ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್ – ಸಾವಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್

ಬೆಂಗಳೂರು: ‌ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್​ನ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ. ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಂಚಾರಿ ವಿಜಯ್​ ಅವರ ಮೆದುಳಿನ ಎಡ ಹಾಗೂ ಬಲ ಭಾಗಕ್ಕೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿದರೂ ಚಿಕಿತ್ಸೆ ಫಲಿಸದೆ ವಿಜಯ್​ ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಸ್ವಗ್ರಾಮ ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ಮಂಗಳವಾರ ಸಂಜೆ ವೇಳೆಗೆ ನಡೆಯಲಿದೆ.

ಅಂಗಾಂಗ ಕಸಿ ಕಾರ್ಯ ಮುಗಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಅಪೋಲೊ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಇದರಂತೆ ಆಸ್ಪತ್ರೆ ಹಾಗೂ ಪೊಲೀಸರ ಅಂತಿಮ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿಜಯ್‌ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನದ ನಂತರ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು. ವಿಜಯ್ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ : ಸಂಚಾರ ನಿಲ್ಲಿಸಿದ ಸ್ಯಾಂಡಲ್​ವುಡ್​ ನಟ ವಿಜಯ್

ಸಾವಿನಲ್ಲೂ ಸಾರ್ಥಕತೆ ಮೆರೆದು ಹಲವರ ಜೀವನಕ್ಕೆ ಬೆಳಕಾಗಿದ್ದಾರೆ : ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಅಂಗಾಂಗ ದಾನಗಳ ಮೂಲಕ ಹಲವರ ಜೀವನಕ್ಕೆ ಬೆಳಕಾಗಿದ್ದಾರೆ. ಸೋಮವಾರ ರಾತ್ರಿ 9.30 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ಸುಮಾರಿನವರೆಗೆ ವೈದ್ಯರೂ ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನು ಬೇರ್ಪಡಿಸಿದರು. ಬಳಿಕ ಅಂಗಾಂಗ ಕಸಿಗಾಗಿ ಜೀವನ್ಮರಣ ನಡುವೆ ಹೋರಾಟ ಮಾಡುತ್ತಿರುವ ಅದೇ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಸಿ ಮಾಡಲು ಕಳುಹಿಸಲಾಯಿತು.

ಯಕೃತ್ 1, ಕಿಡ್ನಿ 2, ಎರಡು ಕಣ್ಣು, ಶ್ವಾಸಕೋಶ ಹಾಗೂ ಹೃದಯ ಕವಾಟುಗಳನ್ನು ಬೇರೆಯವರಿಗೆ ಸರಿ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೀವನ ಸಾರ್ಥಕತೆ ಸಂಸ್ಥೆಯ ಡಾ.ನೌಷಾದ್ ಪಾಷ ಅವರು, ಸಂಚಾರಿ ವಿಜಯ್ ಅವರ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಫಾರಂ.10 ಹಾಗೂ ಫಾರಂ 8ರಲ್ಲಿ ಸಹಿ ಪಡೆದು ಕಾನೂನಾತ್ಮಕವಾಗಿ ಅಂಗಾಂಗ ಬೇರ್ಪಡಿಸಿ ಸಂಸ್ಥೆಯಲ್ಲಿ ನೋಂದಾವಣಿ ಮಾಡಿ ಕಾಯುತ್ತಿದ್ದವರಿಗಾಗಿ ಕಳುಹಿಸಲಾಗಿದೆ.

ಜುಲೈ 18, 1983ರಲ್ಲಿ ಪಂಚನಹಳ್ಳಿಯಲ್ಲಿ ಜನಿಸಿದ್ದ ವಿಜಯ್ ಇಂಜಿನಿಯರಿಂಗ್ ಪದವೀಧರರಾಗಿದ್ದರು. 2011ರಲ್ಲಿ ‘ರಂಗಪ್ಪ ಹೋಗ್ಬಿಟ್ನಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ‘ಸಂಚಾರಿ’ ತಂಡದ ವಿಜಯ್‌ ಅವರು, ‘ನಾನು ಅವನಲ್ಲ, ಅವಳು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ಒಗ್ಗರಣೆ’, ‘ಕಿಲ್ಲಿಂಗ್‌ ವೀರಪ್ಪನ್‌’, ‘ಸಿನಿಮಾ ಮೈ ಡಾರ್ಲಿಂಗ್‌’, ‘ರಿಕ್ತ’, ‘ನಾತಿಚರಾಮಿ’, ‘ಅವ್ಯಕ್ತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಚಾರಿ ವಿಜಯ್ ನಟಿಸಿದ್ದರು.‌

ಈ ವಿಡಿಯೋ ನೋಡಿ :  ನಮ್ಮ ಎದೆಯಲ್ಲಿ ಉಳಿಯುವ ಸಂಚಾರಿ ವಿಜಯ್‌ ರವರ ನೆನಪುಗಳುನೆನಪಿನ

Donate Janashakthi Media

Leave a Reply

Your email address will not be published. Required fields are marked *