ಮಡಿಕೇರಿ: ಅಗ್ನಿಪಥ ಯೋಜನೆಯ ಜಾರಿಯಿಂದಾಗಿ, ದೇಶದ ಸೈನಿಕರ ಆತ್ಮಸ್ಥೈರ್ಯವನ್ನು ಕುಗ್ಗುವಂತೆ ಮಾಡುತ್ತದೆ. ಅಲ್ಲದೆ, ಈ ಯೋಜನೆ ತರುವ ಮುನ್ನ ಸರ್ವಪಕ್ಷ ಸಭೆ ಕರೆಯಬೇಕಿತ್ತು. ಯೋಜನೆಯ ಆಗುಹೋಗುಗಳ ಬಗ್ಗೆ ಚರ್ಚಿಸಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಮಡಿಕೇರಿಯಲ್ಲಿಂದು ಮಾತಾನಾಡಿದ ಧೃವನಾರಾಯಣ, ಭಾರತೀಯ ಸೇನೆ ಪ್ರಪಂಚದಲ್ಲಿಯೇ ಹೆಚ್ಚು ಹೆಸರುವಾಸಿಯಾದ ಸೇನಾಪಡೆಯಾಗಿದೆ. ಅಗ್ನಿಪಥ ಜಾರಿ ಯೋಜನೆಗಳ ಕುರಿತು ಸರ್ವಪಕ್ಷಗಳ ಜೊತೆ ಸಭೆ ನಡೆಸಿ, ಯೋಜನೆಯಿಂದಾಗುವ ಯಾವ ರೀತಿಯಲ್ಲಿ ಪರಿಣಾಮ ಇದೆ. ಇದರಿಂದಾಗುವ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆಯಾಗಬೇಕಾಗಿತ್ತು. ಏಕಾಏಕಿ ಇದನ್ನು ಜಾರಿಗೆ ತಂದು ದೇಶದಲ್ಲಿ ಯುವಕರು ಅಕ್ರೋಶಗೊಂಡಿದ್ದಾರೆ. ಇಡೀ ಪ್ರಪಂಚದಲ್ಲಿ ಭಾರತೀಯ ಸೇನೆಗೆ ಒಳ್ಳೆಯ ಹೆಸರು ಇದೆ. ಅಗ್ನಿಪಥ ಜಾರಿಯಿಂದ ದೇಶದ ಸೈನಿಕರ ಆತ್ಮಸ್ಥೈರ್ಯ ಕುಗ್ಗುತ್ತೆ ಎಂದು ಹೇಳಿದರು.
ಪ್ರಧಾನಿ ಮೋದಿ ಮೈಸೂರು ಭೇಟಿ ವಿಚಾರದ ಬಗ್ಗೆ ಮಾತನಾಡಿದ ಧೃವನಾರಾಯಣ ಈ ಬಾರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿ ಸೋಲಿಸಿ ಮೋದಿಗೆ ಬಿಜೆಪಿ ಉಡುಗೊರೆ ಕೊಟ್ಟಿದೆ. ಅದರ ಸ್ವೀಕಾರಕ್ಕೆ ಪ್ರಧಾನಿ ಮೋದಿ ಮೈಸೂರಿಗೆ ಬರುತ್ತಿದ್ದಾರೆ. ಮೋದಿ ಬರುತ್ತಾರೆ ಅಂತ ಬಿಜೆಪಿಯವರು ಪದವೀಧರರ ಬಳಿ ಮತ ಕೇಳಿದರು. ಆದರೆ ಚುನಾವಣೆಯಲ್ಲಿ ಮಧು ಜಿ ಮಾದೇಗೌಡರನ್ನು ಜನ ಗೆಲ್ಲಿಸಿದ್ದಾರೆ ಎಂದು ಹೇಳುವ ಮೂಲಕ ಮೋದಿ ಮೈಸೂರು ಪ್ರವಾಸದ ಬಗ್ಗೆ ವ್ಯಂಗ್ಯವಾಡಿದರು.
ಬಿಜೆಪಿ ಬಾಗಿಲು ಕಾಯಲು ಯುವಕರು ಬೇಕೆ?: ದಿನೇಶ್ ಗುಂಡೂರಾವ್
ಬಿಜೆಪಿ ಕಚೇರಿಗಳ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ, ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಟ್ವೀಟ್ ಮಾಡಿದೆ.
ಅಗ್ನಿಪಥ ವಿರುದ್ದ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿಯವರ ಹೇಳಿಕೆಗಳು ಆ ಪಕ್ಷದ ಮನೋವಿಕಾರವನ್ನು ಅನಾವರಣ ಮಾಡಿದೆ. ಯೋಜನೆಯ ಮೂಲಕ ಆಯ್ಕೆಯಾಗಿ ನಿರ್ಗಮಿಸುವ ಅಗ್ನಿವೀರರು ಬಿಜೆಪಿ ಕಚೇರಿ ಕಾಯುವ ಸೆಕ್ಯೂರಿಟಿ ಗಾರ್ಡ್ ಆಗಲು ಆದ್ಯತೆ ಎಂದಿರುವ ಕೈಲಾಶ್ ಹೇಳಿಕೆ ಖಂಡನೀಯ. ಈ ಹೇಳಿಕೆ ಯುವ ಸಮುದಾಯ ಮಾತ್ರವಲ್ಲ ಇಡೀ ಸೈನ್ಯಕ್ಕೆ ಮಾಡಿದ ಅವಮಾನ ಎಂದಿದ್ದಾರೆ.
ಇದರಿಂದ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರು ಬಿಜೆಪಿಯ ಪರಿಚಾರಕರಾಗಬೇಕೆಂಬುದು ಬಿಜೆಪಿ ನಾಯಕರ ಅಜೆಂಡಾವೇ? ಎಂದು ಪ್ರಶ್ನಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್ ʻಜ್ಞಾನೇಂದ್ರರವರೆ, ಸೈನ್ಯಕ್ಕೆ ಸೇರುವುದಾಕ್ಕಾಗಿಯೇ ಲಕ್ಷಾಂತರ ಯುವಕರು ತಪ್ಪಸ್ಸಿನಂತೆ ಶ್ರಮ ಪಟ್ಟಿರುತ್ತಾರೆ. ಆ ಯುವಕರಿಗೆ ಕೇವಲ 4 ವರ್ಷ ಕೆಲಸ ಕೊಟ್ಟು ನಂತರ ಮನೆಗೆ ಕಳುಹಿಸಿದರೆ ಅವರೇನು ಮಾಡಬೇಕು? ಯುವಕರು ಪ್ರತಿಭಟಿಸುವುದು ತಪ್ಪೆ? ಅಗ್ನಿಪಥ ಕೇವಲ ಯುವಕರ ಬದುಕಿಗೆ ಮಾತ್ರ ಸಂಬಂಧಿಸಿದಲ್ಲ. ದೇಶದ ಭದ್ರತೆಯ ವಿಚಾರದಲ್ಲೂ ಇದು ಅತ್ಯಂತ ಅಪಾಯಕಾರಿ ಪ್ರಯೋಗ. ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳುವ ಹಾಗೂ ಗಡಿ ಕಾಯುವ ಯೋಧನನ್ನು ರೂಪಿಸಲು ವರ್ಷಗಳೇ ಬೇಕು. ಕೇವಲ 6 ತಿಂಗಳ ತರಬೇತಿ ಪಡೆದ ಯುವಕ ಪರಿಪೂರ್ಣ ಯೋಧನಾಗಲು ಸಾಧ್ಯವೆ? ಕೇಂದ್ರಕ್ಕೆ ದೇಶದ ಭದ್ರತಾ ವಿಚಾರದಲ್ಲಿ ರಾಜಿಯೇಕೆ ಎಂದು ಪ್ರಶ್ನಿಸಿದ್ದಾರೆ.