ಸಮರ್ಪಣೆಯ ಸಮಯ

 

ಲಾಂಗರ್ಗಳು ಇಲ್ಲಿ ಬಡಿಸುವ ಊಟಗಳಷ್ಟೇ ವೈವಿಧ್ಯಪೂರ್ಣವಾಗಿವೆ ಹಾಗೂ ದೈನಿಕದ ಅಗತ್ಯಗಳೆಲ್ಲ ಪ್ರತಿ ಹೊಸ ದಿನ ಹೊಸತಾಗಿ ನಿರ್ಧರಿತವಾಗುತ್ತವೆ; ಹೆದ್ದಾರಿಗುಂಟಡೀಸಲ್ ಲಾಂಗರ್ಗಳು: ಯುನೈಟೆಡ್ ಸಿಖ್ಖ ಸಂಸ್ಥೆಯಡೇರೆ ಮತ್ತುತಾಡಪತ್ರೆ ಲಾಂಗರ್ಗಳು; ದೈನಿಕದ ಅಗತ್ಯಗಳಿಗಾಗಿ ಖಾಲ್ಸಾ ಏಯ್ಡ್ಸ್ನವರ ಕಿಸಾನ್ ಮಾಲ್ಗಳು; ದಿಲ್ಲಿ ಗುರುದ್ವಾರ ಆಡಳಿತ ಸಮಿತಿಯವರ ರಾತ್ರಿ ವಸತಿ ಬಸ್ ಲಾಂಗರ್ಗಳು; ಕಬಡ್ಡಿ ತಂಡವೊಂದರ ಸೇವೆಯಾಗಿ ಬಟ್ಟೆ ಒಗೆದುಕೊಡುವ ಲಾಂಗರ್ಗಳು; ನ್ಯೂಜೆರ್ಸಿಯಿಂದ ಬಂದ ಹೃದ್ರೋಗತಜ್ಞನೂ ಇರುವ ವೈದ್ಯಕೀಯ ಲಾಂಗರ್ಗಳು; ಕಾರ್ಯಕರ್ತರು ಹಾಗೂ ಸಿನೆಮಾ ನಿರ್ಮಾಪಕರು ಪ್ರಕಟಿಸುವಟ್ರೊಲಿ ಟೈಮ್ಸ್ಎಂಬ ಬಹುಭಾಷಿಕ ವೃತ್ತಪತ್ರಿಕೆ…. ಎಲ್ಲ ಸ್ವಯಂ ಸೇವಕರು ರೈತರು, ವ್ಯಾಪಾರಿಗಳು ಹಾಗೂ ಭೂರಹಿತರನ್ನು ಸದುದ್ದೇಶದ ಶಾಂತಿಧಾಮಗಳಲ್ಲಿ ಒಗ್ಗೂಡಿಸುತ್ತಿವೆ.

ಮೊದಲ ಗುರು ನಾನಕರ ಹೆಸರಿನಿಂದ ಕರೆಯಲಾಗುವ ನಾನಕ್ಶಾಹಿ ಪಂಚಾಂಗದ ಪ್ರಕಾರ ನಾವೀಗ ಚಳಿಗಾಲದ ಪರಾಕಾಷ್ಠೆಯಾದ ಪೋಹ್ ತಿಂಗಳಿನಲ್ಲಿದ್ದೇವೆ. ಹತ್ತನೆಯ ತಿಂಗಳು ಪ್ರತಿವರ್ಷ ಡಿಸೆಂಬರ್ ಹದಿನಾಲ್ಕರ ಸುಮಾರಿಗೆ ಶುರುವಾಗಿ ಮುಂದಿನ ಮೂವತ್ತು ದಿನಗಳವರೆಗೆ ಇರುತ್ತದೆ. ಆಮೇಲೆ ಋತುಗಳು ಬದಲಾಗುತ್ತವೆ; ಬೆಳಕು ಮತ್ತೆ ಹೊರಹೊಮ್ಮುತ್ತದೆ.

