ನವದೆಹಲಿ : ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರವರಿಗೆ ಕೋವಿಡ್-19 ದೃಢಪಟ್ಟಿರುವುದರಿಂದ ಅವರು ಮನೆಯಲ್ಲಿಯೇ ಪ್ರತ್ಯೇಕ ವಾಸವಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಡಿರುವ ಸಚಿನ್ ʻʻನನಗೆ ಕೆಲವು ಅಲ್ಪಪ್ರಮಾಣದ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ನಾನು ಕೋವಿಡ್ ಪರೀಕ್ಷೆಯನ್ನು ಮಾಡಿಸಿದೇನು. ಕೋವಿಡ್ ಇರುವುದು ದೃಢಗೊಳ್ಳುತ್ತಿದ್ದಂತೆ ವೈದ್ಯರ ಶಿಫಾರಸ್ಸಿನಂತೆ ಮುನ್ನಚ್ಚರಿಕೆಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
— Sachin Tendulkar (@sachin_rt) March 27, 2021
ವೈದ್ಯರ ಸಲಹೆಗಳನ್ನು ನಿರಂತರವಾಗಿ ಪಾಲಿಸುತ್ತಿದ್ದೇನೆ. ಮನೆಯಲ್ಲಿರುವವರಿಗೆ ಕೋವಿಡ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿಲ್ಲವಾದ್ದರಿಂದ ನಾನು ಮನೆಯಲ್ಲಿಯೇ ನಿರ್ಬಂಧಕ್ಕೆ ಒಳಗಾಗಿರುವೆ. ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರುಗಳಿಗೆ ಧನ್ಯವಾದಗಳು ಮತ್ತು ನಿಮ್ಮ ಆರೋಗ್ಯವ ಕಾಪಾಡಿಕೊಳ್ಳುತ್ತಿರೀ ಎಂದು ಸಂದೇಶ ನೀಡಿದ್ದಾರೆ.
ಸಚಿನ್ ಇತ್ತೀಚೆಗೆ ರಾಯ್ಪುರದಲ್ಲಿ ನಡೆದ ರಸ್ತೆ ಸುರಕ್ಷತೆ ವಿಶ್ವ ಸರಣಿ ಚಾಲೆಂಜ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.