ಮೃತ ‘KSRTC ಸಿಬ್ಬಂದಿ’ಗಳ ಕುಟುಂಬಕ್ಕೆ1 ಕೋಟಿ ರೂ. ಪರಿಹಾರ: ಸಾರಿಗೆ ಇಲಾಖೆ

ಬೆಂಗಳೂರು: ಕರ್ತವ್ಯದ ವೇಳೆ ಮೃತಪಟ್ಟ ಮೂವರು ಕೆಎಸ್ಆರ್‌ಟಿಸಿ ಸಿಬ್ಬಂದಿಯ ಕುಟುಂಬಕ್ಕೆ ʻಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆʼಯ ಅಡಿಯಲ್ಲಿ  ತಲಾ ರೂ.1 ಕೋಟಿ ಪರಿಹಾರ ನೀಡಿರುವುದಾಗಿ ಸಾರಿಗೆ ಇಲಾಖೆಯು ಡಿಸೆಂಬರ್ 4ರಂದು ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 31 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.10 ಲಕ್ಷದಂತೆ, ರೂ. 3.10 ಕೋಟಿ ಪರಿಹಾರ ಹಾಗೂ ಇಬ್ಬರು ಅವಲಂಬಿತರಿಗೆ ರೂ.14 ಲಕ್ಷದಂತೆ ರೂ.28 ಲಕ್ಷ ನೀಡಲಾಯಿತು. ಒಟ್ಟು 183 ಉದ್ಯೋಗಿಗಳಿಗೆ 18.38 ಕೋಟಿ ರೂ.ಗಳ ಸಹಾಯವನ್ನು ನೀಡಲಾಯಿತು ಎಂದು ಮಾಹಿತಿ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಡಿಸೆಂಬರ್ 3ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಈ ಮೊತ್ತವನ್ನು ವಿತರಣೆ ಮಾಡಿದರು.

ಇದನ್ನೂ ಓದಿ: ಬೆಂಗಳೂರು | ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಇದೇ ವೇಳೆ ಸಚಿವರು ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಹೊಸ ವಾಣಿಜ್ಯ ನಿರ್ವಹಣಾ-ಇ ವಾಣಿಜ್ಯ ಸಾಫ್ಟ್‌ವೇರ್’ಗೆ ಚಾಲನೆ ನೀಡಿದರು.

ಈ ಸಾಫ್ಟ್‌ವೇರ್ ಹಸ್ತಚಾಲಿತ ವ್ಯವಸ್ಥೆಯನ್ನು ಬದಲಾಯಿಸಲಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ 1,847 ವಾಣಿಜ್ಯ ಸಂಸ್ಥೆಗಳನ್ನು ಹಳೆಯ ವ್ಯವಸ್ಥೆಯಲ್ಲಿ ನಿರ್ವಹಿಸಲಾಗುತ್ತಿತ್ತು, ಅಲ್ಲಿ ಮಾಸಿಕ ಪರವಾನಗಿ ಶುಲ್ಕಗಳು, ಜಿಎಸ್‌ಟಿ, ದಂಡಗಳು ಮತ್ತು ಇನ್‌ವಾಯ್ಸ್‌ಗಳನ್ನು ಹಸ್ತಚಾಲಿತವಾಗಿ ನಿರ್ವಹಿಸಲಾಗುತ್ತಿತ್ತು, ಇದರಿಂದ ಆಗಾಗ್ಗೆ ವಿಳಂಬ ಮತ್ತು ದೋಷಗಳಿಗೆ ಕಾರಣವಾಗಿತ್ತು.

ಇದೀಗ ಅಭಿವೃದ್ಧಿಪಡಿಸಲಾದ ಸಾಫ್ಟ್ ವೇರ್, ಇ-ವಾಣೀಜ್ಯ, ಸ್ಟಾಲ್‌ಗಳು, ರಿಫ್ರೆಶ್‌ಮೆಂಟ್ ಕೊಠಡಿಗಳು ಮತ್ತು ವಾಣಿಜ್ಯ ಘಟಕಗಳನ್ನು ನಿರ್ವಹಿಸುವಲ್ಲಿ ದಕ್ಷತೆ ಮತ್ತು ಏಕರೂಪತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ನೋಡಿ: ಕನಿಷ್ಠ ವೇತನ ನೀಡಿ, ನಮ್ಮನ್ನು ಖಾಯಂ ಮಾಡಿ | ಅಂಗನವಾಡಿ,ಆಶಾ, ಬಿಸಿಯೂಟ ನೌಕರರ ಪ್ರತಿಭಟನೆ | Janashakthi Media

Donate Janashakthi Media

Leave a Reply

Your email address will not be published. Required fields are marked *