ನವದೆಹಲಿ :ಶೀಘ್ರದಲ್ಲೇ 5,000 ರೂ.ಗಳ ನೋಟುಗಳನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಇದು ಅಸಲಿ ಸುದ್ದಿಯೋ ಇಲ್ಲವೋ? ಸರ್ಕಾರ 5 ಸಾವಿರ ರೂಪಾಯಿಗಳ ನೋಟು ಬಿಡುಗಡೆ ಮಾಡುತ್ತಿದೆಯೇ? ಎಂಬುದರ ಕುರಿತು ಆರ್‌ಬಿಐ ಸ್ಪಷ್ಟನೆ ನೀಡಿದೆ. ಚಲಾವಣೆ
ಆರ್‌ಬಿಐ ಇತ್ತೀಚೆಗೆ 2,000 ರೂ ನೋಟುಗಳನ್ನ ಹಿಂತೆಗೆದುಕೊಂಡಿದೆ. ಈಗಿರುವಾಗ ಹೊಸ 5,000 ರೂ.ಗಳ ನೋಟುಗಳನ್ನ ಬಿಡುಗಡೆ ಮಾಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಗಾಗಿ ಜನರು ಕುತೂಹಲದಿಂದ ನೋಡುತ್ತಿದ್ದಾರೆ.
ಪ್ರಸ್ತುತ, ಭಾರತದಲ್ಲಿ ಅತಿದೊಡ್ಡ ನೋಟು 500 ರೂ. ಇದಲ್ಲದೆ, 200, 100, 50, 20 ಮತ್ತು 10 ರೂಪಾಯಿ ನೋಟುಗಳು ಭಾರತದಲ್ಲಿ ಚಲಾವಣೆಯಲ್ಲಿವೆ. ಸೋಷಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿರುವ ಈ ಸುದ್ದಿ ವ್ಯಾಪಾರಿಗಳು ಮತ್ತು ದೊಡ್ಡ ಉದ್ಯಮಿಗಳ ನಡುವೆ ಚರ್ಚೆಯನ್ನ ಹುಟ್ಟುಹಾಕಿದೆ.
ಇದನ್ನೂ ಓದಿ : ಬಿಜೆಪಿಗೆ ಲಾಡ್ಕೀ-ಲಾಡ್ಲೀ ಯೋಜನೆಗಳು ಓಕೆಯಾದರೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಾಕೆ ಬೇಡ ?
ಸ್ವಾತಂತ್ರದ ನಂತರ 5,000 ಮತ್ತು 10,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. 1954ರಲ್ಲಿ 1000 ರೂಪಾಯಿ ನೋಟುಗಳನ್ನು ಚಲಾವಣೆಗೆ ತರಲಾಯಿತು. 1978ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು 1,000, 5,000 ಮತ್ತು 10,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡರು. ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನ ನಿಗ್ರಹಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಸರ್ಕಾರ ಆಕಾಶವಾಣಿಯಲ್ಲಿ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಈ ಸುದ್ದಿಯೂ ಅಕ್ಷರಶಃ ಸುಳ್ಳು. ಆರ್‌ಬಿಐ ಅಂತಹ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳು. ಇದಕ್ಕೆ ಯಾವುದೇ ಆಧಾರವಿಲ್ಲ.
5,000 ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ಗವರ್ನರ್ ಹೇಳಿದ್ದಾರೆ. ಆರ್‌ಬಿಐ ಹೊಸ ಹೆಚ್ಚಿನ ಮೌಲ್ಯದ ನೋಟುಗಳನ್ನ ಪರಿಚಯಿಸಲು ಯೋಚಿಸುತ್ತಿಲ್ಲ. ಆರ್‌ಬಿಐ ಪಕಾರ, ದೇಶದ ಪ್ರಸ್ತುತ ಕರೆನ್ಸಿ ವ್ಯವಸ್ಥೆಯು ದೇಶದ ಆರ್ಥಿಕ ಅಗತ್ಯಗಳನ್ನ ಪೂರೈಸಲು ಸಾಕಾಗುತ್ತದೆ. ಹೆಚ್ಚಿನ ಬದಲಾವಣೆಗಳನ್ನ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಇದನ್ನೂ ನೋಡಿ : ಒಂದು ದೇಶ ಒಂದು ಚುನಾವಣೆ ಸರ್ವಾಧಿಕಾರಕ್ಕೆ ಮುನ್ನುಡಿಯೇ? – ಕೃಷ್ಣ ಪ್ರಸಾದ್ Janashakthi Media