ಎಸ್‌ ಎಲ್‌ ಭೈರಪ್ಪನವರದ್ದು ಅಬೌದ್ಧಿಕ ಮಾತು: ಡಾ ಎನ್. ಚಿನ್ನಸ್ವಾಮಿ ಸೋಸಲೆ

ಎಸ್ ಎಲ್ ಭೈರಪ್ಪನವರು ಭಾರತ ಒಂದು  “ಭಿಕ್ಷುಕ ರಾಷ್ಟ್ರ” ಎಂದು ಹೇಳಿರುವ ಬಗ್ಗೆ ತಮ್ಮದೇ ಆದ ಅಭಿಪ್ರಯಾವನ್ನು ವ್ಯಕ್ತಪಡಿಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ ಎನ್‌ ಚಿನ್ನಸ್ವಾಮಿ ಸೋಸಲೆ ಅವರು ಅಬೌದ್ಧಿಕ ಮಾತಿಗೆ ಮುಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತಳಬುಡ ಇಲ್ಲದ  – ಆಧಾರರಹಿತ  – ಆಸ್ಥಾನ ಕೇಂದ್ರಿತ ಅಥವಾ ಸ್ವಘೋಷಿತ ವೈದಿಕ ಕೇಂದ್ರಿತ ಸಾಹಿತ್ಯ ಬರೆದ  ಸ್ವಘೋಷಿತ   “ಖ್ಯಾತ ” ಸಾಹಿತಿ ಎಸ್ ಎಲ್ ಭೈರಪ್ಪನವರು ನಮ್ಮ ದೇಶವನ್ನು “ಭಿಕ್ಷುಕರ” ದೇಶವೆಂದು ಕರೆದಿದ್ದಾರೆ.

ಶತಶತಮಾನಗಳಿಂದ ದುಡಿಯುವ ಜನರ ದುಡಿಮೆ – ಶ್ರಮ –  ಬೇವರನ್ನೆ “ತುಪ್ಪ” ವಾಗಿಸಿಕೊಂಡು, ಹೊಟ್ಟೆ ಬಿರಿಯುವ ಹಾಗೆ ಉಂಡು – ತೇಗಿ  ಸಮೃದ್ಧವಾಗಿದ್ದಾಗ ಇವರ ದೇಶ ಸಮೃದ್ಧ – ಶ್ರೀಮಂತವಾಗಿತ್ತು. ದುಡಿಯುವ ವರ್ಗದಲ್ರೆಲ್ಲರೂ ಇವರಿಗೆ ಭಿಕ್ಷುಕ ರಾಗಿ  ಕಾಣಲಿಲ್ಲ. ಕಂಡೂರು ಇವರ ಕಣ್ಣಿಗೆ ಹಾಗೂ ಮಿದುಳಿಗೆ   ಶತಶತಮಾನಗಳಿಂದ ಅಂಟಿರುವ  ಅಳಿಸಲಾರದ ಪೊರೆ ಕಾಣದಂತೆ ಮಾಡಿತ್ತು. ಈ ರಾಷ್ಟ್ರದ ಮೂಲನಿವಾಸಿಗಳ ದುಡಿಮೆಯ ಬೆವರನ್ನು ತಿಂದುತಾನೆ ಇವರು ತಮಗೆ ತಾವೇ ಸ್ವ-ಘೋಷಿಸಿಕೊಂಡ  ಶ್ರೇಷ್ಠರು ಎಂದು ಮೆರೆದದ್ದು. ಇವರು ವೈಭವಕ್ಕೆ ಸಾಮಾನ್ಯ ಜನರ ಶಕ್ತಿ – ಶ್ರಮ – ದುಡಿಮೆ-  ಬೆವರು- ಭಿಕ್ಷೆ ಆಗಲಿಲ್ಲ. ಇದು ಅವರ ಕರ್ತವ್ಯವಾಗಿತ್ತು!!!

ಆದರೆ ಇವಾಗ ಜಗತ್ತಿನ ಸಮಸಂಸ್ಕೃತಿಯ ಹರಿಕಾರರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರ “ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು” ಎಂಬ ತತ್ವ ಸಿದ್ಧಾಂತವನ್ನು ಮೂಲಧಾತು ಆಗಿಸಿಕೊಂಡು ರಚನೆಗೊಂಡ ಪ್ರಪಂಚಕ್ಕೆ ಮಾದರಿಯಾದ ಸಂವಿಧಾನ ಈ ದೇಶದ ದುಡಿಯುವ ವರ್ಗದವರಿಗೆ ಸಮಸಂಸ್ಕೃತಿಯ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ಮೇಲೆ ಇವರಿಗೆ ಅವರದಲ್ಲದ ಈ ಭಾರತ ದೇಶ “ಭಿಕ್ಷುಕ ರಾಷ್ಟ್ರ”ವಾಗಿ ಕಂಡಿತು. ಕಾಣಲೇಬೇಕು ತಾನೇ.

