- ಹಿಂದೂ -ಮುಸ್ಲಿಂರ ಡಿಎನ್ಎ ಒಂದೇ ಆಗಿದೆ
- ಹಿಂದೂ ಮುಸ್ಲಿಂಗಿಂತ್ ಭಾರತೀಯರ ಪ್ರಾಭಲ್ಯ ಮುಖ್ಯ
ಹೊಸದಿಲ್ಲಿ: ಗೋ ರಕ್ಷಣೆಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡುವವರು ಹಿಂದುತ್ವದ ವಿರೋಧಿಗಳು ಎಂದು ರಾಷ್ಟ್ರಿಯ ಸ್ವಯಂ ಸೇವಕ ಸಂಘ (ಆರ್ ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ರವಿವಾರ ಹೇಳಿದ್ದಾರೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಭಾರತದಲ್ಲಿ ಹಿಂದೂಗಳ ಪ್ರಾಬಲ್ಯವಿದೆಯೇ ಅಥವಾ ಮುಸ್ಲಿಮರ ಪ್ರಾಬಲ್ಯವಿದೆಯೇ ಎಂಬ ಸಂಗತಿಯೇ ಬರುವುದಿಲ್ಲ. ಏಕೆಂದರೆ ಇಲ್ಲಿ ಭಾರತೀಯರ ಪ್ರಾಬಲ್ಯ ಮಾತ್ರ ಇರಬಲ್ಲದು ಎಂದು ಅವರು ಕಾರ್ಯಕ್ರಮದಲ್ಲಿ ವ್ಯಾಖ್ಯಾನಿಸಿದರು.
ನಮ್ಮ ಇತಿಹಾಸದ ಪ್ರಕಾರ ಸುಮಾರು 40 ಸಾವಿರ ವರ್ಷಗಳ ಹಿಂದಿನಿಂದ ನಾವೆಲ್ಲರೂ ಒಂದೇ ಮೂಲದಿಂದ ಬಂದವರು. ನಮ್ಮೆಲ್ಲರ ಡಿಎನ್ಎ ಒಂದೇ ಆಗಿದ್ದು ನಾವೆಲ್ಲರೂ ಒಂದೇ ಪೂರ್ವಜರಿಂದ ಉಗಮವಾಗಿದ್ದೇವೆ. ರಾಜಕಿಯ ಜನರನ್ನು ಒಗ್ಗೂಡಿಸುತ್ತದೆ ಎಂಬುದನ್ನು ನಾನು ಒಪ್ಪಲಾರೆ. ಅದು ನಮ್ಮನ್ನು ವಿಚ್ಛಿದ್ರಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಹಿಂಸಾಚಾರದಲ್ಲಿ ತೊಡಗುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ದೇಶದಲ್ಲಿ ಏಕತೆ ಅತೀ ಅಗತ್ಯ. ಏಕತೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಏಕತೆಗೆ ಮಾತುಕತೆ, ನಂಬಿಕೆ ಅಗತ್ಯ. ಆದರೆ ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಊಹೆಗಳಲ್ಲಿ ಸಿಲುಕಬೇಡಿ, ಯಾವುದೇ ಮುಸ್ಲಿಂ ಇಲ್ಲಿ ವಾಸಿಸಬಾರದು ಎಂದು ಯಾವುದೇ ಹಿಂದೂ ಹೇಳಿದರೆ, ಆ ವ್ಯಕ್ತಿ ಹಿಂದೂ ಅಲ್ಲ
ಎಂದು ಮೋಹನ್ ಭಾಗವತ್ ಹೇಳಿದರು.
ಅಚ್ಚರಿ ಮೂಡಿಸಿದ ಭಾಗವತ್ ಹೇಳಿಕೆ : ಕಣಕಣದಲ್ಲೂ ಮುಸ್ಲೀಂರನ್ನು RSS ದ್ವೇಷಿಸಿಕೊಂಡು ಬಂದಿದೆ. ಬಹುತೇಕರ ಸಂಘ ಪರಿವಾರದ ಮುಖಂಡರ ಭಾಷಣಗಳು ಮುಸ್ಲೀಂ ವಿರುದ್ಧವೇ ಇರುತ್ತವೆ. ಜಗದೀಶ್ ಕಾರಂತ್, ಹಿಂದುತ್ವವಾದಿ ಪ್ರಮೋದ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಹೀಗೆ ಸಂಘದ ನಾಯಕರು ಇಸ್ಲಾಂ ಧರ್ಮದ ನಾಶಕ್ಕೆ ಪಣ ತೊಟ್ಟವರು. “ಎದೆ ಸೀಳಿದರೆ ಎರಡಕ್ಷರ ಇಲ್ಲ” ಎಂದು ಇತ್ತೀಚೆಗೆ ಸಂಸದ ತೇಜಸ್ವಿಸೂರ್ಯ ಮುಸ್ಲೀಂರ ವಿರುದ್ಧ ವಿಷಕಾರಿದ್ದರು, ಜಗದೀಶ್ ಕಾರಂತ್ ಮುಸ್ಲಿಂರಿಗೆ ಪಡಿತರ ವ್ಯವಸ್ಥೆ ರದ್ದು ಪಡಿಸಿ ಎಂದು ಯಾವಾಗಲೂ ಗೋಗರಿಯುತ್ತಿರುತ್ತಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಭಾಗವತ್ ಹೇಳಿಕೆ ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ಜಾರಿ ಮಾಡಲು ಮುಂದಾಗಿದ್ದ ಸಿಎಎ ಮತ್ತು ಎನ್ ಆರ್ ಸಿ ಕಾಯ್ದೆಗಳಿಂದ ಮೋದಿ ಮತ್ತು ಬಿಜೆಪಿಯ ಇಮೇಜ್ ಕುಸಿತ ಖಂಡಿದೆ. ಅದನ್ನು ಸರಿ ಮಾಡಲು ಭಾಗವತ್ ಈ ರೀತಿಯಾ ಹೇಳಿಕೆ ನೀಡಿದ್ದಾರಾ? ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು ಮತ್ತೆ ಮುಸ್ಲಿಂರ ಮತಗಳನ್ನು ಗಟ್ಟಿಗೊಳಿಸಲು ಈ ಹೇಳಿಕೆ ನೀಡಿರಬಹುದಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.