ಸಚಿವರಿಗೆ ಖಾತೆಗಳು ಹಂಚಿಕೆ: ಸಿಎಂಗೆ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ, ಸಿ.ಸಿ.ಪಾಟೀಲ ಲೋಕೋಪಯೋಗಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ನೂತನವಾಗಿ ಸಚಿವರಾಗಿ 29 ಮಂದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದು ಎರಡು ದಿನಗಳ ನಂತರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಮುಖ್ಯಮಂತ್ರಿಗಳು ಹಣಕಾಸು ಇಲಾಖೆ ಉಳಿಸಿಕೊಂಡಿದ್ದಾರೆ. ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಗೃಹ ಖಾತೆ ನೀಡಲಾಗಿದೆ. ಅಲ್ಲದೆ, ಸಿ.ಸಿ.ಪಾಟೀಲ ಅವರಿಗೆ ಲೋಕೋಪಯೋಗಿ ಮತ್ತು ವಿ. ಸುನೀಲ್ ಕುಮಾರ್ ಅವರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾನೆಯನ್ನು ನೀಡಲಾಗಿದೆ.

ಇದನ್ನು ಓದಿ: ನೂತನ ಸಚಿವರಿಗೆ ತಾತ್ಕಾಲಿಕ ಉಸ್ತುವಾರಿ ಹಂಚಿಕೆ

ಮುರುಗೇಶ ನಿರಾಣಿಗೆ ಬೃಹತ್ ಕೈಗಾರಿಕೆ ನೀಡಲಾಗಿದ್ದರೆ, ಕೆ.ಎಸ್. ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ, ಹಜ್ ಮತ್ತು ವಕ್ಫ್ ಕೊಡಲಾಗಿದೆ.

ಸಚಿವರು ಮತ್ತು ಅವರ ಖಾತೆ ವಿವರ

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಹಣಕಾಸು, ಬೆಂಗಳೂರು ಅಭಿವೃದ್ಧಿ
  • ಗೋವಿಂದ ಕಾರಜೋಳ- ಜಲ ಸಂಪನ್ಮೂಲ
  • ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
  • ಬಿ. ಶ್ರೀರಾಮುಲು- ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ
  • ವಿ. ಸೋಮಣ್ಣ- ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ
  • ಉಮೇಶ್ ವಿ. ಕತ್ತಿ- ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ
  • ಎಸ್. ಅಂಗಾರ- ಮೀನುಗಾರಿಕೆ, ಬಂದರು
  • ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
  • ಆರಗ ಜ್ಞಾನೇಂದ್ರ- ಗೃಹ
  • ಡಾ.ಸಿ.ಎನ್. ಅಶ್ವತ್ಥನಾರಾಯಣ- ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿ
  • ಸಿ.ಸಿ. ಪಾಟೀಲ- ಲೋಕೋಪಯೋಗಿ
  • ಆನಂದ್ ಸಿಂಗ್- ಪರಿಸರ ಮತ್ತು ಪ್ರವಾಸೋದ್ಯಮ
  • ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ
  • ಮುರುಗೇಶ್ ಆರ್.‌ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  • ಅರಬೈಲ್ ಶಿವರಾಂ ಹೆಬ್ಬಾರ್- ಕಾರ್ಮಿಕ
  • ಎಸ್.ಟಿ. ಸೋಮಶೇಖರ್- ಸಹಕಾರ
  • ಬಿ.ಸಿ. ಪಾಟೀಲ- ಕೃಷಿ
  • ಬೈರತಿ ಬಸವರಾಜ- ನಗರಾಭಿವೃದ್ಧಿ
  • ಡಾ.ಕೆ. ಸುಧಾಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ
  • ಕೆ. ಗೋಪಾಲಯ್ಯ- ಅಬಕಾರಿ
  • ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಫ್
  • ಎಂ.ಟಿ.ಬಿ. ನಾಗರಾಜು- ಪೌರಾಡಳಿತ, ಸಣ್ಣ ಕೈಗಾರಿಕೆ
  • ಕೆ.ಸಿ. ನಾರಾಯಣ ಗೌಡ- ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆ
  • ಬಿ.ಸಿ. ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ವಿ. ಸುನೀಲ್ ಕುಮಾರ್- ಇಂಧನ, ಕನ್ನಡ ಮತ್ತು ಸಂಸ್ಕೃತಿ
  • ಹಾಲಪ್ಪ ಆಚಾರ್- ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
  • ಶಂಕರ ಪಾಟೀಲ್ ಬಿ. ಮುನೇನಕೊಪ್ಪ- ಕೈಮಗ್ಗ, ಜವಳಿ, ಸಕ್ಕರೆ
  • ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ

ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೆಲವರಿಗೆ ಖಾತೆ ಬದಲಾವಣೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸದಾಗಿ ಸಚಿವರಾದವರಿಗೂ ಕೆಲವು ಮಹತ್ವದ ಖಾತೆಯನ್ನು ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *