ತುಮಕೂರು: ಜನಪರ ಚಳುವಳಿಗಳಿಗೆ ಸಾಮೂಹಿಕ ನಾಯಕತ್ವ ಅತ್ಯಗತ್ಯವಾಗಿದೆ. ಏಕವ್ಯಕ್ತಿ ಎಷ್ಟೇ ಸಮರ್ಥನಾಗಿದ್ದರು ಅದು ಸಾಮೂಹಿಕ ಕೆಲಸಕ್ಕೆ ಸರಿಸಮಾನಾಗಲಾರದು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಮುಖಂಡ ಕೆ.ಎನ್.ಉಮೇಶ್ ಹೇಳಿದರು.
ಸಿಐಟಿಯು ಸಂಘಟನೆ ವತಿಯಿಂದ ಕನ್ನಡ ಭವನದಲ್ಲಿ ನಡೆದ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎನ್.ಉಮೇಶ್ ಅವರು ಇಂದು ಸಮಾಜದಲ್ಲಿ ದುಡಿವ ಜನರ ಐಕ್ಯತೆಯನ್ನು ಛಿದ್ರಗೊಳಿಸಿ ಬಹು ರಾಷ್ಟ್ರೀಯ ಕಂಪನಿಗಳ-ಬಂಡವಾಳಗಾರರ ಲಾಭವನ್ನು ಖಾತ್ರಿಪಡಿಸುತ್ತಿರುವ ಸರ್ಕಾರಗಳು ಜನತೆಯ ಲೂಟಿಗೆ ಇಳಿದಿವೆ. ಇದರ ವಿರುದ್ಧ ವಿಶಾಲ ತಳಹದಿಯ ಹೋರಾಟಗಳು ಇಂದಿನ ಅಗತ್ಯವೆಂದು ಪ್ರತಿಪ್ರತಿಪಾಧಿಸಿದರು.
ತುಮಕೂರಿನಲ್ಲಿ ವಿದ್ಯಾರ್ಥಿ ಚಳುವಳಿ-ಸಾಮಾಜಿಕ ಚಳುವಳಿಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದ ಹಲವು ವಿಚಾರಗಳನ್ನು ಹಾಗೂ ಅವರ ಅನುಭವಗಳನ್ನು ಹಂಚಿಕೊಂಡರು.
ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ|| ಕೆ ಹೇಮಲತಾ ಮಾತನಾಡಿ ಕಾರ್ಮಿಕ ವರ್ಗದ ಮೇಲೆ ಹೆಚ್ಚಾಗುತ್ತಿರುವ ದಬ್ಬಾಳಿಕೆಗಳಿಗೆ ಜನತೆಯ ಪ್ರತಿರೋಧದಿಂದ ಮಾತ್ರವೇ ಕೊನೆಗೊಳಿಸಲು ಸಾಧ್ಯ. ಹಾಗಾಗಿ ಜನತೆ ಸರ್ಕಾರದ ನೀತಿಗಳ ಹಿಂದಿರುವ ರಾಜಕಾರಣವನ್ನು ಅರಿತು ವಿವೇಕವನ್ನು ತೋರಬೇಕಾಗಿದೆಂದು ಕರೆ ನೀಡಿದರು.
ಬಿಳ್ಳೋಡಿಗೆ ನುಡಿಗಳನ್ನು ಅಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ ಚಳುವಳಿಗಳಲ್ಲಿ ದುಡಿವ ಬದ್ದತೆಯಿಂದ ಕಾರ್ಯನಿರ್ವಹಣೆ ಸಮಾನತೆಯ ಅಶಯದೊಂದಿಗೆ ಚಳುವಳಿಯಲ್ಲಿ ದುಡಿವವರಿಗೆ ಅಗತ್ಯ ಎಂದ ಅವರು, ಸಂಗಾತಿ ಕೆ.ಎನ್. ಉಮೇಶ್ ಅವರಲ್ಲಿ ಕಾರ್ಯತತ್ಪರತೆ-ಕ್ರಿಯಾಶೀಲತೆ-ಅಧ್ಯಯನ ಶೀಲತೆಗಳೂ ಅನುಕರಣೀಯ ಎಂದರು.
ಆಥಿತಿಗಳಾಗಿ ಭಾಗವಹಿಸಿದ್ದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ||ಕೆ. ಪ್ರಕಾಶ್, ಹೆಚ್.ಎನ್.ಗೋಪಾಲ್ ಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್, ಪ್ರತಾಪ್ ಸಿಂಹ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಖಜಾಂಚಿ ಎ.ಲೋಕೇಶ್ ವೇದಿಕೆಯಲ್ಲಿ ಇದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ವಹಿಸಿದ್ದರು.
ಎಸ್‌ಎಸ್‌ಎಲ್‌ಸಿ ಸಾಧಕರಾದ ನವ್ಯ.ಕೆ ಹಾಗೂ ಮಧು ಅವರಿಗೆ ಸನ್ಮಾನ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಗ ಗಳಿಸಿ ಸಾಧಕರಾಗಿರುವ ಪೌರ ಕಾರ್ಮಿಕರ ಮಕ್ಕಳಾದ ಕುಮಾರಿ ನವ್ಯ .ಕೆ-623 ಅಂಕಗಳಿಸಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಮಧು 458 ಅಂಕಗಳನ್ನು ಗಳಿಸಿದ ಮಧು ಅವರಿಗೆ ಸಿಐಟಿಯುನ ರಾಷ್ಟೀಯ ಅಧ್ಯಕ್ಷೆ ಡಾ|| ಕೆ.ಹೇಮಲತಾ ಹಾಗೂ ರಾಜ್ಯ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅಭಿನಂದಿಸಿದರು. ತಲಾತಲಾಂತರದಿಂದ ಸಫಾಯಿ(ಪೌರ) ಕಾರ್ಮಿಕರಾಗಿ ಇರುವ ಕುಟುಂಬದ ಮೊದಲ ತಲೆಮಾರಿನ ಅಕ್ಷರಸ್ಥರಾಗಿ ಈ ಇಬ್ಬರ ಸಾಧನೆಯನ್ನು ಇಡೀ ಸಭೆ ತುಂಬುಹೃದಯದಿಂದ ಅಭಿನಂದನೆ ಸಲ್ಲಿಸಿತು.
ಅಭಿನಂದನೆ ಸ್ವೀಕರಿಸಿದ ಕುಮಾರಿ ನವ್ಯ. ಕೆ ಮಾತನಾಡಿ ಕಠಿಣ ಶ್ರಮವಹಿಸಿದ್ದಕ್ಕೆ ಅತ್ಯುತ್ತಮವಾದ ಯಶಸ್ಸು ದಕ್ಕುತ್ತದೆ ಎಂದಳು. ಮಧು ಮಾತನಾಡಿ ನಮ್ಮ ಯಶಸ್ಸಿಗೆ ಪೋಷಕರ ಪ್ರೋತ್ಸಾಹವೇ ಕಾರಣವೆಂದು ನೆನೆದನು.