ಸಂಭಲ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿಯ ವ್ಯವಸ್ಥಿತ ಪಿತೂರಿ ಕಾರಣ: ಅಖಿಲೇಶ್ ಯಾದವ್‌

ಹೊಸದಿಲ್ಲಿ: ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಾಲಯವೊಂದು ಆದೇಶಿಸಿದ ನಂತರದಲ್ಲಿ, ಸಂಭಲ್ ನಲ್ಲಿ ನಡೆದ ಹಿಂಸಾಚಾರಕ್ಕೆ ಬಿಜೆಪಿಯ ವ್ಯವಸ್ಥಿತ ಪಿತೂರಿ ಕಾರಣ ಎಂದು ಮಂಗಳವಾರ ಸಮಾಜವಾದಿ ಪಕ್ಷದ ಮುಖ್ಯಸ್ತ ಅಖಿಲೇಶ್ ಯಾದವ್‌ ಆರೋಪಿಸಿದರು.

ಈ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕನೌಜ್ ಲೋಕಸಭಾ ಕ್ಷೇತ್ರದ ಸಂಸದರೂ ಆದ ಅಖಿಲೇಶ್ ಯಾದವ್‌, ಸಂಭಲ್ ನ ಹಿಂಸಾಚಾರಕ್ಕೆ ಪೊಲೀಸರು ಹಾಗೂ ಜಿಲ್ಲಾಡಳಿತ ಜವಾಬ್ದಾರಿಯಾಗಿದ್ದು, ಈ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಈ ಸಂಬಂಧ ಅಧಿಕಾರಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ ಸಮಸ್ಯೆ ಪರಿಹಾರಕ್ಕಾಗಿ ಉನ್ನತ ಶಿಕ್ಷಣ ಸಚಿವರಿಗೆ ಎಸ್ಎಫ್ಐ ನಿಯೋಗ ಮನವಿ

“ಸಂಭಲ್ ನಲ್ಲಿ ನಡೆದ ಹಿಂಸಾಚಾರವು ವ್ಯವಸ್ಮಿತ ಪಿತೂರಿಯಾಗಿದೆ. ನವೆಂಬರ್ 13ರಂದು ನಡೆಯಬೇಕಿದ್ದ ಉತ್ತರ ಪ್ರದೇಶ ಉಪ ಚುನಾವಣೆಗಳನ್ನು ನವೆಂಬರ್ 20ಕ್ಕೆ ಮುಂದೂಡಲಾಯಿತು. ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಇದು ಲಕ್ಕೂ ಮತ್ತು ದಿಲ್ಲಿ ನಡುವಿನ ಹೋರಾಟ” ಎಂದು ಅವರು ಹೇಳಿದರು.

ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ನವೆಂಬರ್ 13ಕ್ಕೆ ನಿಗದಿಗೊಳಿಸಲಾಗಿತ್ತಾದರೂ, ನಂತರ, ನವೆಂಬರ್ 20ಕ್ಕೆ ಮುಂದೂಡಲಾಗಿತ್ತು.

ಇದನ್ನೂ ನೋಡಿ : ಕಷ್ಟದಲ್ಲಿರುವ ಕನ್ನಡವನ್ನು ಸಂರಕ್ಷಿಸೋಣ Janashakthi Media

Donate Janashakthi Media

Leave a Reply

Your email address will not be published. Required fields are marked *