ಆರೆಸ್ಸೆಸ್ ಮತ್ತು ಅದರ ನಿಷೇಧ

ಟಿ.ಸುರೇಂದ್ರರಾವ್

ತಮಗೂ ಆರೆಸ್ಸೆಸ್ಸಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಬಿಜೆಪಿಗರು ಈಗ ತಮ್ಮ ಮಾತನ್ನು ತಾವೇ ನುಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಮಹಾತ್ಮಾ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಅಂದಿನ ನೆಹರೂ ಸರ್ಕಾರದ ಗೃಹ ಸಚಿವ ಸರ್ದಾರ್ ವಲ್ಲಭ ಬಾಯ್ ಪಟೇಲರು ಆರೆಸ್ಸೆಸ್ಸನ್ನು ನಿಷೇಧಿಸಿದ್ದರು ಎನ್ನುವುದನ್ನೂ ಈಗಿನ ಬಿಜೆಪಿಗರು ಮರೆಯುತ್ತಿದ್ದಾರೆ. ಆಗಿನ ಆರೆಸ್ಸೆಸ್ಸಿನ ಮುಖಂಡರುಗಳು ಸರ್ಕಾರಕ್ಕೆ ಗೋಗರೆದು ಬೇಡಿಕೊಂಡು ಸರ್ಕಾರದ ಎಲ್ಲಾ ಷರತ್ತುಗಳನ್ನೂ ಒಪ್ಪಿ ನಿಷೇಧವನ್ನು ಹಿಂತೆಗೆಯಲು ಮನವಿ ಸಲ್ಲಿಸಿದ್ದನ್ನೂ ಮರೆತಿದ್ದಾರೆ. ಆ ಷರತ್ತಿನ ಭಾಗವಾಗಿಯೇ ಆರೆಸ್ಸೆಸ್ ಈಗಲೂ ಒಂದು ‘ಸಾಂಸ್ಕೃತಿಕ ಸಂಸ್ಥೆ’ಯಾಗಿ ಕಾರ್ಯನಿರ್ವಹಿಸಬೇಕೇ ವಿನಃ ನೇರ ರಾಜಕೀಯದಲ್ಲಿ ಭಾಗವಹಿಸಬಾರದು ಎನ್ನುವುದನ್ನೂ ಬಿಜೆಪಿಯ ನಾಯಕರು ಮರೆಯುತ್ತಿದ್ದಾರೆ.

ಆದರೆ ಆ ಷರತ್ತನ್ನು ಉಲ್ಲಂಘಿಸಿ ಅದು ಈಗ ನೇರ ರಾಜಕೀಯ ಮಾಡುತ್ತಿರುವುದನ್ನು ದೇಶದ ಜನರು ಗಮನಿಸುತ್ತಿದ್ದಾರೆ. ದೇಶದ ಪ್ರಧಾನಿಯವರೇ ತಾನೊಬ್ಬ ‘ಸ್ವಯಂಸೇವಕ’ ಎಂದು ಹೇಳಿಕೊಳ್ಳುತ್ತಿರುವುದನ್ನು ಮತ್ತು ಕರ್ನಾಟಕದ ಹಿಂದಿನ ವಿಧಾನಸಭಾಧ್ಯಕ್ಷರೊಬ್ಬರು ತಾನು “ಸ್ವಯಂಸೇವಕ” ಎಂದು ಅಧಿವೇಶನ ನಡೆಯುತ್ತಿರುವಾಗಲೇ ಹೇಳಿರುವುದನ್ನು ನಾಗರಿಕರು ಗಮನಿಸಿದ್ದಾರೆ.

ಇದನ್ನೂ ಓದಿ: ಅರಚಾಟ ನಡೆಸುತ್ತಿದ್ದ ಆರೆಸ್ಸೆಸ್‌ ಈಗ ಎಲ್ಲಿ ಹೋಯಿತು?

ಸದಸ್ಯರ ಪಟ್ಟಿಯನ್ನು ಬಹಿರಂಗಪಡಿಸದೆ, ತನ್ನ ಆದಾಯ ಖರ್ಚನ್ನು ಹೊರಗೆಡಹದೆ, ಲೆಕ್ಕಪತ್ರಗಳನ್ನು ಸಾರ್ವಜನಿಕರ ಗಮನಕ್ಕೆ ತರದೆ ಕಾರ್ಯನಿರ್ವಹಿಸುವ ಈ ಸಂಘಟನೆಯ ಚಟುವಟಿಕೆಗಳನ್ನು ಸರ್ಕಾರದ ಇಲಾಖೆಗಳು ದಾಖಲೆ ಮಾಡಿಕೊಳ್ಳುತ್ತಿವೆ. ಈ ರೀತಿಯ ಅನಧಿಕೃತ ಸಂಘಟನೆ ಯಾವುದೇ ಇರಲಿ ಯಾವ ಜಾತಿ, ಧರ್ಮದ್ದೇ ಇರಲಿ ಅದರ ವಹಿವಾಟಿನ ಮೇಲೆ ನಿಯಂತ್ರಣ ಸಾಧಿಸಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಬಿಜೆಪಿಯ ಮುಖಂಡರುಗಳು ಭಾರತದ ಸಂವಿಧಾನದಲ್ಲಿ ನಂಬಿಕೆ ಇಟ್ಟವರಾಗಿದ್ದರೆ ಈ ಅಂಶಗಳನ್ನು ನೆನಪಿನಲ್ಲಿಡಬೇಕು.

Donate Janashakthi Media

Leave a Reply

Your email address will not be published. Required fields are marked *