ಹುಬ್ಬಳ್ಳಿ: ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ನನ್ನ ಹಂತ ದಾಟಿ ಮುಖ್ಯಮಂತ್ರಿಗಳ ಬಳಿ ಹೋಗಿದೆ. ಅವರ ನಾಯಕತ್ವದಲ್ಲಿ ಸಭೆಯಾಗಿ ನಿರ್ಧಾರವಾಗಬೇಕು. ಈ ವಿಚಾರದಲ್ಲಿ ನಾನು ವೀಕ್ ಆಗಿಲ್ಲ, ಸ್ಟ್ರಾಂಗ್ ಆಗಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರಡ್ಡಿ ತಿಳಿಸಿದರು.
ನಾವು ಅಧಿಕಾರದಲ್ಲಿದ್ದಾಗ 2016ರಲ್ಲಿ ವೇತನ ಪರಿಷ್ಕರಣೆ ಮಾಡಲಾಯಿತು. ನಂತರ 2020ರಲ್ಲಿ ಮಾಡಬೇಕಿತ್ತು. ಕೋವಿಡ್ ಕಾರಣದಿಂದ ಹಿಂದಿನ ಸರ್ಕಾರದವರು 2023ರಲ್ಲಿ ಹೆಚ್ಚಳ ಮಾಡಿದರು. ಇದನ್ನು 2020 ಜನವರಿಯಿಂದ ಅನ್ವಯವಾಗುವಂತೆ ಆದೇಶ ಮಾಡಬೇಕಿತ್ತು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳು, ನಾಪತ್ತೆ ಪ್ರಕರಣ ತನಿಖೆಗೆ ಒತ್ತಾಯಿಸಿ ಕರ್ನಾಟಕದ ಮುಖ್ಯಮಂತ್ರಿಗೆ ಎಂ.ಎ.ಬೇಬಿ ಪತ್ರ
ಆದರೆ ಆದೇಶದಲ್ಲಿ 2023ರಿಂದ ಅನುಷ್ಠಾನ ಎಂದು ಮಾಡಿರುವುದು ಇದೀಗ ಸಮಸ್ಯೆಯಾಗಿದೆ. ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿರುವ ಕಾರಣ ಇದನ್ನು ಅವರೇ ಬಗೆಹರಿಸಬೇಕಿದೆ. ಹಿಂದಿನ ಸರಕಾರದ ಆದೇಶದಲ್ಲಿನ ನ್ಯೂನತೆಯಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ.
ಸಾರಿಗೆ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಕೊಳ್ಳದ ಪರಿಣಾಮ ಹೊರಗುತ್ತಿಗೆ ಜಾಸ್ತಿಯಾಗಿದೆ. 2016ರಿಂದ 2023ರವರೆಗೆ ನೇಮಕಾತಿಯಾಗಲಿಲ್ಲ. ಹೀಗಾಗಿ ಚಾಲಕರು, ಮೆಕ್ಯಾನಿಕ್‌ಗಳನ್ನು ಹೊರಗುತ್ತಿಗೆ ಮೇಲೆ ಪಡೆಯಲಾಗಿದೆ. ಇದೀಗ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಕ್ರಮೇಣ ಹೊರಗುತ್ತಿಗೆ ಕೈಬಿಡಲಾಗುವುದು ಎಂದರು.
ಇದನ್ನೂ ನೋಡಿ: ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ
