ಬೆಂಗಳೂರು: ವಿಧಾನಸಭೆಯಲ್ಲಿ ಎರಡನೇ ದಿನದ ಕಲಾಪ ಶುಕ್ರವಾರ ಆರಂಭವಾಗಿದ್ದು, ಕಲಾಪದಿಂದ ಶಾಸಕ ಬಿ.ಕೆ.ಸಂಗಮೇಶ್ವರ್ ಅಮಾನತು ವಾಪಸ್ ಪಡೆಯಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಒಂದು ರಾಷ್ಟ್ರ– ಒಂದು ಚುನಾವಣೆ’ ಚರ್ಚೆಗೆ ವಿರೋಧಿಸಿ ವಿರೋಧ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದ್ದಾರೆ.
ನಿನ್ನೆ ‘ಸಂಗಮೇಶ್ವರ್ ಆಕ್ರೋಶದಲ್ಲಿ ಅಂಗಿ ಬಿಚ್ಚಿದರೇ ಹೊರತು ಬೆತ್ತಲೆ ಆಗಲಿಲ್ಲ. ಅವರ ಅಮಾನತು ವಾಪಸ್ ತೆಗೆದುಕೊಳ್ಳಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭಾಧ್ಯಕ್ಷ ಕಾಗೇರಿ ಅವರನ್ನು ಒತ್ತಾಯಿಸಿದರು.
ಒಂದು ರಾಷ್ಟ್ರ–ಒಂದು ಚುನಾವಣೆ ಚರ್ಚೆ ಆರಂಭಿಸಿರುವ ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ‘1967ರ ವರೆಗೂ ಒಂದು ರಾಷ್ಟ್ರ–ಒಂದು ಚುನಾವಣೆ ಪ್ರಕ್ರಿಯೆಯೇ ಇತ್ತು. ಆದರೆ, ಕಾಂಗ್ರೆಸ್ ಏಳು ರಾಜ್ಯಗಳ ಸರ್ಕಾರ ವಿಸರ್ಜನೆ ಮಾಡಿತು. ಅಲ್ಲಿಂದ ಒಂದೊಂದೆ ರಾಜ್ಯಗಳ ಚುವಾವಣೆ ಆರಂಭವಾಯಿತು’ ಎಂದು ಹಿಂದಿನ ಚುನಾವಣೆ ಪ್ರಕ್ರಿಯೆ ಬಗ್ಗೆ ವಿವರಿಸಿದಾಗ ಗದಲ್ಲ ಜೋರಾಗಿ ನಡೆಯಿತು. ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಕೂಗಲಾರಂಭಿಸಿದರು. ಗದ್ದಲದ ನಡುವೆಯೂ ಬೊಮ್ಮಾಯಿ ಮಾತು ಮುಂದುವರಿಸಿದರು.
ಇದನ್ನು ಓದಿ: ಅಧಿವೇಶನ ಸಂದರ್ಭದಲ್ಲಿ ಶಾಸಕ ಸಂಗಮೇಶ್ ಅನುಚಿತ ವರ್ತನೆ
ಕಾಂಗ್ರೆಸ್ ಶಾಸಕರು ಕೂಗು ಜೋರು ಮಾಡಿದರು. ಗೊಂದಲದ ವಾತಾವರಣ ಮುಂದುವರಿದಿದ್ದರಿಂದ ವಿಧಾನಸಭಾಧ್ಯಕ್ಷರಾದ ಕಾಗೇರಿ ಮತ್ತೆ ಸದನವನ್ನು ಮುಂದೂಡಿದರು. ಸೋಮುವಾರ ಬಜೆಟ್ ಮಂಡನೆ ಇದ್ದು ಈ ಎಲ್ಲಾ ಘಟನೆಗಳು ಬಜೆಟ್ ಚರ್ಚೆಯನ್ನು ದಾರಿ ಪತ್ತಿಸುವ ಹುನ್ನಾರ ಎದ್ದು ಕಾಣುತ್ತಿದೆ. ಬಜೆಟ್ ಮೇಲೆ ಹೆಚ್ಚು ಫೋಕಸ್ ಆಗದಿರಲಿ ಎಂದು ವಿನಾ ಕಾರಣ ಸರಕಾರ ಈ ರೀತಿಯ ಚರ್ಚೆಗಳನ್ನು, ಅಮಾನತ್ತನ್ನು ಮುಂದೆ ಮಾಡಿ ಶಾಸಕರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಆರೋಪಿಸಿದ್ದಾರೆ.