ಸಾರ್ವಜನಿಕ ಶಾಲಾ ಶಿಕ್ಷಣ ಸುಧಾರಣೆಗೆ ಕೇರಳ ಮಾದರಿ

  • ನೂರು ದಿನಗಳ ಕಾರ್ಯಕ್ರಮದ ಭಾಗವಾಗಿ ೩೪ ಶಾಲೆಗಳ ನಿರ್ಮಾಣ

ತಿರುವನಂತಪುರ: ಕರ್ನಾಟಕದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳನ್ನು ತೆರೆಯಲು ಪ್ರತಿ ಜೂನ್‌ನಲ್ಲಿ  ಪ್ರಕಟಣೆ ಹೊರಡಿಸುತ್ತಿದ್ದರೆ ಕೇರಳದಲ್ಲಿ ಅತ್ಯಾಧುನಿಕ ಶಾಲೆಗಳನ್ನು ಆರಂಭಿಸುತ್ತಿದೆ.  

ಫಸ್ಟ್‌ಬೆಲ್‌ ಮತ್ತು ಕುಟುಂಭಶ್ರೀ ಯೋಜನೆಗಳ ಮೂಲಕ ಕೇರಳದ ಸಾರ್ವಜನಿಕ ಶಿಕ್ಷಣವನ್ನು ಸುಧಾರಿಸುವ  ಪಣ ತೊಟ್ಟಿದ್ದ ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ಅದಕ್ಕಾಗಿ 100  ದಿನಗಳ ಯೋಜನೆಯನ್ನು ಹಮ್ಮಿಕೊಂಡಿತ್ತು. ಈ 100  ದಿನಗಳ ಯೋಜನೆ ಭಾಗವಾಗಿ ಕೇರಳದ ವಿವಿಧ ವಿಧಾನಾಸಭಾ ಕ್ಷೇತ್ರಾದ್ಯಂತ ನಿರ್ಮಿಸಿದ 34 ಹೊಸ ಶಾಲಾ ಕಟ್ಟಡಗಳನ್ನುಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್   ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

ಇವುಗಳಲ್ಲಿ ಕೋಜಿಕೋಡ್‌ನಲ್ಲಿ ಎಂಟು, ಕಣ್ಣೂರಿನಲ್ಲಿ ಐದು, ತಿರುವನಂತಪುರಂ, ಕೊಲ್ಲಂ ಮತ್ತು ಎರ್ನಾಕುಲಂನಲ್ಲಿ ತಲಾ ನಾಲ್ಕು, ಕೊಟ್ಟಾಯಂನಲ್ಲಿ ಮೂರು ಮತ್ತು ಮಲಪ್ಪುರಂ ಮತ್ತು ಇಡುಕಿಯಲ್ಲಿ ತಲಾ ಎರಡು, ಆಲಪ್ಪುಳ ಮತ್ತು ತ್ರಿಶೂರ್‌ನಲ್ಲಿ ಒಂದು ಶಾಲೆಗಳನ್ನು ಉದ್ಘಾಟಿಸಲಾಗಿದೆ.

ಈ ಶಾಲೆಗಳು ಹೈಟೆಕ್ ತರಗತಿ ಕೊಠಡಿಗಳು, ಕಿಚನ್ ಬ್ಲಾಕ್‌ಗಳು, ಆಟದ ಮೈದಾನಗಳು,  ಟಾಯ್ಲೆಟ್ ಬ್ಲಾಕ್‌ಗಳು, ವಿಜ್ಞಾನ ಮತ್ತು ಕಂಪ್ಯೂಟರ್ ಪ್ರಯೋಗಾಲಯಗಳು ಇತ್ಯಾದಿಗಳಿವೆ. ಈ ಹಿಂದೆ  5 ಕೋಟಿ ರೂ. ವೆಚ್ಚ ಮಾಡಿ  22 ಕಟ್ಟಡಗಳನ್ನು ನಿರ್ಮಿಸಿ  ಸೇವೆಗೆ ನೀಡಲಾಗಿತ್ತು. ಇನ್ನೂ 14 ಶಾಲಾ ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ.

ಶಾಲೆಯಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕೇರಳ 3,129 ಕೋಟಿ ರೂ. ಕಾರ್ಯಕ್ರಮದ ಅಂಗವಾಗಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 250 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.  ಜೊತೆಗೆ ಅಸ್ತಿತ್ವದಲ್ಲಿರುವ 350ಕ್ಕೂ ಹೆಚ್ಚು ಶಾಲೆಗಳಲ್ಲಿ, ಮೂಲಭೂತ ಸೇವೆಗಳನ್ನು ಒದಗಿಸಲಾಗುತ್ತಿದೆ. ಕೆಐಐಎಫ್‌ಬಿ (ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ) ಮೂಲಕ ಸರ್ಕಾರ ಹಣವನ್ನು ಖರ್ಚು ಮಾಡುತ್ತಿದೆ.

ಶಾಲೆಗಳನ್ನು ಶ್ರೇಷ್ಠತೆಯ ಕೇಂದ್ರಗಳನ್ನಾಗಿ ಪರಿವರ್ತಿಸಲು 141 ಶಾಲೆಗಳಿಗೆ 5 ಕೋಟಿ, 395 ಶಾಲೆಗಳಿಗೆ 3 ಕೋಟಿ, 446 ಶಾಲೆಗಳಿಗೆ 1 ಕೋಟಿ ರೂ. ಸೇರಿ ಒಟ್ಟು 2,336 ಕೋಟಿ ರೂ.ಗಳನ್ನು ಕೇರಳ ಸರ್ಕಾರ ವಿನಿಯೋಗಿಸುತ್ತಿದೆ. ಇದಲ್ಲದೆ ಹೈಟೆಕ್ ತರಗತಿ ಕೊಠಡಿಗಳಿಗಾಗಿ ರಾಜ್ಯವು 793 ಕೋಟಿ ರೂ. ಖರ್ಚು ಮಾಡುತ್ತಿದೆ. 

 

32 ಶಾಲೆಗಳ ಮೂಲಸೌಕರ್ಯ ನವೀಕರಣವನ್ನು 3 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಭಾಗಗಳು ಸುಳ್ಳು ಸುದ್ದಿಗಳನ್ನು ತರಲು ಪ್ರಯತ್ನಿಸುತ್ತಿವೆ. ಎಲ್ಲಾ ಶಾಲೆಗಳನ್ನು ಉತ್ತರ ಕೇರಳ ಅಥವಾ ಮಲಬಾರ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ ಎಂಬುದು ನಕಲಿ ಸುದ್ದಿ. ಆದರೆ ಇದು ನಿಜವಲ್ಲ. ಬಲರಾಮಪುರಂನಿಂದ ಚೆಲಕ್ಕರವರೆಗೆ ನಾವು 19 ಶಾಲೆಗಳನ್ನು ನಿರ್ಮಿಸಿದ್ದೇವೆ ”ಎಂದು  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

ಕೋವಿಡ್‌ ಕಾರಣದಿಂದ ಶಾಲೆಗಳನ್ನು ಆರಂಭಿಸಲಾಗದ ಸ್ಥಿತಿಯಲ್ಲಿರುವುದರಿಂದ ಮಕ್ಕಳ ಕಲಿಕೆಗೆ ಸಮಸ್ಯೆಯಾಗಬೃದು ಎಂದು ಕೇರಳ ಸರ್ಕಾರವು ಎರಡು ಟಿವಿ ಚಾನೆಲ್‌ಗಳನ್ನು ಆರಂಭಿಸಿತ್ತು. ಜೊತೆಗೆ ಯೂಟ್ಯೂಬ್‌ ಮೂಲಕ ಆ ಪಾಠಗಳೂ ಎಂದು ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಟಿವಿ ಮತ್ತು ಮೊಬೈಲ್‌ಗಳು ಇಲ್ಲದ ಮಕ್ಕಳಿಗೆ ಸ್ವಯಂಸೇವಾಸಂಸ್ಥೆಗಳು ಮೊಬೈಲ್‌ ನೀಡುವಂತೆ ಸಿಎಂ ಪಿಣರಾಯಿ ವಿಜಯನ್‌ ಕರೆ ನೀಡಿದ್ದರು. ಅದರಂತೆ ಒಂದು ವಾರದಲ್ಲಿ ಮೂವತ್ತೆರಡು ಸಾವಿರ ಮೊಬೈಲ್‌ಗಳು ಸಂಗ್ರಹವಾಗಿ ವಿದ್ಯಾರ್ಥಿಗಳ ಕೈ ಸೇರಿದ್ದವು.

ಇತ್ತೀಚೆಗೆ ಕೇಂದ್ರೀಯ ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿದ್ದ ಸಾಕ್ಷರತೆ ಪ್ರಮಾಣದಲ್ಲಿ ಕೇರಳ 2019-2020ನೇ ಸಾಲಿನಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿತ್ತು.

 

 

Donate Janashakthi Media

Leave a Reply

Your email address will not be published. Required fields are marked *