ಹೋರಾಟದ ಕಾಲವಾದ ಪೋಹ್ ದೀರ್ಘವಾದ ಹಿಮಾವೃತ ರಾತ್ರಿಗಳೊಂದಿಗೆ ಕೊನೆಯಾಗುವ ಚಳಿಗಾಲದಿಂದ ಪಾರಾಗಿ ಪ್ರತಿಫಲವನ್ನು ದೊರಕಿಸಿಕೊಳ್ಳುತ್ತದೆ. ನಾವು ಬದ್ಧರಾಗಿರುವ ಉದ್ದೇಶಕ್ಕೆ ಬೇಕಾಗಿ ಶಹಾದತೈನ್ಅಥವಾ ಹುತಾತ್ಮತೆ ಸಹ ಸ್ವೀಕಾರಾರ್ಹ. ಹತ್ತಿರ ಬಂದಿದ್ದು ಗುರು ಗೋವಿಂದಸಿಂಗ್ ಜನ್ಮದಿನ. ಪ್ರಕೃತಿಯಲ್ಲಿ ನವಚೈತನ್ಯ ತುಂಬುತ್ತದೆ.

ಅಂದು….. ಮುನ್ನೂರು ವರ್ಷಗಳ ಹಿಂದೆ ಮಚ್ಚಿವಡದಲ್ಲಿ ಗುರುಗೋವಿಂದ ಸಿಂಗರು ತಮ್ಮ ಸೈನಿಕರನ್ನೂ ತಮ್ಮಇಬ್ಬರು ಮಕ್ಕಳನ್ನೂ ಕಳೆದುಕೊಂಡು ಕಾಡಿಗೆ ಹಿಮ್ಮೆಟ್ಟಿದ್ದು ಸಹ ಪೋಹ್ ತಿಂಗಳಲ್ಲೇ. ಅವರ ಇಬ್ಬರು ಸಾಹಿಬ್ಜಾದಗಳುಅಜಿತ್ ಸಿಂಗ್ ಮತ್ತು ಜುಜಾರ್ ಸಿಂಗ್ಯುದ್ಧದಲ್ಲಿ ಹುತಾತ್ಮರಾದಾಗ ಅದು ಎಂಟನೆಯ ಪೋಹ್ಅಥವಾ ಸರಿಸುಮಾರು ಡಿಸೆಂಬರ್ಇಪ್ಪತ್ತೊಂದು. ಅವರ ಪಠಾಣ ಭಕ್ತರು ಅವರನ್ನು ತಮ್ಮ ಗುರು ಎಂಬ ಸೋಗಿನಲ್ಲಿ ಸುರಕ್ಷಿತ ತಾಣಕ್ಕೆ ಕರೆದೊಯ್ದರು. ಮಚ್ಚಿವರದಲ್ಲಿ ಸಂತಸೈನಿಕ ತಮ್ಮ ದುಗುಡವನ್ನೆಲ್ಲ ಸೃಷ್ಟಿಕರ್ತನಿಗೆ ನಿವೇದಿಸಿಕೊಂಡ: “ಮಿತ್ತರ್ ಪ್ಯಾರೆನು, ಹಾಲ ಮುರೀದೀನ್ದಾಕೆಹ್ನಾ

ನಿನ್ನನುಯಾಯಿಗಳಿಗೆಲ್ಲ ನಮ್ಮದೇ ಪಾಡು
ನೀನಿಲ್ಲದೆ ಮನೆಯು ಸರ್ಪಗಳ ಗೂಡು
ಬೆಚ್ಚಗಿನ ಹೊದಿಕೆಯಾ ಹೊತ್ತಂತೆಕೇಡು
ನೀನಿದ್ದರೆ ಸಾಕು ಶಿಲೆಯ ಮೆತ್ತೆ
ಸುಪ್ಪತ್ತಿಗೆಯಾಗುವುದು ಮನ ತಣಿಸಿ ಮತ್ತೆ

ಗುರುಗೋವಿಂದ ಸಿಂಗರು ತಮ್ಮಆತ್ಮೀಯನಿಗೆ ಸಲ್ಲಿಸಿದ ಮನವಿಯು ಬಹುಶಃ ಇಂದು ಪಂಜಾಬಿನ ರೈತರ ಮನಸ್ಸಿನಲ್ಲಿ ಮತ್ತಷ್ಟು ಮಂದ್ರವಾಗಿ ಅನುರಣಿಸುತ್ತಿದೆ; ಸ್ಪೂರ್ತಿ ನೀಡುತ್ತಿದೆ. ಇಬ್ಬರೂ ಸ್ವಇಚ್ಛೆಯಿಂದಲೇ ನೆಮ್ಮದಿಯ ಮನೆ ತೊರೆದು ಪ್ರತಿಕೂಲಗಳ ನಡುವಿನ ಅನಿಶ್ಚಿತ ಬದುಕು ಆಯ್ದುಕೊಂಡರು.

ಇದೂಕೂಡ ಪೋಹ್ ತಿಂಗಳೇ. ನವೆಂಬರ್ಇಪ್ಪತ್ತೆಂಟರಿಂದ ಪಂಜಾಬಿನ ರೈತರುಟ್ರಾಕ್ಟರ್ ಮತ್ತು ಟ್ರೊಲಿಗಳಲ್ಲಿ ದೆಹಲಿಯ ಹೊರವಲಯದತ್ತ ಮುಂಬರಿದರು. ಸಂಭವನೀಯ ಕೃಷಿ ಬಿಕ್ಕಟ್ಟು ಎಂದು ಯಾವುದನ್ನು ಈಗ ಒಪ್ಪಿಕೊಳ್ಳುತ್ತಿದ್ದೇವೊ ಅದಕ್ಕಾಗಿಯೇ ಅವರು ಒಟ್ಟಿಗೆ ಬಂದಿದ್ದುತಡೆಗೋಡೆಗಳನ್ನು ದಾಟಿ. ಟ್ರೋಲಿಗಳು ಮತ್ತು ಡೇರೆಗಳ ಪಟ್ಟಣಗಳೇ ಹುಟ್ಟಿಕೊಂಡವುತುರ್ತು ಜನವಸತಿ ನಿರ್ಮಾಣದ ಎಲ್ಲ ದಾಖಲೆಗಳನ್ನೂ ಮುರಿದು.

ರಬಾಬ್ಆಟಗಾರ ಮರ್ದನನು ನಾನಕರಿಗೆ ಜೊತೆಯಾಗಿದ್ದಂತೆ ಪೋಹ್ಗೆ ನಿರಂತರ ಒಡನಾಡಿಯಾದ ತೀವ್ರ ಚಳಿ ಮಾತ್ರ ಹಿಮ್ಮೆಟ್ಟದೇ ಉಳಿದಿದೆ. ಕಳೆದ ನೂರೈವತ್ತು ವರ್ಷಗಳಲ್ಲೇ ಅತ್ಯಂತ ಕ್ರೂರವಾದ ಡಿಸೆಂಬರನ್ನು ಹಿಂಬಾಲಿಸಿ ಬಂದಿದ್ದು ಅಭೂತಪೂರ್ವ ಜನೆವರಿಯ ತಾಪಮಾನ. ದೆಹಲಿಯ ಹೆದ್ದಾರಿಗುಂಟ ಹಲವು ಕಿಲೋಮೀಟರ್ಗಳಷ್ಟು ಉದ್ದದ ಟ್ರಾಕ್ಟರ್ ಟ್ರೊಲಿಗಳ ಹಾಗೂ ಗುಡಾರಗಳ ಪಟ್ಟಣದಲ್ಲಿ ನೆಲೆನಿಂತ ನಿವಾಸಿಗಳ ಸಂಕಲ್ಪವೂ ಅಚಲವಾಗಿದೆ.

 

ಸ್ವಇಚ್ಛೆಯಿಂದ ಪಂಜಾಬಿನ ಮನೆಯ ನೆಮ್ಮದಿಯನ್ನು ಹೆದ್ದಾರಿಯ ಬದುಕಿನ ಕಾರ್ಪಣ್ಯಕ್ಕೆ ವಿನಿಮಯ ಮಾಡಿಕೊಂಡ ಪ್ರತಿಭಟನೆಯ ನಲವತ್ತೇಳನೆಯ ದಿನದ ಹೊತ್ತಿಗೆ ಕಳೆದುಹೋದ ಹಲವು ಜೀವಗಳಿಗೆ ಶ್ರದ್ದಾಂಜಲಿ ಅರ್ಪಿಸಿಯಾಗಿದೆ. ರಕ್ತನಾಳಗಳು ಮತ್ತು ಅಪಧಮನಿಗಳ ಜೀವಸತ್ವ ಹಿಂಡಿಹೋಗಿದೆ– ‘ಗುರುಗ್ರಂಥ ಸಾಹೇಬ ಪೋಹ್ ಪೀಠಿಕೆಯಲ್ಲಿ ಗುರು ನಾನಕರು ವರ್ಣಿಸಿರುವ ಕಾಡುಗಳು ಮತ್ತು ಮರಗಳಂತೆ: “ಪೋಖಿತುಖರುಪಾರ್ಯಾ ವನು ತ್ರಿನುರಾಸು ಸೊಖೈ” (ಕೊರೆವ ಚಳಿಗಾಲದಲ್ಲಿ ಪೋಹ್ ಅಡವಿಗಳ ಹುಲ್ಲುಗಳ ರಸ ಬತ್ತಿಸುತ್ತದೆ).

ಭೌಗೋಳಿಕವಾಗಿ, ಚಾರಿತ್ರಿಕವಾಗಿ ಅಥವಾ ತಾತ್ತ್ವಿಕವಾಗಿ ಹೊಲಗಳು ಮತ್ತು ಮನೆಗಳ ಸುರಕ್ಷಿತತೆಗಾಗಿನ ಹೋರಾಟದಲ್ಲಿ ಪಂಜಾಬಿನ ಕೃಷಿ ಸಮುದಾಯವನ್ನು ಮುಂಚೂಣಿಗೆ ತರುವ ಒತ್ತಾಸೆ ಯಾವುದು? “ನಮ್ಮ ಜಮೀನುಗಳನ್ನು ಕಸಿದುಕೊಂಡು ಹೋಗುತ್ತಿರುವಾಗ ನೀವೆಲ್ಲಿದ್ದೀರಿ?” ಎಂದು ನಮ್ಮ ಮಕ್ಕಳು ಕೇಳುವಾಗ ಅವರನ್ನು ನಾವು ಎದುರಿಸುವುದಾದರೂ ಹೇಗೆ? ನಾವು ಕಿಸಾನರೇ ಜವಾನರಿಗೆ ಜನ್ಮ ನೀಡುವವರು.

ಆದರೂ ಬಳಸಲಾದ ಅನುಕೂಲ ಸಿಂಧು ಹಣೆಚೀಟಿಖಲಿಸ್ಥಾನಿ” – ಸಮುದಾಯವೊಂದನ್ನು ದುರ್ಬಲಗೊಳಿಸುವ ಹೀನಾಯಿಸುವ ಗುರಿಹೊತ್ತ ಹಣೆಚೀಟಿ. ಆದರೆ ದುಷ್ಕøತ್ಯವು ಚೈತನ್ಯವನ್ನು ಉತ್ತೇಜಿಸಿದೆತಮ್ಮ ಜಮೀನಿನ ಸಂರಕ್ಷಣೆಯಲ್ಲಿ ನಿರತವಾದ ಸಾಮಥ್ರ್ಯಕ್ಕೆ ಗಾಂಭೀರ್ಯ ಮತ್ತು ಝಮೀರ್ಅಥವಾ ಅಂತಃಸಾಕ್ಷಿಯ ನೈತಿಕ ಬಲವನ್ನು ತುಂಬುವಂತೆ ಪಡೆಗಳ ಕೆಲವು ವಿಭಾಗಗಳಲ್ಲೂ ಸಹ.

ಐದು ಶತಮಾನಗಳಿಂದಲೂ ವಿಶ್ವದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಮತ್ತುಅಭಿವೃದ್ಧಿ ಹೊಂದುತ್ತಿರುವ ಲಾಂಗರ್ಗಳಿಗೆ (ಅನ್ನದಾಸೋಹ) ಹಣಕಾಸು ಒದಗಿಸುವುದನ್ನು ಯಾರೂ ಏಕೆ ಪ್ರಶ್ನಿಸುವುದಿಲ್ಲಎಂಬುದು ಅನಿವಾಸಿ ಭಾರತೀಯನೊಬ್ಬನ ಪ್ರಶ್ನೆ. ಬುರಾರಿಯಲ್ಲಿ ಅವಳು ಹೆದ್ದಾರಿ ವಿಭಾಜಕಗಳ ಕಡೆತಲೆ ಬಾಗಿಸುತ್ತಾಳೆ. ಅಲ್ಲಿ ಅವಳ ಜನರು ಇದೀಗ ಈರುಳ್ಳಿ ಬೀಜಗಳನ್ನು ಬಿತ್ತಿದ್ದಾರೆ. ಸಾವಯವ ಕೃಷಿಯ ಇಳುವರಿಯನ್ನು ನೂರಕ್ಕೂ ಹೆಚ್ಚು ಸಮುದಾಯ ಅಡಿಗೆ ಮನೆಗಳಿಗೆ ಹಂಚಲಾಗುತ್ತದೆ. “ಅಡಿಗೆಯವಳು ಮತ್ತು ಸ್ವಯಂಸೇವಕರು ಬಕೆಟ್ಗಳ ತುಂಬದಾಲ್ ಮತ್ತು ಖೀರನ್ನು ಒಯ್ಯುತ್ತಿದ್ದಾರೆ, ಯುದ್ಧ ಸಾಮಗ್ರಿಗಳನ್ನಲ್ಲ”, ಇನ್ನೊಬ್ಬ ರೈತ ನಮಗೆ ನೆನಪಿಸುತ್ತಾನೆ.

