ಸಾಲು ಮರದ ತಿಮ್ಮಕ್ಕ ಸಸ್ಯೋಧ್ಯಾನ ಲೋಕಾರ್ಪಣೆ

ಪಾವಗಡ : ಪಟ್ಟಣದ ಹೊರವಲಯದಲ್ಲಿ ಪಾವಗಡ ಅರಣ್ಯ ಇಲಾಖೆಯ ನೇತೃತ್ವದಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನದ ಶನಿವಾರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡುತ್ತ ನಾಡಿನ ಬೆಲ್ಲೆಲುಬಾದ ರೈತ ಸರಕಾರದಿಂದ ಲಭಿಸೋ ಸವಲತ್ತುಗಳನ್ನು ಪಡೆಯದೇ ಅರಿವಿನ ಕೊರತೆಯಿಂದಾಗಿ ನಿರ್ಲಕ್ಷ್ಯವಹಿಸುತ್ತಿದ್ದಾನೆ. ಅಷ್ಟೇ ಅಲ್ಲದೇ ಇತ್ತೀಚಿಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೆ ಮರೆತ್ತಿದ್ದಾರೆ.ಆಗಾಗಿ ಮುಂದಿನ ದಿನಗಳಲ್ಲಿ ಆಮ್ಲಜನಕದ ಆಹಾಕಾರ ಬರುವ ಮೊದಲು ಅರಣ್ಯ ಇಲಾಖೆಯವರು ಜನರಲ್ಲಿ ಪ್ರಕೃತಿ ಉಳಿಸಿ ಬೆಳೆಸುವ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ತಿಳಿಸಿದರು.

ಶಾಸಕ ವೆಂಕಟರವಣಪ್ಪ ಮಾತನಾಡಿ ಪಾವಗಡ ಒಂದು ಮಳೆ ನಿರಾಶ್ರಿತ ಪ್ರದೇಶವಾಗಿದೆ. ಕಾರಣ ಈ ಭಾಗದಲ್ಲಿ ಪ್ರಕೃತಿ ಸಂಪತ್ತು ವಿರಳವಾಗಿರುವುದರಿಂದ ಜನಸಾಮಾನ್ಯರ, ಪ್ರಾಣಿ ಪಕ್ಷಿಗಳು ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಆಗಾಗಿ ನಾವುಗಳು ಪರಿಸರ ಸ್ನೇಹಿಯಾಗಬೇಕೆ ವರೆತು ವಿನಾಶಿಗಳಾಗಬಾರದು ಎಂಬ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿ ಡಾ. ನಂದಿನಿ ದೇವಿ, ತಹಶೀಲ್ದಾರ ನಾಗರಾಜು , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶಂಕರ್ ಪುರಸಭೆ ಮುಖ್ಯಾಧಿಕಾರಿ ಜಿ ನವೀನಚಂದ್ರ, ತಾಲೂಕು ಪಂಚಾಯತ್ ಅಧ್ಯಕ್ಷೆ ಮಲ್ಲಮ್ಮ ಸುಬ್ಬರಾಯಪ್ಪ, ವಲಯ ಅರಣ್ಯಾಧಿಕಾರಿಗಳು ಸುರೇಶ್ ಸೇರಿದಂತೆ ಹಲವರಿದ್ದರು.

Donate Janashakthi Media

Leave a Reply

Your email address will not be published. Required fields are marked *