ಬೆಂಗಳೂರು : ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ.ಸದಾನಂದಗೌಡ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ರಾಜೀನಾಮೆ ಹಿಂದೆ ಅಶ್ಲೀಲ ಸಿಡಿಯ ವಾಸನೆ ಬಡೆಯುತ್ತಿತ್ತು ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಸದಾನಂದಗೌಡ ಸದ್ದಿಲ್ಲದೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಕುರಿತು ಈಗ ಸಾರ್ವಜನಿಕ ವಲಯದಲ್ಲಿ ಅನೇಕ ಬಿಸಿ ಬಿಸಿ ಚರ್ಚೆಗಳು ಎದ್ದಿವೆ. ಸದಾನಂದಗೌಡ ರಾಜೀನಾಮೆ ನೀಡಲು ಎರಡು ಅಶ್ಲೀಲ ಸಿಡಿಗಳು ಕಾರಣ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಇಂತಹ ಚರ್ಚೆಗಳಿಗೆ ಪುಷ್ಠಿನೀಡುವಂತೆ ಇತ್ತೀಚೆಗೆ ತಮ್ಮ ವಿರುದ್ದ ಸುದ್ದಿ ಅಥವಾ ಸಿಡಿಗಳನ್ನು ಪ್ರಸಾರ ಮಾಡದಂತೆ ನಗರದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದರು. ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ, ಸದಾನಂದಗೌಡ ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದು, ಈಗ ರಾಜೀನಾಮೆ ನೀಡಿದ್ದು ಒಂದಕ್ಕೊಂದು ಸಂಬಂಧವೆಂಬಂತೆ ತೋರುತ್ತಿದೆ. ರಾಮನಗರದಲ್ಲೂ ಕೆಲ ತಿಂಗಳ ಹಿಂದೆ ಸದನಾಂದಗೌಡರು ಮಹಿಳೆಯೊಬ್ಬರನ್ನು ಗೆಸ್ಟ್ ಹೌಸ್‍ಗೆ ಕರೆದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಬಲ್ಲ ಮೂಲಗಳ ಪ್ರಕಾರ ಸದನಾಂದಗೌಡರದ್ದು ಎನ್ನಬಹುದಾದ ಎರಡು ಅಶ್ಲೀಲ ಸಿಡಿಗಳಿವೆ ಎಂಬ ಗುಸು ಗುಸು ಬಿಜೆಪಿಯಲ್ಲೆ ಕೇಳುತ್ತಿದೆ.
ಇದನ್ನೂ ಓದಿ : ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ. ಸದಾನಂದಗೌಡ ರಾಜೀನಾಮೆ
ಇನ್ನೊಂದೆಡೆ ಸದಾನಂದ ಗೌಡ ಅವರು ಸಚಿವರಾಗಿ ತೋರಿಸಿದ ಸಾಧನೆಯೂ ಚರ್ಚೆಗೆ ಬಂದಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಅವಧಿಯಲ್ಲಿ ಸದಾನಂದ ಗೌಡ ಅವರಿಗೆ ಮಹತ್ವದ ರೈಲ್ವೆ ಖಾತೆಯನ್ನು ನೀಡಲಾಗಿತ್ತು. ಅವರು ಆ ಸರಕಾರದ ಮೊದಲ ರೈಲ್ವೆ ಬಜೆಟ್ ಮಂಡಿಸಿದ್ದರು. ಆದರೆ ಅವರ ಕಾರ್ಯವೈಖರಿ ತೃಪ್ತಿ ತಾರದ ಹಿನ್ನೆಲೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಅವರು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವರೂ ಆಗಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ ಕುಮಾರ್ ಅವರ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯವನ್ನು ಅವರಿಗೆ ವಹಿಸಲಾಗಿತ್ತು.
ಸದಾನಂದಗೌಡರಿಗೆ 60 ವರ್ಷ ದಾಟಿದ್ದು ವಯಸ್ಸಿನ ಕಾರಣ ಹಾಗೂ ಕಾರ್ಯಕ್ಷಮತೆ ಇಲ್ಲದಿರುವುದು ಹಾಗೂ ಅಶ್ಲೀಲಸಿಡಿ ವಿಚಾರ ಪಕ್ಷಕ್ಕೆ ಮುಜುಗುರ ತರಬಾರದು ಎಂಬ ಕಾರಣದಿಂದ ರಾಜೀನಾಮೆಯನ್ನು ಹೈಕಮಾಂಡ್ ಪಡೆದಿರುವ ಸಾಧ್ಯತೆಯೂ ಇದೆ.