ಬೆಂಗಳೂರು: ನಗರದಲ್ಲಿ ಅಕ್ಟೋಬರ್ 12ರಂದು ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ. ಕೆ ಹರಿಪ್ರಸಾದ್, “ಆರ್‌ಎಸ್‌ಎಸ್ ಸಂಘಟನೆ ಭಾರತದ ತಾಲಿಬಾನ್. ಲಾಠಿ, ತಲ್ವಾರ್ ತಿರುಗಿಸಿಕೊಂಡು ಓಡಾಡ್ತಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಿ ಜಾಗಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಸರ್ಕಾರದ ಅನುಮತಿ ಪಡೆಯಬೇಕು. ಆರ್‌ಎಸ್‌ಎಸ್‌ನವರು ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ ಶಾಖೆಗಳನ್ನು ನಡೆಸುತ್ತಿದ್ದಾರೆ. ಏಕೆ ಅನುಮತಿ ತಗೋಬೇಕು ಅಂತ ಹೇಳುತ್ತಿದ್ದೇವೆ ಅಂದ್ರೆ, ಆರ್ ಎಸ್ ಎಸ್ ಸಂಘಟನೆಯವರು ಭಾರತ ದೇಶದ ತಾಲಿಬಾನಿಗಳು. ಅವರದ್ದು ನೋಂದಣಿ ಆಗದೆ ಇರುವ ಸಂಘಟನೆ ಎಂದರು.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ: ಅಕ್ಟೋಬರ್ 12ರಂದು ಟಿಕೆಟ್‌ಗಳ ಕುರಿತು ಘೋಷಣೆ – ಬಿಜೆಪಿ ಮುಖ್ಯಸ್ಥ
ನಾವು ಇಷ್ಟೆಲ್ಲ ಹೇಳ್ತಿದ್ದೇವೆ ಅವರು ರಿಜಿಸ್ಟರ್ ಆಗಿರೋದನ್ನ ತೋರಿಸಲಿ. ಪ್ಯಾಲೇಸ್ತೀನ್ ಪರ ಪ್ರತಿಭಟನೆ ಮಾಡಿದರೆ ಪೊಲೀಸರು ಅರೆಸ್ಟ್ ಮಾಡುತ್ತಾರೆ. ಆರ್‌ಎಸ್‌ಎಸ್ ಶಾಖೆಗಳಿಗೆ ನಡೆಸೋಕೆ ಪೊಲೀಸರು ಯಾಕೆ ಪರ್ಮಿಷನ್ ಕೊಟ್ಟಿದ್ದಾರೆ ಅಂತ ನಾನು ಪ್ರಶ್ನೆ ಮಾಡುತ್ತಿದ್ದೇನೆ. ಈಗಾಗಲೇ ತಮಿಳುನಾಡಿನಲ್ಲಿ ಈ ಕುರಿತಾಗಿ ಕ್ರಮವಹಿಸಿದ್ದಾರೆ ಎಂದು ವಿವರಿಸಿದರು.
ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಮಾಡಲು ಹೋದವರ ಮೇಲೆ ಅರೆಸ್ಟ್ ಮಾಡಿ ಕೇಸ್ ಹಾಕಿದ್ದಾರೆ. ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡಬೇಕಾದರೆ ಅನುಮತಿ ಪಡೆಯಬೇಕು. ಸಾಕಷ್ಟು ವರ್ಷಗಳಿಂದ ಶಾಖೆ ನಡೆಸಿಕೊಂಡು ಬಂದಿದ್ದಾರೆ. ಇವರು ಲಾಠಿ ತಲ್ವಾರ್ ತಿರುಗಿಸಿಕೊಂಡು ಓಡಾಡ್ತಾರೆ. ಸರ್ಕಾರಿ ಜಾಗದಲ್ಲಿ ಅನುಮತಿ ಪಡೆದು ಮಾಡೋದಾದರೆ ನಮ್ಮ ಅಭ್ಯಂತರ ಇಲ್ಲ ಎಂದರು. ಆದರೆ ಇವರು ಅನುಮತಿ ಪಡೆಯದೇ ಇಷ್ಟು ವರ್ಷ ಮಾಡಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.
ಪ್ರಿಯಾಂಕ್ ಪತ್ರ
ಸರ್ಕಾರಿ ಶಾಲೆಗಳ ಆವರಣ ಹಾಗೂ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ನಡೆಯುತ್ತಿರುವ ಕುರಿತಾಗಿ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಆರ್ ಎಸ್ ಎಸ್ ಎಂಬ ಹೆಸರಿನ ಸಂಘಟನೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಿದೆ. ಶಾಖೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಹಾಗೂ ಮತ್ತಿತರ ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ, ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರಿ ಆವರಣದಲ್ಲಿ ಸಂಘದ ಚಟುವಟಿಕೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ವಾರದ ನೋಟ| ಸಿಜೆಐ ಗವಾಯಿಯವರ ಮೇಲೆ ದಾಳಿ ಹಿಂದಿನ ಸೂತ್ರಧಾರಿಗಳಾರು? ಶ್ರೀಪಾದ್ ಭಟ್ Janashakthi Media
