ಸರಕಾರಿ ನೋಟು ಮುದ್ರಣ ಘಟಕದಲ್ಲಿ 5 ಲಕ್ಷ ರೂ ನಾಪತ್ತೆ; ದೂರು ದಾಖಲು

ನಾಸಿಕ್ : ಗರಿಷ್ಠ ಭದ್ರತೆ, ಹೆಜ್ಜೆ ಹೆಜ್ಜೆಗೂ ಸಿಸಿಟಿವಿ, ಸಿಬ್ಬಂದಿಗಳನ್ನು ಹೊರತು ಪಡಿಸಿ ಇನ್ಯಾರಿಗೂ ಪ್ರವೇಶವಿಲ್ಲ. ಇಂತಹ ಹೈ ಲೆವೆಲ್ ಸೆಕ್ಯೂರಿಟಿ ಇದ್ದರೂ ನಾಸಿಕ್‌ನಲ್ಲಿರುವ ಸರ್ಕಾರದ ನೋಟು ಮುದ್ರಣ ಘಟಕದಿಂದ 5 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚೆಗೆ ನಾಸಿಕ್ ಘಟಕದಲ್ಲಿ ಸರ್ಕಾರದ ನಿಯಮದ ಪ್ರಕಾರ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು. ಆದರೆ ಮುದ್ರಿತ ನೋಟುಗಳ ಪೈಕಿ 1,000 ನೋಟುಗಳು ಕಾಣೆಯಾಗಿದೆ. ಮುದ್ರಣ ಘಟಕದಿಂದ ನೋಟು ಕಳ್ಳತನ ಅಸಾಧ್ಯದ ಮಾತಾಗಿತ್ತು. ಆದರೆ ಇದೀಗ ಈ ಘಟನೆ ನಡೆದುಹೋಗಿದೆ.

ಇದನ್ನೂ ಓದಿ : ಮೈದಾನದಲ್ಲಿ ಕ್ರಿಕೆಟ್‌ ಆಡುತ್ತಿದ್ದ ಕ್ರೈಸ್ತ ಯುವಕನನ್ನು ಹೊರದಬ್ಬಿದ ಬಿಜೆಪಿ ಮುಖಂಡ

ಹೊರಗಿನಿಂದ ಯಾರಿಗೂ ಪ್ರವೇಶ ಇಲ್ಲದ ಕಾರಣ ಈ ಕೃತ್ಯವನ್ನು ಸಿಬ್ಬಂದಿಗಳೇ ಮಾಡಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಾಸಿಕ್ ನೋಟು ಮುದ್ರಣ ಘಟಕದ ಅಧಿಕಾರಿಗಳು ಆಂತರಿಕ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 381 ಅಡಿಯಲ್ಲಿ FIR ದಾಖಲಿಸಲಾಗಿದೆ. ತನಿಖೆಯಲ್ಲಿ ಕೆಲ ಮಾಹಿತಿಗಳನ್ನು ಕೆಲ ಹಾಕಲಾಗಿದೆ ಎಂದು ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಶಿಂಧೆ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *