ಪುಣೆ-ಲಕ್ನೋ ಸೂಪರ್ ಜೆಂಟ್ಸ್ ವಿರುದ್ದದ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಶುಬ್ಮನ್ ಗಿಲ್, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಗೆಲ್ಲಿಸಿ ಪ್ಲೇ ಆಫ್‌ಗೆರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಶುಬ್ಮನ್ ಗಿಲ್ ಸಚಿನ್ ತೆಂಡೂಲ್ಕರ್ ಅವರ 13 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ
ಏಪ್ರಿಲ್ 18, 2009ರಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಮೊದಲು ಬ್ಯಾಟಿಂಗ್ ಮಾಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪೂರ್ತಿ 20 ಓವರ್‌ಗಳನ್ನು ಆಡಿ ಒಂದೇ ಒಂದು ಸಿಕ್ಸರ್ ಕೂಡ ಗಳಿಸಿರಲಿಲ್ಲ. 2022ರ ಮೇ 11ರಂದು ನಡೆದ ಪಂದ್ಯದಲ್ಲೂ ಕೂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಗಿಲ್ ಒಂದು ಸಿಕ್ಸರ್ ಸಿಡಿಸದೆ ಅರ್ಧಶತಕಕ್ಕಿಂತ ಹೆಚ್ಚು ರನ್‌ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಅಂದಿನ ಪಂದ್ಯದಲ್ಲಿ ಸಚಿನ್ ಎದುರಿಸಿದ 49 ಎಸೆತಗಳಲ್ಲಿ 59 ರನ್ ಗಳಿಸಿದ್ದರೆ, ಗಿಲ್ ಕೂಡ 49 ಎಸೆತಗಳನ್ನೆದುರಿಸಿ 63 ರನ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು.
ದಕ್ಷಿಣ ಆಫ್ರಿಕಾದ ಕೇಪ್ಟೌನ್‌ನಲ್ಲಿ ನಡೆದ ಚೆನ್ನೈ v/s ಮುಂಬೈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 7 ಬೌಂಡರಿ ಗಳಿಸಿದ್ದರೆ, ಲಕ್ನೋ ಸೂಪರ್ ಜೆಂಟ್ಸ್ ಮೇಲೆ ಶುಬ್ನನ್ ಗಿಲ್ ಕೂಡ 7 ಬೌಂಡರಿಗಳನ್ನು ಬಾರಿಸಿದ್ದಾರೆ.
ಸಚಿನ್ ಅಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ 19 ರನ್‌ಗಳ ಗೆಲುವು ಸಾಸಿದ್ದರೆ, ನೆನ್ನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್ ಕಿಂಗ್ಸ್ ವಿರುದ್ಧ 62 ರನ್‌ಗಳ ಜಯ ಗಳಿಸಿದೆ.
ಶುಬ್ಮನ್ ಗಿಲ್ ಪಂದ್ಯ ಪುರುಷೋತ್ತಮರಾಗಿದ್ದಾರೆ. ಆದರೆ 49 ಸಮಬಲದ ಎಸೆತಗಳಲ್ಲಿ ಗಿಲ್ ಸಚಿನ್ ತೆಂಡೂಲ್ಕರ್ ಗಿಂತ ನಾಲ್ಕು ರನ್ ಹೆಚ್ಚು ಗಳಿಸಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ 2009ರಲ್ಲಿ ಮಾಡಿದ ದಾಖಲೆಯನ್ನು ಕಳಚಿಹಾಕಿ, ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.