಜ್ಜೆ ಎಂದು ಹೇಳಿದರು
ಅಲ್ ಕಸ್ವ ಫ್ರೆಂಡ್ಸ್ ಗ್ರೂಪಿನ ಅಧ್ಯಕ್ಷರಾದ ನಜೀರ್ ಕುದ್ರೋಳಿ ಪೌರ ಕಾರ್ಮಿಕರಿಗೆ ಶಾಲು ಹಾಕಿ ಸ್ವಾಗತಿಸಿದರು. ಸಾಮೂಹಿಕ ಇಫ್ತಾರ್ ಕಾರ್ಯಕ್ರಮದಲ್ಲಿ ಹರ್ಷ ವ್ಯಕ್ತಪಡಿಸಿದ ಪೌರ ಕಾರ್ಮಿಕರು ಕಸ ಗುಡಿಸಲು ಮಾತ್ರ ಬಳಸುತ್ತಿದ್ದ ನಮ್ಮನ್ನು ಕರೆಸಿ ಗೌರವಿಸಿದ್ದು ಖುಷಿ ತಂದಿದೆ ಎಂದು ಪೌರ ಕಾರ್ಮಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನು ಓದಿ :ದಕ್ಷಿಣ ಕೊರಿಯಾದಲ್ಲಿ ಭೀಕರ ಕಾಡ್ಗಿಚ್ಚು: 24 ಮಂದಿ ಸಾವು, 27,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ
ಇದೇ ವೇಳೆ ಪೌರ ಕಾರ್ಮಿಕೆ ಗಂಗೂ ಬಾಯಿ ಖಜೂರ ಹಂಚಿದರು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರ ಸಂಘದ ಮುಖಂಡ ರಾದ ಜಯ ಮಧ್ಯ, ಶಿವಾನಂದ, ನಾಗರಾಜ್, ಲಕ್ಕಮ್ಮ, ಶಾಂತ, ಲಕ್ಷ್ಮಿ ರಮೇಶ್ ಮತ್ತು ಅಲ್ ಕಸ್ವ ಫ್ರೆಂಡ್ಸ್ ಗ್ರೂಪಿನ ಪ್ರಮುಖರಾದ, ಅಶ್ರರ್ ಬಂದರ್, ರಾಹಿಲ್ ಬಂದರ್, ಸಿರಾಜ್ ಮಂಜೇಶ್ವರ, ರಿಫಾಯಿ ಕಣ್ಣೂರು, ಸಮದ್ ಕುದ್ರೋಳಿ, ಅಶ್ರಫ್ ಪಾಂಡೇಶ್ವರ, ರಶೀದ್ ಮಾಣಿ, ಹಾರಿಸ್ ಪುತ್ತೂರು, ಅನೀಸ್, ಜಾಬೀರ್, ತೋಸೀಫ್,ಸಿದ್ದಿಕ್, ರಿಯಾಜ್ ಮುಂತಾದವರು ಉಪಸ್ಥಿತರಿದ್ದರು