ಆರ್‌ಎಸ್‌ಎಸ್ ಮತ್ತು ಎಡ ಪಕ್ಷಗಳನ್ನು ಸಮೀಕರಿಸುವ ರಾಹುಲ್ ಗಾಂಧಿ ಹೇಳಿಕೆಗೆ ಎಂ. ಎ. ಬೇಬಿ ಆಕ್ರೋಶ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್‌ಎಸ್‌ಎಸ್‌ ಮತ್ತು ಸಿಪಿಐ (ಎಂ) ಅನ್ನು ಒಂದೇ ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಹಾಕಿಕೊಂಡಿದ್ದಾರೆ. ಎಡಪಕ್ಷಗಳ  ನಾಯಕರ ಆಕ್ರೋಶಕ್ಕೆ ರಾಹುಲ್‌ ಗಾಂಧಿ ಹೇಳಿಕೆ ಕಾರಣವಾಗಿದ್ದು,  ರಾಹುಲ್ ಗಾಂಧಿ ಅವರನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ  ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇರಳದಲ್ಲಿ ಗಾಂಧಿಯವರು ನೀಡಿದ ಹೇಳಿಕೆಗಳು ಸರಿಯಿಲ್ಲವೆಂದು ಎಡಪಕ್ಷದ ನಾಯಕರು ಎಚ್ಚರಿಸಿದ್ದಾರೆ. ಈ ಹೇಳಿಕೆಗಳು ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂಡಿಯಾ ಬಣದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ನಿರ್ಧರಿಸಲಾಗಿದೆ ಎಂದರು.

ಇದನ್ನೂ ಓದಿ: ಧರ್ಮಸ್ಥಳ ಅಸಹಜ ಸಾವು ಪ್ರಕರಣ: ವಿಶೇಷ ತನಿಖಾ ತಂಡ ರಚನೆ

ಎಡಪಕ್ಷಗಳ ಬೆಂಬಲವಿಲ್ಲದೆ 2004 ರಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಅವರು ಗಾಂಧಿಯವರಿಗೆ ನೆನಪಿಸಿದರು. ಸಿಪಿಐ(ಎಂ) ಆರ್‌ಎಸ್‌ಎಸ್ ವಿರುದ್ಧ ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ಹೋರಾಟ ನಡೆಸುತ್ತಿರುವುದರಲ್ಲಿ ಮುಂಚೂಣಿಯಲ್ಲಿದೆ.  “ಆರ್‌ಎಸ್‌ಎಸ್ ವಿರುದ್ಧದ ಹೋರಾಟದಲ್ಲಿ ನಮ್ಮ ಪಕ್ಷ ನೂರಾರು ಕಾರ್ಯಕರ್ತರನ್ನು ಕಳೆದುಕೊಂಡಿದೆ.  ಕೇರಳದಲ್ಲಿ ಈ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದು  ದುರದೃಷ್ಟಕರ ಎಂದು ಬೇಬಿ ಹೇಳಿದರು.

“ಕೇರಳದಲ್ಲಿ ಆರ್‌ಎಸ್‌ಎಸ್ ವಿರುದ್ಧ ಹೋರಾಡುವಲ್ಲಿ ಕಾಂಗ್ರೆಸ್‌ನ ದಾಖಲೆ ಏನಿದೆ ಎಂಬುದು ರಾಹುಲ್ ಗಾಂಧಿಗೆ ತಿಳಿದಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಅವರು ಒಂದು ರೀತಿಯಲ್ಲಿ ಸಿಪಿಐ(ಎಂ) ಮತ್ತು ಆರ್‌ಎಸ್‌ಎಸ್ ಅನ್ನು ಸಮೀಕರಿಸಿದ್ದಾರೆ ಎಂಬ ಅಂಶವು ಕೇರಳ ಅಥವಾ ಭಾರತದಲ್ಲಿ ಸಿಪಿಐ(ಎಂ) ಮತ್ತು ಆರ್‌ಎಸ್‌ಎಸ್‌ನ ಪಾತ್ರದ ಬಗ್ಗೆ ಸರಿಯಾದ ತಿಳುವಳಿಕೆಯ ಅನುಪಸ್ಥಿತಿಯನ್ನು ತೋರಿಸುತ್ತದೆ” ಎಂದು ಬೇಬಿ ಹೇಳಿದರು.

ಸಿಪಿಐ ನಾಯಕ ಡಿ.ರಾಜಾ ಅವರು ರಾಹುಲ್ ಗಾಂಧಿಯವರ ಹೆಸರನ್ನು ಹೇಳದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಎಡಪಕ್ಷಗಳನ್ನು ಆರ್‌ಎಸ್‌ಎಸ್ ಜೊತೆ ಹೋಲಿಸುವುದು ಸರಿಯಲ್ಲ. ಇದು ಕಾರ್ಯಕರ್ತರಲ್ಲಿ ಗೊಂದಲವನ್ನು ಉಂಟುಮಾಡುತ್ತದೆ ಮತ್ತು ಮೈತ್ರಿಗೆ ಹಾನಿ ಮಾಡುತ್ತದೆ ಎಂದು ಅವರು ಹೇಳಿದರು. ಇಂಡಿ ಬಣವು ‘ದೇಶ್ ಬಚಾವೋ, ಬಿಜೆಪಿ ಹಟಾವೋ’ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು. ಆದ್ದರಿಂದ, ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯವರು ಕೊಟ್ಟಾಯಂನಲ್ಲಿ ಮಾತನಾಡುತ್ತಾ ಆರ್‌ಎಸ್‌ಎಸ್‌ ಮತ್ತು ಸಿಪಿಐ (ಎಂ) ಸಿದ್ಧಾಂತಗಳನ್ನು ವಿರೋಧಿಸುವುದಾಗಿ ಹೇಳಿದರು. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು. “ನಾನು ಅವರ ಸಿದ್ಧಾಂತಗಳನ್ನು ಮತ್ತು ಭಾಷಣಗಳನ್ನು ವಿರೋಧಿಸುತ್ತೇನೆ ಎಂದು ವಿವಾದಾತ್ಮಕ ಮಾತುಗಳನ್ನಾಡಿದ್ದರು.

ಇದನ್ನೂ ನೋಡಿ: ದೇವನಹಳ್ಳಿ | ಅನ್ನ ಕೊಡೋ ರೈತರ ಬಾಯಿಗೆ ಮಣ್ಣು ಹಾಕ್ತೀರಾ ಸಿದ್ರಾಮಯ್ಯನವರೇ.? | ಗ್ರೌಂಡ್‌ ರಿಪೋರ್ಟ್‌Janashakthi

Donate Janashakthi Media

Leave a Reply

Your email address will not be published. Required fields are marked *