ಶಬರಿಮಲೆ | ತಂದೆಯನ್ನು ಕಾಣದ ಕಾರಣಕ್ಕೆ ಅಳುತ್ತಿರುವ ಬಾಲಕನ ವಿಡಿಯೊವನ್ನು ತಪ್ಪಾಗಿ ಬಿಂಬಿಸುತ್ತಿರುವ ಬಿಜೆಪಿ ಬೆಂಬಲಿಗರು

ಕೇರಳ ಶಬರಿಮಲೆಯ ದೇಗುಲಕ್ಕೆ ಯಾತ್ರೆಗೆ ತೆರಳುತ್ತಿದ್ದ ಪುಟ್ಟ ಬಾಲಕನೊಬ್ಬ ತನ್ನ ತಂದೆಯಿಂದ ಬೇರ್ಪಟ್ಟ ಕಾರಣಕ್ಕೆ ಬಸ್‌ವೊಂದರ ಒಳಗಿನಿಂದ ಪೊಲೀಸ್ ಅಧಿಕಾರಿಯೊಬ್ಬರ ಸಹಾಯ ಯಾಚಿಸುತ್ತಿರುವ ವಿಡಿಯೊವೊಂದನ್ನು ಬಿಜೆಪಿ ಬೆಂಬಲಿಗರು ಅದನ್ನು ತಪ್ಪಾಗಿ ಬಿಂಬಿಸಿ ವೈರಲ್ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಯು ಮಗುಗೆ ಧೈರ್ಯ ತುಂಬುವುದು ಮತ್ತು ಸ್ವಲ್ಪ ಸಮಯದಲ್ಲೆ ಮಗು ತನ್ನ ತಂದೆಯನ್ನು ನೋಡಿ ಸಮಾಧಾನಗೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಅದಾಗ್ಯೂ, ಅನೇಕ ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿಗರ ಟ್ವಿಟರ್ ಖಾತೆಗಳು, ಅಯ್ಯಪ್ಪ ದೀಕ್ಷೆ ಪಡೆದ ಹುಡುಗನನ್ನು ಕೇರಳ ಸರ್ಕಾರ ಬಂಧಿಸಿದೆ ಎಂದು ಸುಳ್ಳು ನಿರೂಪಣೆಯನ್ನು ವಿಡಿಯೊವನ್ನು ವೈರಲ್ ಮಾಡುತ್ತಿವೆ. ಜೊತೆಗೆ ಕೆಲವು ಖಾತೆಗಳು ಕೇರಳ ಸರ್ಕಾರವು ಹಿಂದೂಗಳ ಮೇಲೆ ‘ದೌರ್ಜನ್ಯ’ ಮಾಡುತ್ತಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪ್ರಯಾಣಕ್ಕೆ 30 ವಿಮಾನ ಟಿಕೆಟ್ ಉಚಿತ ಕೊಡಿ ; ಬಸನಗೌಡ ಪಾಟೀಲ್

ಹಿಂದೂ ಹಕ್ಕುಗಳ ಕಾರ್ಯಕರ್ತ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿರುವ Mr. ಸಿನ್ಹಾ ಎಂಬ ಬಳಕೆದಾರ ಈ ವಿಡಿಯೊವನ್ನು ಹಂಚಿಕೊಂಡು “ಕೇರಳದಲ್ಲಿ ಹಿಂದೂಗಳ ಸ್ಥಿತಿ, ಅವರು ಒಂದು ಮಗುವನ್ನು ಕೂಡಾ ಬಿಡಲಿಲ್ಲ” ಎಂಬ ಶೀರ್ಷಿಕೆ ಬರೆದು ಜನರ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಸುಮಾರು ನಾಲ್ಕು ಲಕ್ಷ ಅನುಯಾಯಿಗಳನ್ನು ಹೊಂದಿರುವ ಮತ್ತೊಬ್ಬ ಬಿಜೆಪಿ ಬೆಂಬಲಿಗ ರಿಷಿ ಬಾಗ್ರೀ ಅವರು ಕೂಡಾ “ಕೇರಳದಲ್ಲಿ ಸರ್ಕಾರವು ಭಕ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಇದು ಹಿಂದೂಗಳ ಅವಸ್ಥೆ. ಅವರು ಮಕ್ಕಳನ್ನು ಸಹ ಬಿಡಲಿಲ್ಲ” ಎಂದು ಬರೆದುಕೊಂಡಿದ್ದಾರೆ.

“ಶಬರಿಮಲೆ ದೇಗುಲದಲ್ಲಿ ಭಯಭೀತರಾದ ಮಗುವಿನ ಕೂಗು ನಿಮ್ಮನ್ನು ನಿಶ್ಚೇಷ್ಟಿತಗೊಳಿಸುತ್ತದೆ … ಅವರು ಹಿಂದೂ ಭಕ್ತರಿಗೆ ಕಳಪೆ ವ್ಯವಸ್ಥೆಗಳ ನಡುವೆ ಕಾಣೆಯಾದ ತನ್ನ ತಂದೆಯನ್ನು ಹುಡುಕುತ್ತಿದ್ದಾರೆ… ಪಿಣರಾಯಿ ಸರ್ಕಾರವು ಹಿಂದೂ ದೇವಾಲಯದ ಹಣವನ್ನು ಬಯಸುತ್ತದೆ ಆದರೆ ಏನನ್ನೂ ಹಿಂತಿರುಗಿಸುವುದಿಲ್ಲ. ಕೇರಳವನ್ನು ಉಳಿಸಿ, ಈಗ ಇಲ್ಲವೆಂದರೆ ತಡವಾದರೆ ಕಷ್ಟಕರವಾಗಬಹುದು” ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪೋಸ್ಟ್ ಮಾಡುವ ಮೂಲಕ ಜನರನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿದ್ದಾರೆ.

ಆದಾಗ್ಯೂ, ದ್ವೇಷವನ್ನು ಹರಡಲು ಕುಖ್ಯಾತವಾಗಿರುವ ಈ ಬಲಪಂಥೀಯ ಖಾತೆಗಳು ಹಂಚಿಕೊಂಡ ವೀಡಿಯೊದಲ್ಲಿ, ಹುಡುಗ ‘ಅಪ್ಪಾ ಅಪ್ಪಾ’ ಎಂದು ಅಳುವುದು ಕೇಳಬಹುದು. ಮತ್ತು ಸ್ವಲ್ಪ ಸಮಯದ ನಂತರ ಒಬ್ಬ ಪೋಲೀಸ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಮಗುವಿನ ತಂದೆಯನ್ನು ಕಂಡುಹಿಡಿಯುತ್ತೇವೆ ಎಂದು ಭರವಸೆ ನೀಡುತ್ತಾರೆ. ಜೊತೆಗೆ ಕೆಲವೇ ನಿಮಿಷಗಳಲ್ಲಿ ಅವರ ತಂದೆಯನ್ನು ಹುಡುಗನನ್ನು ಭೇಟಿಯಾಗುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ.

ಇದನ್ನೂ ಓದಿ: 3 ಕ್ರಿಮಿನಲ್ ಕಾನೂನು ಮಸೂದೆ ವಾಪಾಸು ಪಡೆದ ಕೇಂದ್ರ ಸರ್ಕಾರ!

ಆದಾಗ್ಯೂ ಹಲವಾರು ಬಲಪಂಥೀಯ ಖಾತೆಗಳು ಘಟನೆಯ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಬಸ್‌ನ ಬಣ್ಣದ ಹಿನ್ನಲೆಯಲ್ಲಿ ಬಾಲಕನನ್ನು ಪೊಲೀಸ್ ವಾಹನದಲ್ಲಿ ಬಂಧಿಸಲಾಗಿದೆ ಎಂದು ಸುಳ್ಳು ಮಾಹಿತಿ ಹಂಚುತ್ತಿದ್ದಾರೆ. ಆದರೆ ಈ ಬಸ್ಸು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ್ದು ಎಂದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಿಳಿಯುತ್ತದೆ. ಅದಾಗ್ಯೂ ಈ ಉದ್ದೇಶಪೂರ್ವಕ ದುಷ್ಕೃತ್ಯದ ಬಗ್ಗೆ ಕೇರಳ ಪೊಲೀಸರು ಇನ್ನೂ ಹೇಳಿಕೆ ನೀಡಿಲ್ಲ.

ಈ ಮಧ್ಯೆ, ಶಬರಿಮಲೆಯಲ್ಲಿ ಯಾತ್ರಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ಕೇರಳ ಸರ್ಕಾರದ ವಿಫಲವಾಗಿದೆ ಎಂದು ಟೀಕಿಸಲು ರಾಜ್ಯ ಕಾಂಗ್ರೆಸ್‌ ಅದೇ ಬಾಲಕನ ಚಿತ್ರದ ಜೊತೆಗೆ ಮತ್ತೊಂದು ಅಳುತ್ತಿರುವ ಮಗುವಿನ ಚಿತ್ರವನ್ನು ಬಳಸಿದೆ. ಜೊತೆಗೆ ಬಲಪಂಥೀಯರು ಮತ್ತು ನಮ್ಮದು ಒಂದೇ ಮಾತನ್ನು ಹೇಳುತ್ತಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿದೆ. “ಬಳಸಿದ ಚಿತ್ರವೂ ಪೋಸ್ಟ್‌ಗೆ ಪ್ರಮುಖವಾಗಿಲ್ಲ, ಶಬರಿಮಲೆಯಲ್ಲಿ ಮಕ್ಕಳು ತೀವ್ರವಾಗಿ ಬಳಲುತ್ತಿರುವ ಕಾರಣ ಅದನ್ನು ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಬಳಸಲಾಗಿದೆ” ಎಂದು ಕೇರಳ ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್ ಹೇಳಿದೆ.

ವಿಡಿಯೊ ನೋಡಿ: ಸರ್ಕಾರಕ್ಕೆ ನಾವು ಕೊಡುವ ತೆರಿಗೆ ಹಣ ನಮ್ಮ ಅಭಿವೃದ್ಧಿಗೆ ಬಳಕೆಯಾಗಬೇಕು – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *