ಸಮಾನ ಕೆಲಸಕ್ಕೆ ಸಮಾನ ವೇತನ: ಜೂನ್‌ 28ಕ್ಕೆ ಮುನಿಸಿಪಲ್ ಕಾರ್ಮಿಕರ ರಾಜ್ಯ ಸಮಾವೇಶ

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ, ನಗರ ಪಾಲಿಕೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ  ವೇತನವಿಲ್ಲದೇ ದಿನಗೂಲಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಗುತ್ತಿಗೆ  ನಿಯಂತ್ರಣ ಮತ್ತು ನಿಷೇಧ ಕಾಯಿದೆ-1970 ರಡಿಯಲ್ಲಿ ಸಮಾನ ವೇತನಕ್ಕೆ ಅರ್ಹರಾಗಿದ್ದಾರೆ. ಅದರೆ ಸರ್ಕಾರಗಳು  ಕಾನುನೂನಿನ ಈ ಅಂಶವನ್ನು ಜಾರಿಮಾಡದೆ  ವಂಚಿಸುತ್ತಿದೆ ಎಂದು ಮುನಸಿಪಲ್ ಕಾರ್ಮಿಕರ ಸಂಘಟನೆಗಳು  ಅರೋಪಿಸಿವೆ.

ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ನಾಯಕ್ ಮಾತನಾಡಿ, ಪೌರ ಕಾರ್ಮಿಕರು, ಲೋಡರ್‌ಗಳು, ವಾಟರ್ ಮ್ಯಾನ್‌ಗಳು, ಕಸದ ಅಟೋ ಚಾಲಕರು, ಕಂಪ್ಯೂಟರ್ ಅಪರೇಟರ್‌, ಯು.ಜಿ.ಡಿ. ಕಾರ್ಮಿಕರು, ಕಛೇರಿ ಸಹಾಯಕರು, ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಮಿಕರು, ಸ್ಮಶಾಣ, ಪಾರ್ಕುಗಳಲ್ಲಿ ದುಡಿವ  ಕಾರ್ಮಿಕರು, ಯುಜಿಡಿ ನೀರು ಸಂಸ್ಕರಣೆ ಘಟಕದ ಕಾರ್ಮಿಕರು, ಹತ್ತಾರು ವರ್ಷಗಳಿಂದ  ನಿರಂತರವಾಗಿ  ಗುತ್ತಿಗೆ – ಹೊರ ಗುತ್ತಿಗೆ, ದಿನಕೂಲಿ, ಇತರೆ  ಹೆಸರುಗಳಲ್ಲಿ  ಖಾಯಂ ಅಲ್ಲದ ಕಾರ್ಮಿಕರಾಗಿ  ಇವರು ದುಡಿಯುತ್ತಿದ್ದಾರೆ. ಈ ಕಾರ್ಮಿಕರು    ಖಾಯಂ ಕಾರ್ಮಿಕರ ಮಾಡುವ ಕೆಲಸವನ್ನೇ ಮಾಡುತ್ತಿದ್ದಾರೆ.

ಪಂಜಾಬ್ ರಾಜ್ಯ v/s ಜಗಜೀತ್ ಸಿಂಗ್ ಮತ್ತು ಇತರರು ವಿವಾದದ ಪ್ರಕರಣದಲ್ಲಿ ದೇಶದ ಸವೋಚ್ಚ ನ್ಯಾಯಲಯವು ‘’ಸಮಾನ ಕೆಲಸಕ್ಕೆ ಸಮಾನ ವೇತನʼʼದ ತತ್ವವನ್ನು ಎತ್ತಿಹಿಡಿದಿದೆ. ಈ ಹಿನ್ನೆಲೆಯಲ್ಲಿ ಮತ್ತು ಒಂದೇ ಸ್ವರೂಪದ ಕೆಲಸಗಳನ್ನು ಮಾಡುತ್ತಿರುವವರ ವೇತನದಲ್ಲಿನ ತಾರತಮ್ಯವು ಕಡಿಮೆ ವೇತನಕ್ಕೆ ದುಡಿಸುವ ಶೋಷಣೆಯು ಮತ್ತು ಸ್ವಭಾವಿ ನ್ಯಾಯಕ್ಕೆ  ವಿರುದ್ದವಾದ್ದು ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್‌ ಮುಜೀಬ್‌ ಮಾತನಾಡಿ, ಸರ್ಕಾರ ಮತ್ತು ನಾಗರಿಕ ಸಮಾಜದ ಗಮನ ಸೆಳೆಯಲು 2022ರ ಜೂನ್‌ 28ರ, ಮಂಗಳವಾರ ತುಮಕೂರಿನ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ(ರಿ)-ಸಿಐಟಿಯು ವತಿಯಿಂದ ರಾಜ್ಯ ಮಟ್ಟದ ಸಮಾನ ಕೆಲಸಕ್ಕೆ ಸಮಾನ ವೇತನ – ರಾಜ್ಯ ಸಮಾವೇಶ ಸಂಘಟಿಸಲಾಗುತ್ತಿದೆ ಎಂದರು.

ಸಮಾವೇಶವನ್ನು ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಉದ್ಘಾಟಿಸಲಿದ್ದಾರೆ. ನಗರಾಭಿವೃದ್ದಿ  ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ನಾಗಭೂಷಣ್, ಪೌರಾಡಳಿ ನಿರ್ದೇಶಕಿ ಶ್ರೀಮತಿ ಅರ್ಚನಾ, ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟಿಲ್, ಜಿಲ್ಲಾ ಯೋಜನಾ ನಿರ್ದೇಶಕ ಅಂಜನಪ್ಪ, ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣಿಕಮ್ಮ, ಚಿಂತಕ ಪ್ರೋ. ಕೆ. ದೊರೈರಾಜು, ಸ್ಲಂ ಜನಂದೋಲನದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮಾವೇಶದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಹರಿಶ್ ನಾಯಕ್ ವಹಿಸಲಿದ್ದು, ಪ್ರಾಸ್ತವಿಕ ಮಾತನ್ನು ಸಂಘದ  ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಮಾಡಲಿದ್ದಾರೆ. ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮುನಿಸಿಪಲ್ ಕಾರ್ಮಿಕರ  ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮುನಿಸಿಪಲ್‌ ಕಾರ್ಮಿಕರ ಸಂಘವು ತಿಳಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *