ಬೆಳಗಾವಿ: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮಂಡ್ಯದಲ್ಲಿ ಮತಪ್ರಮಾಣ ಕಡಿಮೆಯಾಗಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಕೆ. ಅವರು ಮಂಡ್ಯ ಚುನಾವಣೆ ಸೋಲು ದುರದೃಷ್ಟಕರ ಎಂದು ಉಲ್ಲೇಖಿಸಿದರು. ಅಲ್ಲದೆ, ಈ ಬಗ್ಗೆ ಪಕ್ಷದ ಚೌಕಟ್ಟಿನೊಳಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ನಾರಾಯಣಗೌಡ ʻʻಸುಧಾಕರ್ ನಮ್ಮ ನಾಯಕರೇನೂ? ಅವರು ಅವರ ಮತ ಕ್ಷೇತ್ರದ ಬಗ್ಗೆ ಮಾತನಾಡಲಿ. ನಾವು ನಮ್ಮ ಕ್ಷೇತ್ರದ ಬಗ್ಗೆ ಹೇಳುತ್ತೇವೆ. ಸಚಿವರಿಗೇನು ಗೊತ್ತು ಮಂಡ್ಯದ ಬಗ್ಗೆ, ಏನು ಮಾತನಾಡಬೇಕೆಂಬುದು ನನಗೂ ಗೊತ್ತಿದೆʼʼ ಎಂದು ಹೇಳಿದರು.
ಅಲ್ಲದೆ, ನಾರಾಯಣಗೌಡ ʻʻಅವರ ಕೆಲಸ ಅವರು ಮಾಡಲಿ. ನಮ್ಮ ಕ್ಷೇತ್ರದ ಬಗ್ಗೆ ಅವರಿಗೇನು ಗೊತ್ತು ರೀ… ಎಂದು ಗರಂ ಆಗಿ ಸುಧಾಕರ್ ವಿರುದ್ಧ ಮಾತನಾಡಿದರು.
ನಾವು ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿದ್ದೇವೆ. ಪಕ್ಷದ ಬೆಳೆಸುವ ಜವಾಬ್ದಾರಿ ಇದೆ. ನಾನು ಜವಾಬ್ದಾರಿಯಲ್ಲೇ ಇದ್ದೀನಿ ಎಂದು ಹೇಳಿದ್ದಾರೆ.