ಸಂಗೀತ ಪ್ರಿಯರ ಮ್ಯೂಸಿಕ್ ಪ್ರಪಂಚ

  • ಇಂಡಿಯನ್ ಮ್ಯೂಸಿಕ್ ಮ್ಯೂಸಿಯಂ ವಸ್ತು ಸಂಗ್ರಾಲಯ
  • ಭಾರತದ ಏಕೈಕ ಸಂವಾದಾತ್ಮಕ ಸಂಗೀತ ಮ್ಯೂಸಿಯಂ

ಇದು ಎಲ್ಲಿದೆ? ಇದು ಯಾವಾಗ ನಿರ್ಮಾಣವಾಯಿತು? ಇದರ ವಿಶೇಷತೆ ಏನು? ಇನ್ನು ಮುಂತಾದ ವಿಷಯಗಳು ತಿಳಿಯಲು ಇದನ್ನು ಸಂಪೂರ್ಣವಾಗಿ ಓದಿ.

ಇದು ಬೆಂಗಳೂರಿನ ಜೆಪಿ ನಗರದ 7ನೇ ಕ್ರಾಸ್ ನಲ್ಲಿ ಬಿಗ್ರೇಡ್ ಮಿಲೇನಿಯಂ ಅವೆನ್ನೂ ವುಡ್ ರೋಸ್ ಕ್ಲಬ್ ಎದುರು ಈ ಮ್ಯೂಸಿಯಂ ಇದೆ.

ಭಾರತೀಯ ಸಂಗೀತ ಅನುಭವ (IME) ರಾಷ್ಟ್ರದ ಮೊದಲ ಸಂವಾದಾತ್ಮಕ ಸಂಗೀತ ವಸ್ತುಸಂಗ್ರಹಾಲಯವಾಗಿದೆ.

ಸಂವಾದಾತ್ಮಕ ಸಂಗೀತ ಮ್ಯೂಸಿಯಂ ಅನ್ನು ನವೆಂಬರ್ 2018 ರಲ್ಲಿ ಸಂದರ್ಶಕರಿಗೆ ಸಂಪೂರ್ಣವಾಗಿ ತೆರೆಯಲಾಯಿತು.ಇದು ಭಾರತದ ವಿಶಾಲವಾದ ಮತ್ತು ವೈವಿದ್ಯಮಯ ಸಂಗೀತ ಪರಪಂರೆಯ ಕುರಿತು ಹೈಟೆಕ್ ಇತಿಹಾಸದ ಪಾಠವನ್ನು ನೀಡುತ್ತದೆ.

ಈ ಮ್ಯೂಸಿಯಂ ನ ವೀಕ್ಷಿಸಿಸುವರನ್ನು ಸಂಗೀತ ಜಗತ್ತಿಗೆ ಪರಿಚಯಿಸಲು ಉತ್ತಮ ಸ್ಥಳವಾಗಿದೆ.

ಹಾಗು ಗಲಿಬಿಲಿಯಾಗಿರುವ ಮನಸ್ಸುಗಳಿಗೆ ಸಂಗೀತ ಮೂಲಕ ಪ್ರಶಾಂತತೆಯನ್ನು ನೀಡುವ ಸ್ಥಳ ಇದಾಗಿದೆ.

ಸಂಗೀತಕ್ಕೆ ಭಾಷೆಯಿಲ್ಲ. ಇದು ಸಾರ್ವತ್ರಿಕವಾಗಿದೆ ಮತ್ತು ಅದು ನಿಮ್ಮ ಆತ್ಮದೊಂದಿಗೆ ಮಾತನಾಡಬಲ್ಲದು! “ಸಂಗೀತವು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಇದು ಕೆಲವು ಗಂಟೆಗಳ ಕಾಲ ಜನರನ್ನು ತಮ್ಮಿಂದ ಹೊರತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.

ಸರ್ ಎಲ್ಟನ್ ಜಾನ್

ಇಲ್ಲಿ ಹಳೇ ಕಾಲದ ಸಂಗೀತ ವಸ್ತುಗಳಿಂದ ಹಿಡಿದು ಈ ಆಧುನಿಕ ಕಾಲದವರಿಗೆ ಬಳಸುವ ಜಗತ್ತಿನ ಎಲ್ಲಾ ರೀತಿಯ ಸಂಗೀತದ ವಸ್ತುಗಳು ಈ ಮ್ಯೂಸಿಯಂ ನಲ್ಲಿ ಸಂಗ್ರಹಿಸಿ ಇಡಲಾಗಿದೆ.

ಅಂತರಾಷ್ಟ್ರೀಯವಾಗಿ ವಿನ್ಯಾಸಗೊಳಿಸಿದ ಪ್ರದರ್ಶನ ಗ್ಯಾಲರಿಗಳು, ಸ್ಟೋರಿ ಬೋರ್ಡ್‌ಗಳು ಮತ್ತು ಕಲಾಕೃತಿಗಳೊಂದಿಗೆ ತಲ್ಲೀನಗೊಳಿಸುವ ಅನುಭವ ನಮಗೆ ಇಲ್ಲಿ ಸಿಗುತ್ತದೆ.

ಇಲ್ಲಿಗೆ ಬರುವ ಸಂಗೀತ ಪ್ರಿಯರಿಗೆ ಎಲ್ಲಾ ಭಾಷೆಗಳಲ್ಲಿ ಸಂಗೀತವನ್ನು ಆಲಿಸುವ ಅವಕಾಶ  ಕಲ್ಪಿಸಲಾಗಿದೆ. ಮಕ್ಕಳಿಂದ ಹಿಡಿದು ಮುದಕರವರೆಗೂ ಬಂದು ಸಂಗೀತವನ್ನು ಆಲಿಸುವ ಅವಕಾಶ ಕಲ್ಪಿಸಲಾಗಿದೆ.

ಸಂಗೀತದ ವಿಸ್ಮಯ ಜಗತ್ತನ್ನು ಪರಿಚಯಿಸುವ ಈ ಮ್ಯೂಸಿಯಂ  ಆಕರ್ಷಣೆಯ ಚಿತ್ರಗಳೊಂದಿಗೆ ಹಾಗು ಅನೇಕ ವಿಧದ ಸಂಗೀತ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ.

ತಂಬೂರಿ, ಮೃದಂಗ, ಪಿಟೀಲು, ಹಾರ್ಮೋನಿಯಂ, ಕೊಳಲು, ಘಟಂ, ವೀಣಾ, ತಬಲ, ಡ್ರಮ್ಸ್, ಗಿಟಾರ್, ಸಿಂಬಲ್, ನಾದ ಸ್ವರ ಇನ್ನು ಮುಂತಾದ ಮ್ಯೂಸಿಕ್ ಉಪಕರಣಗಳು ಇಲ್ಲಿ ಇದ್ದಾವೆ.

ಇದರಲ್ಲಿ ಮಿನಿ ಥಿಯೇಟರ್ ಕೂಡ ಇದೆ. ಇಲ್ಲಿ ವೀಕ್ಷಕರು ಕೂತು ಹಳೇ ಕಾಲದ ಸಿನಿಮಾಗಳಿಗೆ ಯಾವ ರೀತಿಯ ಸಂಗೀತ ಬಳಸಿಕೊಂಡು ಮೂವಿ ಮಾಡಿದ್ದಾರೆ ಎಂದು ನೋಡಬಹುದು.

ಗೋಡೆಗಳ ಮೇಲೆ ಸಂಗೀತವನ್ನು ಪ್ರವರ್ಧಮಾನಕ್ಕೆ ತಂದ ವಿಶ್ವದ ಅನೇಕ ಸಂಗೀತಗಾರರ ಬಾವಚಿತ್ರಗಳೊಂದಿಗೆ ಅವರ ಪರಿಚಯವನ್ನು ಹಾಕಲಾಗಿದೆ.

ನಾವು ಇಲ್ಲಿ ಅನೇಕ ಸಂಗೀತ ಕಲಾ ಪ್ರಕಾರಗಳ ಹಾಡುಗಳನ್ನು ನಾವು ಹೆಡ್ ಪೋನ್ ಮುಕಾಂತರ ಕೇಳಬಹುದು ಮತ್ತು ಸ್ವತಃ ನಾವೇ ನಮ್ಮ ಧ್ವನಿಯ ಹಾಡುಗಳನ್ನು ರೆಕಾರ್ಡ್ ಮಾಡಿ ಕೇಳಿಸಿಕೊಳ್ಳಬಹುದು.

ಸಂಗೀತ ಪ್ರಿಯರಿಗಾಗಿ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರಿಯ ಸಂಗೀತ, ಭಕ್ತಿ ಸಂಗೀತ, ಹರಿದಾಸ ಪದಗಳು ಹಾಗು ಸಿನಿಮಾ ಹೀಗೆ ನೂರಾರು ವಿಡಿಯೋ ಹಾಗು ಆಡಿಯೋಗಳನ್ನು ಕಂಪ್ಯೂಟರ್ ಆಧಾರಿತ ಉಪಕರಣಗಳಿಂದ ವೀಕ್ಷಿಸಿಸಲು ಮತ್ತು ಕೇಳಬಹುದಾದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ದೇಶದ ಮೊದಲ ಹಾಗು ಏಕೈಕ ಮ್ಯೂಸಿಕ್ ಮ್ಯೂಸಿಯಂ ಇರುವುದು ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಎಂಬುದು ವಿಶೇಷ.

ಅದ್ಭುತ ಮ್ಯೂಸಿಕ್ ಲೋಕವನ್ನು ಪರಿಯಿಸುವ ಈ ಮ್ಯೂಸಿಮ್ ಗೆ ಜೀವನದಲ್ಲಿ ಒಂದು ಬಾರಿಯಾದರು ಬೇಟಿ ನೀಡಲೇಬೇಕಾದ ಸ್ಥಳ.

ವರದಿ: ಆನಂದ್ ಆರ್, ಮುಳಬಾಗಿಲು

Donate Janashakthi Media

Leave a Reply

Your email address will not be published. Required fields are marked *