2216 ಹುದ್ದೆ ಆದರೆ ಬರೋಬ್ಬರಿ 25,000ಕ್ಕೂ ಹೆಚ್ಚು ಅರ್ಜಿ; ನೇಮಕಾತಿ ಪ್ರಕ್ರಿಯೆಯಲ್ಲಿ ನೂಕುನುಗ್ಗಲು

ಮುಂಬೈ : ದೇಶದಲ್ಲಿ ನಿರುದ್ಯೋಗ ಎಷ್ಟರ ಮಟ್ಟಿಗೆ ಎಂದು ತಿಳಿಯಲು ಈ ಒಂದು ದೃಶ್ಯವನ್ನು ನೋಡಿದರೆ ಸಾಕು. ಏರ್​ ಇಂಡಿಯಾ ಏರ್​ಪೋರ್ಟ್​ ಲೋಡರ್​ಗಳ ಹುದ್ದೆಗಾಗಿ  ನಡೆಸಿದ್ದ ನೇಮಕಾತಿ ಪ್ರಕ್ರಿಯೆ ವೇಳೆಯಲ್ಲಿ ನೂಕುನುಗ್ಗಲು ಉಂಟಾಗಿದ್ದು, ಇರುವುದು 2216 ಹುದ್ದೆ ಆದರೆ ಬರೋಬ್ಬರಿ 25,000ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ  ಆಕಿದ್ದಾರೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಅಭ್ಯರ್ಥಿಗಳು ಅರ್ಜಿ ವಿತರಣಾ ಕೌಂಟರ್ ಅನ್ನು ತಲುಪಲು ಪರಸ್ಪರ ತಳ್ಳಾಡುವುದನ್ನು ಕಾಣಬಹುದು. ಎನ್​ಡಿಟಿವಿ ಈ ಸುದ್ದಿಯನ್ನು ವರದಿ ಮಾಡಿದ್ದು, ಅರ್ಜಿ ಪಡೆಯಲು ಅಭ್ಯರ್ಥಿಗಳು ಗಂಟೆಗಟ್ಟಲೆ ಊಟ, ನೀರು ಇಲ್ಲದೆ ಕಾದಿದ್ದಾರೆ. ಈ ಸಂದರ್ಭದಲ್ಲಿ ಕೆಲವರು  ಅಸ್ವಸ್ಥಗೊಂಡರು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಕಾಂಗ್ರೆಸ್​ ಆಗಾಗ ಆರೋಪಿಸುತ್ತಲೇ ಇದೆ, ಪ್ರಸ್ತುತ ನಡೆಯುತ್ತಿರುವ ಘಟನೆಗಳು ಇದಕ್ಕೆಲ್ಲಾ ಪುಷ್ಟಿ ನೀಡುವಂತಿದೆ.

ಏರ್​ ಪೋರ್ಟ್​ ಲೋಡರ್​ಗಳೆಂದರೆ ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು ಮತ್ತು ಬ್ಯಾಗೇಜ್ ಬೆಲ್ಟ್‌ಗಳು ಮತ್ತು ರಾಂಪ್ ಟ್ರಾಕ್ಟರುಗಳನ್ನು ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುತ್ತಾರೆ. ಪ್ರತಿ ವಿಮಾನಕ್ಕೆ ಸಾಮಾನು, ಸರಕು ಮತ್ತು ಆಹಾರ ಸರಬರಾಜುಗಳನ್ನು ನಿರ್ವಹಿಸಲು ಕನಿಷ್ಠ ಐದು ಲೋಡರ್‌ಗಳ ಅಗತ್ಯವಿದೆ.

ಇದನ್ನು ಓದಿ : ಜಮ್ಮು ಮತ್ತು ಕಾಶ್ಮೀರ : ಕಳೆದ 32 ತಿಂಗಳಲ್ಲಿ 48 ಯೋಧರು ಹುತಾತ್ಮ

ಏರ್‌ಪೋರ್ಟ್ ಲೋಡರ್‌ಗಳ ವೇತನವು ತಿಂಗಳಿಗೆ 20,000 ರೂ.ನಿಂದ ರಿಂದ 25,000 ರೂ.ನಡುವೆ ಇರುತ್ತದೆ. ಆದರೆ ಹೆಚ್ಚಿನವರು ಓವರ್‌ಟೈಮ್ ಕೆಲಸ ಮಾಡಿ 30,000 ರೂ.ಗಳಿಗಿಂತ ಹೆಚ್ಚು ಗಳಿಸುತ್ತಾರೆ. ಉದ್ಯೋಗಕ್ಕಾಗಿ ಶೈಕ್ಷಣಿಕ ಮಾನದಂಡಗಳು ಮೂಲಭೂತವಾಗಿವೆ, ಆದರೆ ಅಭ್ಯರ್ಥಿಯು ದೈಹಿಕವಾಗಿ ಬಲವಾಗಿರಬೇಕು.

ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ ನಡೆದ ವಾಕ್-ಇನ್ ಸಂದರ್ಶನದಲ್ಲಿ ನೂರಾರು ಉದ್ಯೋಗಾಕಾಂಕ್ಷಿಗಳು ಒಬ್ಬರನ್ನೊಬ್ಬರು ತಳ್ಳುತ್ತಿರುವ ವಿಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಮುಂಬೈನಲ್ಲೂ ಅಂಥದ್ದೇ ಘಟನೆ ನಡೆದಿದೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೇವಲ 10 ಹುದ್ದೆಗಳ ನೇಮಕಾತಿಗೆ ಸುಮಾರು 1,800 ಆಕಾಂಕ್ಷಿಗಳು ಹಾಜರಾಗಿದ್ದರು. ಅಂತಹ ನೂಕು ನುಗ್ಗಲಿನಿಂದಾಗಿ ಕಛೇರಿಯ ಪ್ರವೇಶಕ್ಕೆ ಹೋಗುವ ರ‍್ಯಾಂಪ್‌ನ ಒಂದು ಕಂಬಿಯು ಉದ್ಯೋಗಾಕಾಂಕ್ಷಿಗಳ ಭಾರದಿಂದ ಕುಸಿದು ಬಿದ್ದಿತ್ತು.

ಅದೃಷ್ಟವಶಾತ್, ರ‍್ಯಾಂಪ್ ತುಂಬಾ ಎತ್ತರವಾಗಿರಲಿಲ್ಲ ಮತ್ತು ರೇಲಿಂಗ್ ಕುಸಿದ ನಂತರ ಸಮತೋಲನ ಕಳೆದುಕೊಂಡ ಯಾವುದೇ ಆಕಾಂಕ್ಷಿಗಳಿಗೆ ಗಂಭೀರ ಗಾಯಗಳಾಗಿರಲಿಲ್ಲ.

 

 

Donate Janashakthi Media

Leave a Reply

Your email address will not be published. Required fields are marked *