ಸರ್ಕಾರಿ ಅಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತು ದಂಪತಿಯಿಂದ ದಯಾಮರಣಕ್ಕೆ ಅರ್ಜಿ

  • ಸರ್ಕಾರಿ ಅಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತಿರುವ ಸಾಗರ ತಾಲೂಕು ಖಂಡಿಕಾ ಗ್ರಾಮ ಪಂಚಾಯತಿಯ ಶ್ರೀಕಾಂತ್ ನಾಯ್ಕ್-ಸುಜಾತ ನಾಯ್ಕ್ ದಂಪತಿ.
  • 2018ರಲ್ಲಿ ತಮ್ಮ ಜಮೀನಿನನ್ನ ನಿವೇಶನಗಳಾಗಿ ಪರಿವರ್ತನೆ ಮಾಡುವ ಯೋಜನೆಯಲ್ಲಿ ಕಾನೂನು ಪ್ರಕಾರವೇ ಅನುಮತಿ ಪಡೆದಿದ್ದ ದಂಪತಿ.
  • ಜಮೀನಿನಲ್ಲಿ‌ ನಿವೇಶನಗಳ ಅಭಿವೃದ್ಧಿಗೆ ಲಂಚ ನೀಡುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ದಂಪತಿಯ ಆರೋಪ.

ಶಿವಮೊಗ್ಗ: ಇಬ್ಬರು ದಂಪತಿಗಳು ಸರ್ಕಾರಿ ಅಧಿಕಾರಿಗಳ ಕಿರುಕುಳಕ್ಕೆ ಮನನೊಂದು ನಮಗೆ ದಯಾಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಖಂಡಿಕಾಯಲ್ಲಿ ನಡೆದಿದೆ. ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ದಯಾಮರಣಕ್ಕೆ ಅರ್ಜಿಯನ್ನು ಸಲ್ಲಿಸಿದ್ದೇವೆ ಎಂದು ದಂಪತಿಗಳು ಹೇಳಿದ್ದಾರೆ. ಶ್ರೀಕಾಂತ್ ನಾಯ್ಕ್-ಸುಜಾತ ನಾಯ್ಕ್​​ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಕಾಂತ್ ನಾಯ್ಕ್-ಸುಜಾತ ನಾಯ್ಕ್ ದಂಪತಿಗಳಿಗೆ ಸಂಬಂಧಿಸಿದ ಜಮೀನಿನಲ್ಲಿ‌ರುವ ಸೈಟ್​ಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ನಿವೇಶನಗಳ ಅಭಿವೃದ್ಧಿಗೆ ಲಂಚ ನೀಡುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಗ್ರಾಮ ಪಂಚಾಯತಿಗೆ ಶುಲ್ಕ ನೀಡಿ ಅನುಮೋದನೆಗೆ ಮನವಿ ಮಾಡಿದ್ದೇವು, ಆದರೆ ಶುಲ್ಕ ನೀಡಿದರೂ ಅಧಿಕಾರಿಗಳು 3-4 ಬಾರಿ ಅಲೆದಾಡಿಸಿದ್ದಾರೆ, ಪ್ರತಿದಿನ ಸರ್ಕಾರಿ ಕಚೇರಿ ಮುಂದೆ ನಿಂತು ನಿಂತು ಸಾಕಾಗಿದೆ. ಇದೀಗ ಪಿಡಿಒ 5 ಲಕ್ಷ ಹಣ ಹಾಗೂ ತಾ.ಪಂ. ಇಒ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಷ್ಟೊಂದು ಹಣವನ್ನು ನಾವು ಎಲ್ಲಿಂದ ತರಬೇಕು, ಅನೇಕ ಬಾರಿ ಈ ಬಗ್ಗೆ ದೂರು ನೀಡದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಧಿಕಾರಿಗಳಿಂದ 40% ಕಮಿಷನ್‌ ಬೇಡಿಕೆ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗುತ್ತಿಗೆದಾರ

ಇಬ್ಬರು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಪಿಡಿಒ, ತಾ.ಪಂ. ಇಒ ವಿರುದ್ಧ ಶ್ರೀಕಾಂತ್ ದಂಪತಿಗಳು ಆರೋಪಿಸಿದ್ದಾರೆ. ಅಧಿಕಾರಿಗಳ ಲಂಚಬಾಕತನಕ್ಕೆ ಬೇಸತ್ತು ದಯಾಮರಣ ನೀಡುವಂತೆ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದ ಶ್ರೀಕಾಂತ್​ ದಂಪತಿಗಳು ಹೇಳಿದ್ದಾರೆ.  ಅಧಿಕಾರಿಗಳು ಅಷ್ಟೊಂದು ಮೊತ್ತದ ಹಣಕ್ಕೆ ಬೇಡಿಕೆ ಇಟ್ಟರೆ, ಬಡ ಕುಟುಂಬಗಳು ಏನು ಮಾಡಬೇಕು. ಈ ಕಾರಣಕ್ಕೆ ನಾವು   ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.

ಒಂದೇ ಲಿಂಕ್‌ನಲ್ಲಿ ಜನಶಕ್ತಿ ಮೀಡಿಯಾದ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ನ್ನು ನೋಡಬಹುದು

Donate Janashakthi Media

Leave a Reply

Your email address will not be published. Required fields are marked *