ಗುಜರಾತ್| ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ

 ಗುಜರಾತ್​: ರಾಜ್ಯದಲ್ಲಿ ಕಳ್ಳಸಾಗಣಿಕೆದಾರರು ಭಾರತೀಯ ಅಂಚೆ ಸೇವೆಯ ಮೂಲಕ ಮದ್ಯ ಮಾರಾಟ ಮಾಡುವ ಪ್ರಕರಣವನ್ನು ಪೊಲೀಸರು ಇತ್ತೀಚಿಗೆ ಭೇದಿಸಿದ್ದಾರೆ.

ಮದ್ಯವನ್ನು ದಿಯು-ಗುಜರಾತ್​ ಗಡಿಯಲ್ಲಿ ದಿನನಿತ್ಯ ಅಂಚೆ ಮೂಲಕ ಅಧಿಕೃತ ಅಂಚೆ ಚೀಟಿಗಳ ತುಂಬಿದ ಚೀಲಗಳಲ್ಲಿ ಸಾಗಿಸುತ್ತಿದ್ದರು. ಇದರಿಂದ ಗಡಿಯಲ್ಲಿನ ಪೊಲೀಸರ ಕಣ್ತಪ್ಪಿಸಬಹುದು ಎಂದು ಖದೀಮರು ನಂಬಿದ್ದರು. ಆದರೆ, ಪಾರ್ಸೆಲ್​​ ಚೀಲಗಳು ತುಂಬಿದನ್ನು ಶಂಕೆ ವ್ಯಕ್ತಪಡಿಸಿದ ಅಧಿಕಾರಿಗಳು ಪರಿಶೀಲನೆಗೆ ಇಳಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಅನುಚಿತ ಹೇಳಿಕೆ ನೀಡದಂತೆ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಪ್ರಕರಣ ಬೆಳಕಿಗೆ ಬಂದಿದ್ದೇಗೆ..?

ಡಿಯುನಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಉನಾಪಟ್ಟದ ಪೊಲೀಸರು, ದೆಲ್ವಾಡದಿಂದ ದ್ವಿಚಕ್ರ ವಾಹನದಲ್ಲಿ ಅಂಚೆ ಕಚೇರಿಯ ಬೃಹತ್​ ಚೀಲಗಳನ್ನು ಹೊತ್ತುಕೊಂಡು ಬರುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ವಾಹನ ಚಾಲಕ ಶಂಕಿತ ನಯನ್​ ಜೆತ್ವಾ ಎಂದು ಗುರುತಿಸಲಾಗಿದ್ದು, ಇತನ ಬಳಿ ಇದ್ದ ವಿವಿಧ ಬ್ರಾಂಡ್​ನ 19 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಚಾರಣೆಯ ಸಮಯದಲ್ಲಿ ಆರೋಪಿ ನಯನ್​ ಜೆತ್ವಾ, ಈ ಒಟ್ಟಾರೆ ಪ್ರಕರಣದಲ್ಲಿ ತನ್ನ ಸ್ನೇಹಿತ, ಪೋಸ್ಟ್​ ಮಾಸ್ಟರ್​ ಮಯೂರ್​ ಗೋಹಿಲ್​ ಕೈವಾಡ ಇದೆ ಎಂದು ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಗಮನವನ್ನು ತಪ್ಪಿಸಲು ಗೋಹಿಲ್ ಬಾಟಲಿಗಳನ್ನು ಹೊಂದಿರುವ ಚೀಲದ ಮೇಲೆ ಅಂಚೆ ಚೀಟಿಗಳನ್ನು ಅಂಟಿಸಿ ಅಧಿಕೃತ ಇಂಡಿಯಾ ಪೋಸ್ಟ್ ವಾಹನಗಳಿಗೆ ಲೋಡ್ ಮಾಡುವ ಮೂಲಕ ಕಾರ್ಯಾಚರಣೆ ಪೂರ್ಣಗೊಳಸಿಸುತ್ತಿದ್ದೇವು ಎಂದು ಆರೋಪಿ ಹೇಳಿದ್ದಾನೆ. ಇನ್ನು ಪ್ರಕರಣದಲ್ಲಿ ಪೋಸ್ಟ್​ ಮಾಸ್ಟರ್​ ಅನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಠಾಣೆಯ ಇನ್​ಸ್ಪೆಕ್ಟರ್​ ರಾಣಾ ತಿಳಿಸಿದ್ದಾರೆ.

ಇದನ್ನೂ ನೋಡಿ: ಅತ್ಯಾಚಾರ- ಕೊಲೆ ಹೇಯ ಕೃತ್ಯ ಆದರೆ ಎನ್ಕೌಂಟರ್ ಪರಿಹಾರವೇ???

Donate Janashakthi Media

Leave a Reply

Your email address will not be published. Required fields are marked *