ಸದನದಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಚರ್ಚೆಸುವಂತೆ ಮನವಿ

ಕೋಲಾರ: ಅಂಗನವಾಡಿ ನೌಕರರ ಬೇಡಿಕೆಗಳನ್ನು ಸದನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದ ಅಂಗನವಾಡಿ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರಿಗೆ ಶನಿವಾರ ಮನವಿ ಮಾಡಿದರು.

ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆರು ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಪ್ರಾರಂಭವಾದಿಂದ ಜನರ ಮತ್ತು ರೋಗಿಗಳ ಮಧ್ಯೆ ನೇರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ರಾಜ್ಯದಲ್ಲಿ ಸುಮಾರು 59 ಕಾರ್ಯಕರ್ತರು ಬಲಿಯಾಗಿದ್ದಾರೆ ರಾಜ್ಯದ ಹೈಕೋರ್ಟ್ ಕೊರೊನಾ ಲಾಕ್ ಡೌನ್, ಕರ್ಪ್ಯೂ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ಮನೆಗೆ ತಲುಪಿಸಬೇಕು ಎಂಬ ನಿರ್ದೇಶನ ಕೊಟ್ಟಾಗ ಅಂಗನವಾಡಿ ನೌಕರರು ಯಾವುದೇ ಸಂರಕ್ಷಣೆ ಇಲ್ಲದಿದ್ದರೂ ಆಹಾರ ಪದಾರ್ಥಗಳನ್ನು ರಾಜ್ಯದ 46 ಲಕ್ಷ ಫಲಾನುಭವಿಗಳಿಗೆ ತಲುಪಿಸಲಾಗಿದೆ ಇದು ನೌಕರರ ಕೆಲಸವು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಅಂಗನವಾಡಿ ನೌಕರರ ಸೇವೆಯೂ ಯಾರು ಮರೆಯವಂತದಲ್ಲ ಸ್ವತಃ ವಿಶ್ವ ಬ್ಯಾಂಕಿನ ಭಾರತೀಯ ನಿರ್ದೇಶಕ ಜುನೇದಾ ಅಹಮದ್‌ ಭಾರತದಲ್ಲಿ ಅಪೌಷ್ಠಿಕತೆ ಮತ್ತು ಕೋವಿಡ್19 ಪರಿಸ್ಥಿತಿಯನ್ನು ನಿಭಾಯಿಸಲು ಅಂಗನವಾಡಿ ಕೇಂದ್ರಗಳು ಬೆನ್ನೆಲುಬಾಗಿ ಕೆಲಸ ನಿರ್ವಹಿಸಿವೆ ಎಂದು ಮೆಚ್ಚುಗೆ ವ್ಯಕ್ತ ಮಾಡಿದ್ದಾರೆ. ಮಾನವ ಹಕ್ಕುಗಳ ಆಯೋಗ ಇವರಿಗೆ ಕನಿಷ್ಠ ವೇತನ ಖಾತ್ರಿಪಡಿಸಬೇಕೆಂದೂ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದರೂ ಸರಕಾರಗಳು ಜಾರಿ ಮಾಡಲು ಮುಂದೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಅಂಗನವಾಡಿ ನೌಕರರನ್ನು ಸೇವಾಜೇಷ್ಠತೆಗೆ ಪರಿಗಣಿಸಿ-ಉತ್ತಮ ಬದುಕು ಕಲ್ಪಿಸಿ: ಎಸ್‌.ವರಲಕ್ಷ್ಮಿ

ಸರಕಾರವು ಕಾರ್ಯಕರ್ತರ ಕಡೆಯಿಂದ ಐಸಿಡಿಎಸ್‌ನ 6 ಉದ್ದೇಶಗಳ ಜೊತೆಗೆ ಪ್ರಸ್ತುತ ಭಾಗ್ಯ ಲಕ್ಷ್ಮೀ, ಸ್ತ್ರೀಶಕ್ತಿ , ಚುನಾವಣಾ ಕೆಲಸಗಳು, ಆರೋಗ್ಯ ಇಲಾಖೆ, ಅಂಗವಿಕಲರ ಹಿರಿಯ ಸಬಲೀಕರಣ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆಯ ಕೆಲಸಗಳನ್ನು ನಿರಂತರವಾಗಿ ಮಾಡಿಸಲಾಗುತ್ತಿದೆ ಇಷ್ಟೆಲ್ಲಾ ಕೆಲಸಗಳು ಮಾಡಿದರೂ ಕೂಡಾ ಇವರ ಯಾವುದೇ ಬೇಡಿಕೆಗಳನ್ನು ಈಡೇರುತ್ತಿಲ್ಲ. ಮಾತ್ರವಲ್ಲದೇ ನೀತಿ ಆಯೋಗದ ಶಿಫಾರಸ್ಸಿನಂತೆ ಐಸಿಡಿಎಸ್ ಯೋಜನೆಯನ್ನು ನೇರ ನಗದು ಯೋಜನೆಯಡಿ ಜಾರಿ ಮಾಡಲು ಆದೇಶಿಸಲಾಗಿದೆ ಎಂದರು

ಕೇಂದ್ರದ ನೂತನ ಶಿಕ್ಷಣ ನೀತಿಯ ಜಾರಿಯ ಭಾಗವಾಗಿ 4 ವರ್ಷದ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಯಡಿಯಲ್ಲಿ ತಂದರೆ ಐಸಿಡಿಎಸ್ ಯೋಜನೆಯ ಉದ್ದೇಶಕ್ಕೆ ಮಾರಕವಾಗುವ ಸಂಭವವಿದೆ. ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಬೆಕು ಮುಂದಿನ ಬಜೆಟ್‌ನ್ನು ಸೇವಾ ಜೇಷ್ಠತೆ, ಮಿನಿ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಸಹಾಯಕರಿಗೆ ವೇತನ ಹೆಚ್ಚಳ, 2015 ರಿಂದ ನಿವೃತ್ತರಾದ 7166 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಇಡಗಂಡು ಕೊಡಲು  399.48 ಕೋಟಿ ರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಶಿಪಾರಸ್ಸು ಮಾಡಿದ್ದರೂ ಕೂಡ ಸರ್ಕಾರ ಒಂದು ರೂಪಾಯಿಯನ್ನು ಹೆಚ್ಚಿಸದೇ ಮಹಿಳಾ ವಿರೋಧಿ ಧೋರಣೆಯನ್ನು ಅನುಸರಿಸುತ್ತಾ ಇದ್ದಾರೆ ಎಂದರು.

ಇಷ್ಟೆಲ್ಲ ಧೋರಣೆಯನ್ನು ವಿರೋಧಿಸಿ ಮಾರ್ಚ್2020 ರಿಂದ ನಿರಂತರವಾಗಿ ಮನವಿ ಸಲ್ಲಿಕೆ, ಸಂಬಂಧಿಸಿದ ಅಧಿಕಾರಿಗಳು, ಸಚಿವರ ಬಳಿ ಚರ್ಚೆಗಳು ಧರಣಿ ಪ್ರತಿಭಟನೆಗಳು ಮಾಡಿದರೂ ಕೂಡ ಸರ್ಕಾರ ಅನುದಾನ ನೀಡುತ್ತಿಲ್ಲ. ಆದ್ದರಿಂದ  ಈ ಬೇಡಿಕೆಗಳ ಬಗ್ಗೆ ಸೆಪ್ಟೆಂಬರ್ 13 ರಿಂದ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿ.ಮಂಜುಳ,  ನಾಗರತ್ನಮ್ಮ ,  ಜಯಲಕ್ಷ್ಮಿ, ಗುಲ್ಜಾರ್, ಮೀನಾಕ್ಷಿ, ಚೇತನ, ಮಂಗಮ್ಮ, ಲಾಲು,ಇದ್ದರು.

ವರದಿ : ಅಮರೇಶ್‌ ಸಿ

 

Donate Janashakthi Media

Leave a Reply

Your email address will not be published. Required fields are marked *