ಬೆಂಗಳೂರು : ಸಿಡಿ ಬಿಡುಗಡೆಯಾಯ್ತು, ಇದು ಫೇಕ್ ಎಂದ ರಮೇಶ್ ಜಾರಕಿಹೊಳಿ ಒತ್ತಡ ಹೆಚ್ಚಾದ ಮೇಲೆ ರಾಜೀನಾಮೆ ನೀಡಿದ್ರು, ಯಾವುದೇ ಭಯ, ದ್ವೇಷ ಇಲ್ಲದೆ ಕೆಲಸ ಮಾಡ್ತೇವೆ ಎಂದು ಓಟು ತೆಗೆದುಕೊಂಡವರು ಮಂತ್ರಿಯಾದ ಸಚಿವರು ತಮ್ಮ ಬಗ್ಗೆ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೋರೆ ಹೋಗ್ತಾರೆ. ಕೋರ್ಟ್‌ಗೆ ಹೋದವರು 6 ಜನ, ಸಿಡಿ ಇದೆ ಎಂದು ಹೇಳಿದ್ದು 19. ಬೇರೆಯವರು ಯಾಕೆ ಕೋರ್ಟ್‌ಗೆ ಹೋಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು
ಇಂದು ನಡೆದ ವಿಧಾನಸಭೆಯ ಸದನದಲ್ಲಿ ನಿಯಮ 69ರ ಅಡಿಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರವರು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 3ರ ಸಂಜೆ ಆರು ಮುಕ್ಕಾಲಿಗೆ ಎಲ್ಲಾ ಟಿವಿ ಮತ್ತು ಯೂಟ್ಯೂಬ್ ಗಳಲ್ಲಿ ಪ್ರಸಾರ ಆಗುತ್ತೆ. ದಿನೇಶ್ ಕಲ್ಲಳ್ಳಿ ಎಂಬುವರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಿಡಿಯಿದೆ ಎಂದು ದೂರು ಕೊಡಲು ಹೋಗಿದ್ದರು, ಆದರೆ ಕಮಿಷನರ್ ದೂರು ತೆಗೆದುಕೊಳ್ಳುವುದಿಲ್ಲ. ನಂತರ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡುತ್ತಾರೆ. ಅದೇ ವೇಳೆ ಎಲ್ಲಾ ಚಾನಲ್ ಗಳಲ್ಲಿ ಸಿಡಿ ಪ್ರಚಾರ ಆಗುತ್ತೆ. ತಪ್ಪು ಮಾಡಿಲ್ಲ ಎಂದವರು ನಂತರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರೆ. ಎಂದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ವಿವರಿಸಿದರು.
ಇದಾದ ಮೇಲೆ ಆರು ಸಚಿವರು ಕೋರ್ಟ್ ಮೋರೆ ಹೋಗುತ್ತಾರೆ. ನಮ್ಮ ಕಡೆ ಒಂದು ಗಾದೆ ಇದೆ ಕುಂಬಳಕಾಯಿ ಕಳ್ಳ ಎಂದ್ರೆ, ಹೆಗಲ್ ಮುಡ್ಕೊಂಡು ನೋಡಿದ್ರು ಅಂತಾ. ಆರು ಜನ ಸಚಿವರು ಯಾಕೆ ಕೋರ್ಟ್ ಮೊರೆ ಹೋದ್ರು..? ಮಾನಹಾನಿ ಆಗಬಾರದೆಂದು ತಮ್ಮ ಬಗ್ಗೆ ವರದಿ ಪ್ರಸಾರ ಆಗದಂತೆ 67 ಮಾಧ್ಯಮಗಳ ಮೇಲೆ ಸ್ಟೇ ತರುತ್ತಾರೆ. ಭಯ ಇಲ್ಲದವರು ಕೋರ್ಟ್ ಗೆ ಯಾಕೆ ಹೋದ್ರು.. ಇವರಿಗೆ ಭಯವಿದ್ರೆ, ಜನರಿಗೆ ಹೇಗೆ ರಕ್ಷಣೆ ಕೊಡ್ತಾರೆ ಎಂದು ಸಿದ್ಧರಾಮಯ್ಯ ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಮಧ್ಯಪ್ರವೇಶಿಸಿದ ಸಚಿವ ಬಸವರಾಜ ಬೊಮ್ಮಾಯಿ ಎಚ್.ವೈ. ಮೇಟಿ ವಿಚಾರ ಪ್ರಸ್ತಾಪ ಮಾಡಿದರು. ಪ್ರತಿಯಾಗಿ ಸಿದ್ದರಾಮಯ್ಯ ಅವರು ʻಸರಿ ಆಗಿದ್ರೆ ಗೋಪಾಲಯ್ಯ ಸೇರಿದಂತೆ ಉಳಿದವರು ಯಾಕೆ ಸ್ಟೇ ತಂದಿಲ್ಲ. ನನಗೂ ಹೇಳಿ..? ಎಂದು ಕೇಳಿದರು.
ಆಗ ಎಂಟಿಬಿ ನಾಗರಾಜ್, ಇದೆಲ್ಲಾ ಸುಳ್ಳು. ಅವರಿಗೆ ನಾನು ಯಾವುದೇ ಸಾಲ ಕೊಟ್ಟಿಲ್ಲ ಎಂದು ಹೇಳಿದರು. ಇದೇ ವೇಳೆ ಸಚಿವರುಗಳು ಸಿದ್ದರಾಮಯ್ಯ ಮೇಲೆ ಪ್ರತಿದಾಳಿಗೆ ಮುಂದಾದರು. ಶಿವರಾಮ್ ಹೆಬ್ಬಾರ್, ನಾರಾಯಣಗೌಡ, ಸೋಮಶೇಖರ್ ತಮ್ಮ ನಡೆ ಸಮರ್ಥನೆ ಮಾಡಿಕೊಂಡರು. ನಿಮ್ಮ ಕಾಲದಲ್ಲಿ ಸಚಿವರ ಮೇಲೆ ಆರೋಪ ಬಂದ್ಮೇಲೆ ರಾಜೀನಾಮೆ ಕೊಟ್ಟಿಲ್ವೇನ್ತೀ..? ಎಂದು ತಿರುಗೇಟು ನೀಡಿದರು.
ಮಂತ್ರಿ ಸ್ಥಾನಕ್ಕಾಗಿ ಸಿಪಿ ಯೋಗೇಶ್ವರ್ ಒಂಬತ್ತು ಕೋಟಿ ಖರ್ಚು ಮಾಡಿದ್ದಾರೆ. ಎಂಟಿಬಿ ನಾಗರಾಜ್ ಬಳಿ ಸಾಲ ಮಾಡಿರುವುದಾಗಿ ರಮೇಶ್ ಜಾರಕಿಹೊಳಿ ಹೇಳ್ತಾರೆ. ಹಾಗಾದ್ರೆ ದುಡ್ಡು ಖರ್ಚು ಮಾಡಿಯೇ ಮೈತ್ರಿ ಸರ್ಕಾರ ಕೆಡವಿದ್ದಾ..? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದರು.