ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ದಾಂತ ವಿಷಕಾರಿ : ಮಲ್ಲಿಕಾರ್ಜುನ ಖರ್ಗೆ

ಪುದುಚೇರಿ: ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಿದ್ಧಾಂತವು ವಿಷಕಾರಿಯಿಂದ ತುಂಬಿದೆ ನೀವು ಅದನ್ನು ತಮಿಳು ತಮಿಳುನಾಡು ಮತ್ತು ಪುದುಚೇರಿಯೊಳಗೆ ಪ್ರವೇಶಿಸಲು ಬಿಡಬಾರದು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಿದ್ಧಾಂತದ ಕುರಿತು ಪ್ರತಿಕ್ರಿಯ ನೀಡಿದ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಷಕಾರಿಯಿದ್ದಂತೆ ನೀವು ಅವುಗಳನ್ನು ಸವಿಯುತ್ತಿದ್ದರೆ, ನೀವು ಖಂಡಿತವಾಗಿಯೂ ಸಾಯುತ್ತೀರಿ. ಹೇಗಾದರೂ ಅವರು ಕರ್ನಾಟಕದವರೆಗೆ ತಲುಪಿದ್ದಾರೆ. ಆ ವಿಷಕಾರಿ ಸಿದ್ಧಾಂತವನ್ನು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಪ್ರವೇಶಿಸಲು ಅನುಮತಿಸಬೇಡಿ   ಎಂದು ಅಲ್ಲಿಯ ಜನತೆಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *