ಬೆಂಗಳೂರು| ಸ್ಯಾಂಡಲ್ ವುಡ್ ನಟ ಸಂತೋಷ್ ಬಾಲರಾಜ್ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಸಂತೋಷ್ ಬಾಲರಾಜ್ (34) ಅನಾರೋಗ್ಯದಿಂದ ಬಳಲುತ್ತಿದ್ದೂ, ಇದೀಗ ಅವರು ಆಗಸ್ಟ್‌ 5ರಂದು ನಿಧನರಾಗಿದ್ದಾರೆ.

ನಟ ಸಂತೋಷ್ ಬಾಲರಾಜ್ ಜಾಂಡಿಸ್ ನಿಂದ ಬಳಲುತ್ತಿದ್ದರು. ಇತ್ತೀಚಿಗೆ ಚಿಕಿತ್ಸೆಗಾಗಿ ಬೆಂಗಳೂರಿನ ಬನಶಂಕರಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.‌ ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಂಗಳೂರು

ಇದನ್ನೂ ಓದಿ: ಲಂಡನ್‌| ಇಂಗ್ಲೆಂಡ್‌ ವಿರುದ್ಧ ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ಕಿರಿಯ ವಯಸ್ಸಿಗೆ ಜಾಂಡೀಸ್​ನಿಂದ ನಟ ಸಂತೋಷ್ ಬಾಲರಾಜ್ ಬಳಲುತ್ತಿದ್ದರು. ಹೀಗಾಗಿ 34 ವಯಸ್ಸಿನ ನಟ ಸಂತೋಷ್ ಬಾಲರಾಜ್ ಕುಮಾರಸ್ವಾಮಿ ಲೇಔಟ್​ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ, ಜಾಂಡೀಸ್​ನಿಂದಾಗಿ ನಟ ಸಂತೋಷ್ ಕೋಮಗೆ ಹೋಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನಪ್ಪಿದ್ದಾರೆ.

2 ದಿನಗಳ ಹಿಂದೆ ಸಂತೋಷ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಂತೋಷ್ ಬೇಗ ಚೇತರಿಸಿಕೊಳ್ಳಲಿ ಅಂತ ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿತ್ತು. ಇನ್ನೂ, ಸಂತೋಷ್ ಬಾಲ್​ರಾಜ್ ಅಮ್ಮನ ಜೊತೆಗೆ ವಾಸವಾಗಿದ್ದರು. ನಟನ ಅಪ್ಪ ಅನೇಕಲ್ ಬಾಲರಾಜ್ ದರ್ಶನ್​ಗೆ ಕರಿಯ ಸಿನಿಮಾ ಮಾಡಿದ್ದರು. ಕರಿಯ-2 ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ಸಂತೋಷ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಇದನ್ನೂ ನೋಡಿ: ಸಿಯುಕೆ| ಶೈಕ್ಷಣಿಕ ಹತ್ಯೆ – ಪೊಲೀಸ್‌ ಬರುವ ಮುನ್ನವೇ ಕಾರ್ಪೆಂಟರ್‌ ಮೂಲಕ ಬಾಗಿಲು ಮುರಿದಿದ್ದು ಯಾಕೆ ? #CUK

Donate Janashakthi Media

Leave a Reply

Your email address will not be published. Required fields are marked *