ಸಮಾನತೆಯ ಸಮಾಜವನ್ನು ಸಾಕಾರಗೊಳಿಸಿದ ಚೆ ಮಗಳು ಇಂದು ಬೆಂಗಳೂರಿಗೆ

ಕೆ.ಮಹಾಂತೇಶ್

ಜಗದಗಲ ಸಮಾನತೆಗಾಗಿ ಹೋರಾಡುವವರಿಗೆ ಸದಾ ಸ್ಪೂರ್ತಿಯಾವರು ಚೆ-(ಚೆ ಗೆವಾರ) ಸರ್ವಾಧಿಕಾರ ಬ್ಯಾಪಿಸ್ಟ್ ಆಡಳಿತವನ್ನು ಗೆಳೆಯ ಫಿಡಲ್ ಕ್ಯಾಸ್ಟ್ರೋ ಜತೆ ಸೇರಿ ವಿಮೋಚನೆಗೊಳಿಸಿದ ಕ್ರಾಂತಿಕಾರಿ ನಾಯಕ ಕ್ಯೂಬಾದ ಸರ್ಕಾರದಲ್ಲಿ ಹಣಕಾಸು ಸಚಿವನಾಗಿ ಜಗತ್ತೆಲ್ಲ ತಿರುಗಾಡಿದರು ಮನಸ್ಸು ಮಾತ್ರ ಅಸಮಾನತೆಗಳನ್ನು ಮೈವೆತ್ತುಕೊಂಡಿದ್ದ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಸಮಾನತೆ ಬೀಜ ಬಿತ್ತಲು ಹಾತೊರೆಯುತ್ತಿತ್ತು.

ಹೀಗಾಗಿ ಕ್ಯೂಬಾ ಜತೆಗೆ ಮತ್ತು ತನ್ನ‌ಜೀವದ ಗೆಳೆಯ ಫಿಡೆಲ್ ಗೆ ಹಾಗೂ ತನ್ನ ಹಾಲುಗಲ್ಲದ ಕಂದಮ್ಮಗಳಿಗೆ ವಿದಾಯ ಪತ್ರಗಳನ್ನು ಬರೆದಿಟ್ಟ ಚೆ ಇದ್ದಕ್ಕಿದ್ದಂತೆ ಅಸಮಾನತೆಯ ಸಮಾಜವಾಗಿದ್ದ ಬೋಲಿವಿಯಾದ ವಿಮೋಚನೆಗೆ ನಡೆದೇ ಬಿಟ್ಟರು.

ಚೆ ಬೋಲಿವಿಯಾ ಸರ್ವಾಧಿಕಾರಿ ಸರ್ಕಾರದ ವಿರುದ್ದ ಹೋರಾಡುವಾಗಲೇ ಅಮೇರಿಕಾದ ಸಿಐಎ ಸೈನಿಕರು ಬೊಲಿವಿಯಾ ಕಾಡಿನಲ್ಲಿ ಎಲ್ಲ ಅಕ್ರಮವಾಗಿ ಬಂದಿಸಿ ಕೊಲೆಗೈದರು.

ಕ್ಯೂಬಾ ಒಂದು‌ ಸಣ್ಣ‌ದೇಶ. ಇವತ್ತು ಜಗತ್ತಿನಲ್ಲಿ ಸಮಾನತೆ ಸಮಾಜ ಸ್ಥಾಪಿಸಿದ್ದರೆ ಅದಕ್ಕೆ ಕಾರಣ ಫಿಡಲ್-ಚೆ ಶ್ರಮವೇ ಕಾರಣ ಅಂತಹ ಚೆ ಗೆವಾರನ ಮಗಳು ಜನಪರ ವೈದ್ಯೆ  ಡಾ. ಆಲಿಡಾ ಗೆವಾರ ಮತ್ತು ಆಕೆಯ ಮಗಳು ಅರ್ಥಶಾಸ್ತ್ರಜ್ಞೆ ಎಸ್ತಿಫಾನಿಯ ಈಗ ದಕ್ಷಿಣ ಭಾರತ ಪ್ರವಾಸದಲ್ಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಇಂದು(ಜನವರಿ 19) ಮಹಾರಾಣಿ ಕಾಲೇಜು ಬಳಿ ಇರುವ ಕೊಂಡಜ್ಜಿ ಬಸಪ್ಪ ಸಭಾಂಗಣ (ಭಾರತ್‌ ಸ್ಕೌಟ್ ಅಂಡ್ ಗೈಡ್), ಪ್ಯಾಲೆಸ್‌ ರಸ್ತೆ, ‌ನಾಗರಿಕ ಸಮ್ಮಾನ ಸ್ವೀಕರಿಸಲಿದ್ದಾರೆ. ನಾಡಿನ ಯುವ ಮನಸ್ಸುಗಳು, ಕಲಾವಿದರು ಸಂಗೀತಗಾರರು ಹೋರಾಟಗಾರರ ಸಮಾಗಮವಾಗಲಿದೆ. ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *