ನೆಟ್ಟಿಗರ ಒತ್ತಡಕ್ಕೆ ಮಣಿದು ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋ ಬದಲಿಸಿಕೊಂಡ ಆರ್‌ಎಸ್‌ಎಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾಮಾಜಿಕ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬರು ತ್ರಿವರ್ಣ ಧ್ವಜವನ್ನು ಪ್ರೊಫೈಲ್‌ ಫೋಟೊಗಳನ್ನಾಗಿ ಬಳಿಸಿಕೊಳ್ಳಬೇಕೆಂದು ಕರೆ ನೀಡಿದ್ದರು. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ತನ್ನ ಸಾಮಾಜಿಕ ಜಾಲತಾಣ ಖಾತೆ ಬದಲಿಸಲಿಲ್ಲ. ಇದರಿಂದ ಸಾಮಾಜಿಕ ಮಾಧ್ಯಮದ ಬಳಕೆದಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಬಿಜೆಪಿ ನಾಯಕರು ತ್ರಿವರ್ಣ ಧ್ವಜವನ್ನು ತಮ್ಮ ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ ಫೋಟೋಗಳನ್ನಾಗಿ ಮಾಡಿಕೊಂಡಿದ್ದರೂ ಆರ್‌ಎಸ್‌ಎಸ್‌  ಬದಲಿಸದಿರುವ ವಿಚಾರ ತೀವ್ರ ಟೀಕೆಗೆ ಗುರಿಯಾಗಿತ್ತು.

ಇದೀಗ, ಆರ್‌ಎಸ್‌ಎಸ್‌ ತನ್ನ ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ ಫೋಟೋಗಳನ್ನು ಬದಲಿಸಿಕೊಂಡಿದೆ. 52 ವರ್ಷಗಳಿಂದ ಭಾರತದ ರಾಷ್ಟ್ರಧ್ವಜವನ್ನು ವಿರೋಧಿಸಿದ್ದ ಆರ್​ಎಸ್​ಎಸ್​ ದೇಶದ ಪ್ರಧಾನಿಯ ಕರೆಗೂ ಸ್ಪಂದಿಸರಲಿಲ್ಲ ಎಂದು ಕಾಂಗ್ರೆಸ್ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಆರ್‌ಎಸ್‌ಎಸ್ 52 ವರ್ಷಗಳವರೆಗೂ ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿರಲಿಲ್ಲ. ಇಂತಹ ಸಂಘಟನೆ ಇದೀಗ ರಾಷ್ಟ್ರಧ್ವಜವನ್ನು ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಳ್ಳುತ್ತದೆಯೇ ಎಂದು ಪ್ರಶ್ನೆ ಮಾಡಿದ್ದರು.

ಮೂರು ದಿನಗಳ ಮನೆ-ಮನೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಕರೆಯ ಮೇರೆಗೆ ಆರ್‌ಎಸ್‌ಎಸ್‌ ಸರ ಸಂಚಾಲಕ ಮೋಹನ್ ಭಾಗವತ್ ಮತ್ತು ಇತರ ನಾಯಕರು ರಾಷ್ಟ್ರ ಧ್ವಜಾರೋಹಣ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಈಗಾಗಲೇ ಬಿಜೆಪಿ ನಾಯಕರು ತಮ್ಮ ಸಾಮಾಜಿಕ ಮಾಧ್ಯಮದ ಫೋಟೋಗಳನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿದ್ದಾರೆ. ಕಾಂಗ್ರೆಸ್ ನಾಯಕರು ವಿಭಿನ್ನ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಪಂಡಿತ್ ಜವಾಹರಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಬೀಸುತ್ತಿರುವ ಫೋಟೋವನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಇದಕ್ಕೆ ಬಿಜೆಪಿ ಟೀಕೆಯನ್ನು ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *