ಬೆಳಗಾವಿ: ಕೆ.ಆರ್ ಪುರಂ ವಿಧಾನಸಭೆ ವ್ಯಾಪ್ತಿಯ ಕಲ್ಕೆರೆ ಭಾಗದ ಭೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭೈರತಿ ಬಸವರಾಜ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ನೀಡಿರುವ ಆದೇಶದ ಪ್ರತಿಗೆ ಸಂಬಂಧಿಸಿದಂತೆ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೈಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್ ಸಚೇತಕ ಎಂ ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್, ಪಿ.ಆರ್ ರಮೇಶ್ ಜಂಟಿ ಸುದ್ದಿಗೋಷ್ಠಿ ಸುದ್ದಿಗೋಷ್ಠಿಯನ್ನು ಸುವರ್ಣಸೌಧದ ತಮ್ಮ ಕಚೇರಿಯಲ್ಲಿ ನಡೆಸಿದರು.
ಈ ವಿಚಾರವಾಗಿ ನಾವು ಇಂದು ನಿಳುವಳಿ ಸೂಚನೆ ಮಂಡಿಸಿದ್ದೇವೆ. ಕೋರ್ಟ್ ತೀರ್ಪಿನ ಪ್ರಕಾರವಾಗಿ ಐದು ಜನರ ಹೆಸರಿದೆ. ಐಪಿಸಿ ಸೆಕ್ಷನ್ ಅಡಿ ದಾಖಲಿಸುವಂತೆ ತೀರ್ಪು ನೀಡಿದೆ ಹಾಲಿ ಸಚಿವರ ಮೇಲೆ ಕೋರ್ಟ್ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ಮಾಡಿದೆ ಎಂದು ತಿಳಿಸಿದರು.
ಇದನ್ನು ಓದಿ: ಎಪಿಎಂಸಿ ಕಾಯ್ದೆ-ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ಸು ಪಡೆಯಲು ಕಾಂಗ್ರೆಸ್ ಆಗ್ರಹ
ಭೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ ಹೋಗಿ ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡು ಬಂದಿದ್ದಾರೆ. ಅಣ್ಣಯ್ಯಪ್ಪ ಅವರ ಕಡೆಯಿಂದ ಸಹಿ ಹಾಕಿಸಿಕೊಂಡ ಅವರು ಅದೇ ದಿನಾ ರಿಜಿಸ್ಟ್ರರ್ ಮಾಡಿಸುತ್ತಾರೆ. ಬೈರತಿ ಬಸವರಾಜ ಮತ್ತು ಶಂಕರ್ ಇಬ್ಬರು ಒಟ್ಟುಗೂಡಿ ರಿಜಿಸ್ಟ್ರರ್ ಮಾಡಿಸಿದ್ದಾರೆ. ಮತ್ತೊಬ್ಬರನ್ನು ಕರೆದುಕೊಂಡ ಹೋಗಿ ರಿಜಿಸ್ಟರ್ ಆಫೀಸಿನಲ್ಲಿ ಕುರಿಸಿ ಅವರೇ ಅಣ್ಣಯ್ಯಪ್ಪ ಎಂದು ಹೇಳಿದ್ದಾರೆ.
ನಕಲಿ ಮಾಲೀಕರನ್ನು ಸೃಷ್ಠಿ ಮಾಡಿದ್ದಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಠಿಸಿ ಅವ್ಯವಹಾರ ಮಾಡಿದ್ದಾರೆ. ಐದು ತಿಂಗಳ ಬಳಿಕ ಅಣ್ಣಯ್ಯಪ್ಪ ಹೆಸರಿನ ಖಾತಾ ಬದಲಾಗಿದೆ. ಅಣ್ಣಯ್ಯಪ್ಪ ನಿಧನ ಬಳಿಕ ಸೈಟ್ ಮಾರಾಟವಾಗಿದೆ. ನಿಯಮದಂತೆ ಅವರ ನಿಧನದ ಬಳಿಕ ಅವರ ಸಂಬಂಧಿಕರಿಗೆ ಜಮೀನು ಸೇರಬೇಕು. ಆದರೆ ಎಲ್ಲವೂ ನಕಲು ಮಾಡಿ, ಎನ್.ಆರ್ ಲೇಔಟ್ ಆಗಿ ಪರಿವರ್ತಿಸಲಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಸೈಟ್ ಮಾಡಿ ಮಾರಾಟ ಮಾಡಿದ್ದಾರೆ. ವ್ಯಕ್ತಿ ಬದುಕಿದ್ದಾಗಲೇ ನಕಲಿ ದಾಖಲೆ ಸೃಷ್ಟಿ ಮಾಡಿದ್ದ ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೋರ್ಟ್ ತೀರ್ಪಿನಂತೆ ಆರೋಪಿಗಳ ಮೇಲೆ ಎಫ್.ಐ.ಆರ್ ದಾಖಲಿಸಬೇಕು. ಐಪಿಸಿ 120ಬಿ, 420, 427, 465, 467 ಮತ್ತು 471 ಸೆಕ್ಷನ್ ಹಾಕಬೇಕು ಎಂದು ನ್ಯಾಯಾಲಯ ಹೇಳಿದೆ.
ಇದೇ ರೀತಿಯ ಹಲವು ಅಕ್ರಮಗಳು ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡ ಪ್ರಮಾಣದಲ್ಲಿ ಅವ್ಯವಹಾರರದಲ್ಲಿ ತೊಡಗಿರುವ ಆ ಕ್ಷೇತ್ರದ ಶಾಸಕ ಸಚಿವರಾಗಿದ್ದು, ಸರ್ಕಾರದಲ್ಲಿ ಮುಂದುವರೆಯಬೇಕಾ ಎಂದು ಪ್ರಶ್ನೆ ಮಾಡಿದರು.
ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ ಎಂದಾರೆ, ಬೈರತಿ ಬಸವರಾಜ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಪಕ್ಷವು ಭಾವ, ಬಾಮೈದುನಾ ಇಬ್ಬರು ಸೇರಿ ಸಾಕಷ್ಟು ಸೈಟ್ ಸೇಲ್ ಮಾಡಿದ್ದಾರೆ. ಅಲ್ಲದೆ, ಇವರು ಪೊಲೀಸ್ ಠಾಣೆಗಳಲ್ಲಿ ಬೇಕಾದವರನ್ನು ನೇಮಿಸಿಕೊಳ್ಳುತ್ತಾರೆ. ಹಾಕಿಕೊಂಡಿದ್ದಾರೆ. ಅವರ ಮಾತು ಕೇಳುವವರಿಗೆ ಮಾತ್ರ ಠಾಣೆಯಲ್ಲಿ ಇರಲು ಸಾಧ್ಯ.
ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಮೊದಲು ಪರಿಷತ್ ನಲ್ಲಿ ಚರ್ಚೆಗೆ ತೆಗೆದುಕೊಳ್ಳಿ. ನಂತರ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡ್ತೇವೆ ಎಂದು ಹೇಳಿದ್ದಾರೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.