ಲಾಂಗರ್ಗಳು ಇಲ್ಲಿ ಬಡಿಸುವ ಊಟಗಳಷ್ಟೇ ವೈವಿಧ್ಯಪೂರ್ಣವಾಗಿವೆ ಹಾಗೂ ದೈನಿಕದ ಅಗತ್ಯಗಳೆಲ್ಲ ಪ್ರತಿ ಹೊಸ ದಿನ ಹೊಸತಾಗಿ ನಿರ್ಧರಿತವಾಗುತ್ತವೆ; ಹೆದ್ದಾರಿಗುಂಟ ಡೀಸಲ್ ಲಾಂಗರ್ಗಳು: ಯುನೈಟೆಡ್ ಸಿಖ್ಖ ಸಂಸ್ಥೆಯ ಡೇರೆ ಮತ್ತುತಾಡಪತ್ರೆ ಲಾಂಗರ್ಗಳು; ದೈನಿಕದ ಅಗತ್ಯಗಳಿಗಾಗಿ ಖಾಲ್ಸಾಏಯ್ಡ್ಸ್ನವರ ಕಿಸಾನ್ ಮಾಲ್ಗಳು; ದಿಲ್ಲಿ ಗುರುದ್ವಾರ ಆಡಳಿತ ಸಮಿತಿಯವರ ರಾತ್ರಿ ವಸತಿ ಬಸ್ ಲಾಂಗರ್ಗಳು; ಕಬಡ್ಡಿ ತಂಡವೊಂದರ ಸೇವೆಯಾಗಿ ಬಟ್ಟೆಒಗೆದುಕೊಡುವ ಲಾಂಗರ್ಗಳು; ನ್ಯೂಜೆರ್ಸಿಯಿಂದ ಬಂದ ಹೃದ್ರೋಗ ತಜ್ಞನೂ ಇರುವ ವೈದ್ಯಕೀಯ ಲಾಂಗರ್ಗಳು; ಕಾರ್ಯಕರ್ತರು ಹಾಗೂ ಸಿನೆಮಾ ನಿರ್ಮಾಪಕರು ಪ್ರಕಟಿಸುವಟ್ರೊಲಿ ಟೈಮ್ಸ್ಎಂಬ ಬಹುಭಾಷಿಕ ವೃತ್ತಪತ್ರಿಕೆ. ಎಲ್ಲ ಸ್ವಯಂ ಸೇವಕರು ರೈತರು, ವ್ಯಾಪಾರಿಗಳು ಹಾಗೂ ಭೂರಹಿತರನ್ನು ಸದುದ್ದೇಶದ ಶಾಂತಿಧಾಮಗಳಲ್ಲಿ ಒಗ್ಗೂಡಿಸುತ್ತಿವೆ. ಶತಮಾನಗಳಿಂದ ಪ್ರದರ್ಶಿಸುತ್ತಿರುವ ಗಡಿರಕ್ಷಣೆಯೇ ಆಗಿರಲಿ ಅಥವಾ ಇದು ರೈತರು ಸರಳವಾಗಿ ಕರೆಯುತ್ತಿರುವಕಪ್ಪು ಕಾನೂನುಆಗಿರಲಿ, ಪೋಹ್ ಸುರಿಸುವ ಮಳೆ ಹಾಗೂ ಮಂಜು ಯಾವುದೂ ನಿರ್ಧಾರವನ್ನು ಕುಂದಿಸಿಲ್ಲ. ಸರ್ದಾರ್ ದಿಲ್ಬಾಗ್ ಸಿಂಗ್ ಸೈಕಲ್ ಮೇಲೆ ಟಾರ್ನ್ಟಾರ್ನ್ನಿಂದ ಲಾಂಗರ್ಗೆ ನೂರುರೂಪಾಯಿ ದೇಣಿಗೆ ನೀಡಲು ಬಂದ. ಅರವತ್ತೆರಡು ವರ್ಷದ ಮನ್ಜೀತ್ಕೌರ್ ಪಟಿಯಾಲದಿಂದ ಜೀಪ್ತುಂಬ ಮಹಿಳೆಯರನ್ನು ಕರೆತಂದಳು.

ಬಹುರಾಷ್ಟ್ರೀಯ ಔಷಧ ಕಂಪನಿಗಳು ಹೆಚ್ಚು ಪರಿಣಾಮಕಾರಿಯಾದ ವೈದ್ಯಕೀಯ ಲಸಿಕೆ ತಯಾರಿಸಲು ಸ್ಪರ್ಧೆಯಲ್ಲಿರುವಾಗ ದೃಢ ನಿಶ್ಚಯದ ವೃದ್ಧರುನಾವು ರೈತರು ಭೂ ಕಬಳಿಕೆ ಸಾಂಕ್ರಾಮಿಕಕ್ಕೆ ಲಸಿಕೆಎಂದು ಘೋಷಿಸುತ್ತಾರೆ.

ಪೋಹ್ ಮಧ್ಯರಾತ್ರಿಯ ಆಕಾಶದ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಲಾದ ಪ್ರತಿವಿಷದ ಸಾರ್ವಜನಿಕ ಘೋಷಣೆಯು ಪ್ರತಿಧ್ವನಿಗಳನ್ನು ಕಂಡುಕೊಳ್ಳುತ್ತಿದೆ. ಅವರ ಹೋರಾಟ ಈಗ ಪಂಜಾಬ್ ರೈತರ ಪ್ರತಿಭಟನೆಯಿಂದ ರಾಷ್ಟ್ರೀಯ ಕೃಷಿ ಚಳುವಳಿಯಾಗಿ ಪದೋನ್ನತಿ ಪಡೆದಿದೆಯೇ? ಭೂ ಲಾಕ್ಡೌನ್ನಲ್ಲಿ 1905 ಪಗ್ರಿ ಸಂಭಾಲ್ಜಟ್ಟಾ” (ರೈತರೇ ನಿಮ್ಮ ಮುಂಡಾಸು ರಕ್ಷಿಸಿಕೊಳ್ಳಿ) ಚಳುವಳಿಯ ತ್ಯಾಗ ಮತ್ತು ವಿಜಯದ ಫಲಕವನ್ನು ಪಂಜಾಬ್ ರೈತರು ಉಳಿಸಿಕೊಳ್ಳುವರೇ? ಮತ್ತೊಮ್ಮೆಅವರು ರಕ್ಷಣೆಯ ಮೊದಲ ಸಾಲಿನಲ್ಲಿ ನಿಂತಿದ್ದಾರೆದೇಶದ ವಿವಿಧ ಮೂಲೆಗಳಿಂದ ಬಂದ ಸುಮಾರು ನಲವತ್ತು ರೈತ ಸಂಘಟನೆಗಳನ್ನು ಒಟ್ಟುಗೂಡಿಸಿರುವ ಮುಂಚೂಣಿಯ ಸರದಾರರು. ಇಲ್ಲ, ಅವರನ್ನು ಒಡೆಯಲಾಗುವುದಿಲ್ಲ.

ಜೋಶ್ಅಥವಾಚಾರ್ಡಿ ಕಾಲಾ ವೈರಸ್ ಸಾಂಕ್ರಾಮಿಕವಾಗಿದೆ. ಗೀತ ರಚನಾಕಾರಗಾಯಕರಾದ ಕನ್ವರ್ಗ್ರೆವಾಲ್ ಮತ್ತು ಹಾರ್ಫ್ತಮ್ಮ ಗುರುವಿನ ಬಗೆಯಲ್ಲೇಪ್ರಿಯ ಮಿತ್ರನಿಗೆ ಪ್ರತಿಕ್ರಿಯಿಸುತ್ತಾರೆ. ಅವರು ದೆಹಲಿಯ ಹೆದ್ದಾರಿಗಳು ಮತ್ತು ವಿಭಾಜಕಗಳನ್ನು ಸೆರೆಹಿಡಿಯುತ್ತಾರೆ. ಅಲ್ಲಿಯ ನಿವಾಸಿಗಳನ್ನೂ ಸಹಿತ. ಅವರೂ ಸಹ ಸ್ವಇಚ್ಛೆಯಿಂದಲೇ ಅನಿಕೇತನರಾದವರು : “ದಿಲ್ಲಿಯ ಗಡಿಗಳಲ್ಲಿ ಅಲ್ಲಾಹನ ಆಶೀರ್ವಾದದ ಮಳೆ ಸುರಿಯಲಿ…… ನಮಗೆ ಬೀದಿಗಳೇ ಕೋಟೆಗಳಾಗಿ ಮಾರ್ಪಟ್ಟಿವೆ, ನನ್ನ ಪ್ರಭುವೇ.”

 

ಮೂಲ : ದೇವನ್ (ಸಿನೆಮಾ ನಿರ್ಮಾಪಕ), ಕನ್ನಡಕ್ಕೆ : ಎಂ.ಜಿ. ಹೆಗಡೆ, ಕುಮಟಾ
ಕವನಾನುವಾದ : ಭಾಯಿ ಕುಲ್ತಾರ್ ಸಿಂಗ್
(ಕೃಪೆ :ಇಂಡಿಯನ್‍ಎಕ್ಸಪ್ರೆಸ್‍, ಜನೆವರಿ 13, 2021)

 

 

 

Donate Janashakthi Media

Leave a Reply

Your email address will not be published. Required fields are marked *