ಅದಕ್ಕೆ ನಾನು ಮೇಲೆ ಹೇಳಿದ್ದು “ಇವರಿಗೆ ಭಾರತದ ಭೂಪಟ (ಅವರು ಕಂಡಿರುವ ಸಾಂಪ್ರದಾಯಿಕ ಭಾರತ) ಮಾತ್ರ ಗೊತ್ತು -ಆದರೆ ಈ ಪವಿತ್ರ ಭಾರತದ ಬಾಬಾಸಾಹೇಬ ಅಂಬೇಡ್ಕರ್ ಅವರು ಅಂತರಾಳದಿಂದ ಕಂಡ ಭೂಪ್ರದೇಶ (ಬಹುಸಂಸ್ಕೃತಿಯ ಜನಾಂಗದ- ಬಹುಭಾಷೆಯ ಜನಾಂಗದ- ಬಹು ಪ್ರಾದೇಶಿಕ ವೈವಿಧ್ಯತೆಯ ಭಾರತ)ಕಿಂಚಿತ್ತು ಗೊತ್ತಿಲ್ಲ. ಖ್ಯಾತ – ಪ್ರಖ್ಯಾತ – ಅಡುಗೆಮನೆ ಖ್ಯಾತಿಯ ಸಾಹಿತಿಗಳು ಎನಿಸಿಕೊಂಡವರು ಇದನ್ನು ತಿಳಿಯುವ ಆಸಕ್ತಿಯೂ ಇಲ್ಲ ಎಂದು” ಇದರ ಸ್ವಲ್ಪವಾದರೂ ಅರಿವಿದ್ದರೆ ಮೇಲಿನ ಮಾತನ್ನು ಅವರು ಖಂಡಿತ ಹೇಳುತ್ತಿರಲಿಲ್ಲ.

ನಮ್ಮ ಮೂಲ ನಿವಾಸತ್ವದ –  ಪರಂಪರೆ  ಅವರಾದ ಮುತ್ತಾತ – ಮುತ್ತಜ್ಜಿ – ತಾತ – ಅಜ್ಜಿ, ನನ್ನಪ್ಪ – ನನ್ನವ್ವರಿಗೆ ಈ ದೇಶ ಎಂದೆಂದಿಗೂ ಭಿಕ್ಷುಕ ರಾಷ್ಟ್ರವಾಗಿ ಕಾಣಲು ಸಾಧ್ಯವೇ ಇಲ್ಲ. ಕನಸು ಮನಸ್ಸಿನಲ್ಲಿಯೂ ಎಂದಿಗೂ ಆ ಭಾವನೆ ಅವರಲ್ಲಿ ಕಿಂಚಿತ್ತು ನೋಡಿರುವುದಿಲ್ಲ… ಏಕೆಂದರೆ ಈ ದೇಶ ಅವರದು- ಈ ಭಾಷೆ ಅವರದು- ಈ ಭೂಮಿ ಅವರದು- ದುಡಿಮೆ ಅವರದು. ಅದಕ್ಕಾಗಿ ನನ್ನವರಿಗೆ ಇದು ಸಮೃದ್ಧಿಯ ಭಾರತ. ಅವರ ಅಂತರಾಳದ – ಒಡಲಾಳದ ದೇಶ.

ಅಸಂಸ್ಕೃತಿ ಪ್ರತಿಪಾದನೆ ಮಾಡುವವರು ಈ ದೇಶಕ್ಕೆ ಆಕ್ರಮಣ ಮಾಡಿ ತಮಗೆ ಬೇಕಾದಂತೆ “ಮನು ಸಂಸ್ಕೃತಿ” ಆಧಾರದಲ್ಲಿ ಒಡೆದಾಳುವ ನೀತಿಯ ತತ್ವ-ಸಿದ್ಧಾಂತದಲ್ಲಿ “ಅಸಂವಿಧಾನಾತ್ಮಕವಾಗಿ” ದೇಶವನ್ನು “ಅಸಾಂಸ್ಕೃತಿಕವಾಗಿ” ಆಳ್ವಿಕೆ ಮಾಡಲು ಆರಂಭಿಸಿದಾಗ ಇವರಿಗೆ ಭಾರತ ಸಮೃದ್ಧವಾಗಿತು.

ಆದರೆ… ಮೂಲಭೂತ ಹಕ್ಕುಗಳ ಆಧಾರದ ಮೇಲೆ ಸಮಸಂಸ್ಕೃತಿಯ ಸಂವಿಧಾನದಿಂದ ಇಡೀ ಭಾರತವೇ ಏಕ ಮುಷ್ಟಿಯಿಂದ ಮುನ್ನಡೆದು – ಇವರ ಪಾರಂಪರಿಕ  ಅಮಾನವೀಯ – ಅಮಾನುಷ್ಯ ಸ್ವಘೋಷಿತ “ಅಲಿಖಿತ” ಹಕ್ಕುಗಳನ್ನು “ಲಿಖಿತವಾಗಿ” ಕಿತ್ತುಕೊಂಡ ಕಾರಣಕ್ಕಾಗಿ ನಮ್ಮ ಸಮೃದ್ಧ ಭಾರತ ಇವರಿಗೆ ಭಿಕ್ಷುಕ ರಾಷ್ಟ್ರವಾಗಿತ್ತು.

ಈ ಸಮೃದ್ಧ ಭಾರತಕ್ಕೆ ನನ್ನಪ್ಪನ ಕೊಡುಗೆ ಅಪಾರವಾಗಿದೆ. ನಿಮ್ಮ ಕೊಡುಗೆ ಏನು ಎಂಬುದನ್ನು ನೀವೇ ಸ್ಪಷ್ಟಪಡಿಸಿ ಭೈರಪ್ಪನವರೇ.

Donate Janashakthi Media

Leave a Reply

Your email address will not be published. Required fields are marked *