ರೈಲಿನಲ್ಲಿ ಮತ್ತು ಬರುವ ಚಾಕೋಲೇಟ್ ನೀಡಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸೆರೆ

ಬೆಳಗಾವಿ: ರೈಲಿನಲ್ಲಿ ಸಹ ಪ್ರಯಾಣಿಕರಂತೆ ವರ್ತಿಸಿ, ಸ್ನೇಹ ಬೆಳೆಸಿ, ಮತ್ತುಬರುವ ಚಾಕಲೇಟ್ ನೀಡಿ ಪ್ರಯಾಣಿಕರನ್ನು ದೋಚುತ್ತಿದ್ದ ಮೂವರ ತಂಡವನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಕಡೆಗೂ ಖಾಕಿ ಬಲೆಗೆ ಬಿದ್ದಿರುವ ಈ ತಂಡ ಬೆಳಗಾವಿ- ಗೋವಾ ಮಧ್ಯೆ ಓಡಾಡುವ ರೈಲಿನಲ್ಲಿ ಕೃತ್ಯವೆಸಗುತ್ತಿದ್ದರು.

ಚಲಿಸುವ ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಪ್ರಯಾಣಿಕರ ಗೆಳೆತನ ಬೆಳಸಿಕೊಂಡು ದರೋಡೆ ಮಾಡುತ್ತಿದ್ದರು. 20 ದಿನಗಳ ಹಿಂದೆ ಗೋವಾ- ಬೆಳಗಾವಿ ಮಾರ್ಗದಲ್ಲಿ ತಮ್ಮ ಕೈ ಚಳಕ ತೋರಿಸಿದ್ದ ಈ ಗ್ಯಾಂಗ್ ಎಂಟು ಜನ ಪ್ರಯಾಣಿಕರಿಗೆ ಮತ್ತುಬರುವ ಚಾಕಲೇಟ್ ನೀಡಿ ಹಣ, ಮೊಬೈಲ್ ದೋಚಿತ್ತು. ಮಧ್ಯಪ್ರದೇಶ ಮೂಲದ ಎಂಟು ಜನರು ಮೂರ್ಚೆ ಹೋಗಿದ್ದು, ಬೆಳಗಾವಿ ಬಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ಎಲ್ಲ ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿ ತಮ್ಮೂರಿಗೆ ಮರಳಿದ್ದಾರೆ. ಈ ಸಂಬಂಧ ಗೋವಾ ರೈೀಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು

ಇದನ್ನೂ ಓದಿಸಾಕ್ಷಿ ನುಡಿಯದಂತೆ ಕೈಗೆ ಕೋಳ ಹಾಕಿ ಠಾಣೆಯಲ್ಲೆ ಕೂಡಿಸಿದ ಪೊಲೀಸರು!?

ಪ್ರಕರಣ ಬೆನ್ನತ್ತಿದ್ದ ಗೋವಾದ ಆರ್ಪಿಎಫ್ ಪೊಲೀಸರು ಕಾರ್ಯಾಚರಣೆ ಕೈಗೊಂಡು ಬಿಹಾರ ಮೂಲದ ಸರ್ತಾಜ್(29), ಚಂದನ್ ಕುಮಾರ್(23), ದಾರಾ ಕುಮಾರ್(29)ನನ್ನು ಬಂಧಿಸಿದ್ದಾರೆ. ಚಾಕೊಲೇಟ್ ನಲ್ಲಿ ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆಗಳನ್ನ ಪುಡಿ ಮಾಡಿ ಸೇರಿಸಿ ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಗೆಳೆತನ ಬೆಳೆಸಿ ನೀಡುತ್ತಿದ್ದುದು ದಿಗ್ಭ್ರಮೆ ಮೂಡಿಸಿದೆ.

ಅದೇ ಮಾದರಿಯ ಮತ್ತಿಲ್ಲದ ಇತರ ಚಾಕೊಲೇಟ್ನ್ನು ಈ ಖದೀಮರು ತಿನ್ನುತ್ತಿದ್ದರು. ಮತ್ತು ಬರುವ ಚಾಕೊಲೇಟ್ ಪ್ರಯಾಣಿಕರಿಗೆ ನೀಡಿ ಅವರು ಮೂರ್ಚೆ ಹೋಗುತ್ತಿದ್ದಂತೆ ತಕ್ಷಣ ಅವರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನ ದೋಚಿ ಎಸ್ಕೇಪ್ ಆಗ್ತಿದ್ದ ಈ ಗ್ಯಾಂಗ್ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದೆ. ಪೊಲೀಸರು

 

ಈ ವಿಡಿಯೋ ನೋಡಿಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್‌ ಕಂಪನಿವಿರುದ್ಧ ಗುಡುಗಿದ ರೈತರು

 

Donate Janashakthi Media

Leave a Reply

Your email address will not be published. Required fields are marked *