ಪಹಲ್ಗಾಂ ನಲ್ಲಿ ಭಯೋತ್ಪಾದಕರ ದಾಳಿ ನಡೆದು ಒಂದು ವಾರವಾಗಿದೆ. ಈ ದಾಳಿಯನ್ನು ಎಲ್ಲರೂ ಖಂಡಿಸಿದ್ದಾರೆ. ಭಾರತದ ವಿರೋಧ ಪಕ್ಷಗಳು ಸರ್ಕಾರದ ಎಲ್ಲ ಕ್ರಮಗಳಿಗೆ ಬೆಂಬಲ ಘೋಷಿಸಿದ್ದಾರೆ. ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಸೂಕ್ತ ಕ್ರಮಗಳ ಬಗ್ಗೆ ಚಿಂತನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ರಾಜತಾಂತ್ರಿಕ ಮಟ್ಟದಲ್ಲಿ ಜಗತ್ತಿನ ಹಲವು ದೇಶಗಳಿಗೆ ಪಾಕಿಸ್ತಾನದ ನಡೆಯ ಬಗೆಗೆ ತಿಳಿಸುವ ಕೆಲಸವೂ ನಡೆಯುತ್ತಿದೆ. ಇವೆಲ್ಲವುಗಳ ನಡುವೆ ಮೋದಿ ಸರ್ಕಾರ ತನಗೆ ಪ್ರಶ್ನೆ ಕೇಳಿದವರನ್ನು ದಮನಿಸುವ ಅತ್ಯಂತ ಹೇಯ ಮತ್ತು ಹೇಡಿತನದ ಕೆಲಸ ಮಾಡುತ್ತಿದೆ. ಇಂಥ ಕೆಲಸಗಳ ಸ್ಯಾಂಪಲ್ಲು ಕೆಳಗೆ ಇದೆ ನೋಡಿ. ಕೋಮು
ಜಿ ಎಸ್ ಮಣಿ
- 4 PM (ಅಂದರೆ ಸಾಯಂಕಾಲ ನಾಲ್ಕು ಘಂಟೆ- ಇದು ಯೂ ಟ್ಯೂಬು ವಾಹಿನಿಯೊಂದರ ಹೆಸರು) ಅನ್ನು ನಿರ್ಭಂದಿಸಲಾಗಿದೆ. ಅಂದರೆ ಅದು ಕಾರ್ಯ ನಿರ್ವಹಿಸುವಂತಿಲ್ಲ. ಹಿಂದಿನಿಂದಲೂ ಮೋದಿ ಸರ್ಕಾರಕ್ಕೆ ಪ್ರಶ್ನೆ ಗಳನ್ನು ಕೇಳುತ್ತಾ ಬಂದಿರುವ ಈ ವಾಹಿನಿ ಈಗಲೂ ಸಹ ಪಹಲ್ಗಾಮೀನಂತಹ ಪ್ರವಾಸಿಗರು ಬರುವ ಕಡೆ ಸುರಕ್ಷತೆ ಯಾಕಿರಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದೆ. ಅದಕ್ಕೆ ಅದರ ಮೇಲೆ ನಿರ್ಬಂಧ. ಹಿಂದೆಯೂ ಈ ವಾಹಿನಿಯ ಮೇಲೆ ಇಂಥ ದಮನಕಾರಿ ಕ್ರಮಗಳು ಜರುಗಿದ್ದವು. ಈ ವಾಹಿನಿ ಹೆದರದೆ ಹೋರಾಟ ನಡೆಸಿತ್ತು. ಈಗಲೂ ಅದು ಹೋರಾಟದ ಹಾದಿ ಹಿಡಿದಿದೆ.
- ಆಸ್ಸಾಮಿನಲ್ಲಿ ಅಲ್ಲಿನ ಶಾಸಕ ಶ್ರೀ ಅಮಿನೂಲ್ ಇಸ್ಲಾಂ ಅವರನ್ನು ಬಂಧಿಸಲಾಗಿದೆ. ಅವರೂ ಅಷ್ಟೇ. ಈ ಹಿಂದೆ ಪುಲ್ವಾಮದಲ್ಲಿ ನಮ್ಮ ಸೈನಿಕರು ಇಂತಹ ದಾಳಿಗೆ ಬಲಿಯಾದರು. ಅದರ ತನಿಖೆ ಮತ್ತು ವರದಿಗಳು ಎಲ್ಲಿ ಎಂದು ಪ್ರಶಿಸಿದ್ದರು. “ಪ್ರಶ್ನಿಸಿದರೆ ಜೈಲು” ಇದು ಮೋದಿ ಸರ್ಕಾರದ ನೀತಿ ಎನ್ನೋಣವೆ?
- ನೇಹ ಸಿಂಗ್ ರಾತೋರ್ ಎಂಬ ಮಹಿಳೆ ಕವಯಿತ್ರಿ ಮತ್ತು ಗಾಯಕಿ. ಈಕೆಯೂ ಸುರಕ್ಷತೆಯ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅಷ್ಟೇ ಅಲ್ಲ. ಅದನ್ನು ತಮ್ಮ ಹಾಡಿನಲ್ಲಿ ಹಾದಿ ವೀಡಿಯೋ ಮಾಡಿ ಯು ಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸರ್ಕಾರ ಅವರ ವಿರುದ್ದ ಎಫ್ ಐ ಆರ್ ಹಾಕಿದೆ. ಪಾಕಿಸ್ತಾನದ ಜೊತೆ ಶಾಮಿಲಾಗುವುದು ಮತ್ತು ಸರ್ಕಾರಕ್ಕೆ ಪ್ರಶ್ನೆ ಕೇಳುವುದು ಒಂದೇ ಅಲ್ಲ. ಚುನಾಯಿತ ಸರ್ಕಾರಕ್ಕೆ ಇದರ ವ್ಯತ್ಯಾಸದ ಅರಿವಿರಬೇಕು.ನೇಹಾ ಅವರ ಪ್ರಶ್ನೆಗಳು ಮತ್ತು ಹಾಡುಗಳು ಪಾಕಿಸ್ತಾನದ ಜನರನ್ನು ತಟ್ಟಿ ಅವರು ಅದನ್ನು ಪ್ರಚಾರ ಮಾಡಿದರೆ ಅದು ನೇಹಾ ಅವರ ತಪ್ಪೇ? ಬಿ ಜೆ ಪಿ ಗರು ನೇಹ ಪಾಕಿಸ್ತಾನಿಗಳಿಗೆ ಭಾರತದ ವಿರುದ್ದ ಪ್ರಚಾರ ಮಾಡಲು ವಸ್ತು ನೀಡಿದ್ದಾರೆ ಎಂದು ಹಲುಬುತ್ತಿದ್ದಾರೆ. ಬದಲಿಗೆ ನೇಹ ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಬಹುದಿತ್ತಲ್ಲವೇ?
- ಇದೆ ರೀತಿ ಡಾಕ್ಟರ್ ಮೆದುಸ ಅವರು ಪಹಲ್ಗಾಂ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಸರ್ಕಾರ ಅವರ ವಿರುದ್ದವೂ ಎಫ್ ಐ ಆರ್ ಹಾಕಿದೆ.
ಇದನ್ನೂ ಓದಿ : ಬಸವಣ್ಣನೇ ಏಕೆ ಕರ್ನಾಟಕದ `ಸಾಂಸ್ಕೃತಿಕ ನಾಯಕ’ ? ಕೋಮು
ಇಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಸ್ಪಷ್ಟ ಇವೆ. ಬಿ ಜೆ ಪಿ ಮತ್ತು ಸಂಘಿಗಳುನಡೆವ ಪ್ರತಿಯೊಂದು ಘಟನೆಯನ್ನು ಕೋಮು ದ್ವೇಷದ ಸನ್ನಿವೇಶಗಳಿಗೆ ತಿರುಗಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿವೆ. ಇಂತಹ ಹುನ್ನಾರಗಳನ್ನು ಮಟ್ಟ ಹಾಕುವ ಬದಲು ಸರ್ಕಾರ ಇವುಗಳನ್ನು ಪ್ರೋತ್ಸಾಹಿಸಿ ಪೋಷಿಸುತ್ತಿದೆ. ಜವಾಬ್ದಾರಿಯುತ ಸರ್ಕಾರದ ಲಕ್ಷಣವೆ ಇದು?
ಡೆಹ್ರಾಡೂನ್, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಮುಂಬೈ ನಗರ ಇತ್ಯಾದಿ ಪ್ರದೇಶಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿದೆ. ಇಂತಹ ದಾಳಿಗಳನ್ನು ತಡೆಗಟ್ಟುವ ಬದಲು ಬಿ ಜೆ ಪಿ ಮತ್ತು ಅದರ ಸರ್ಕಾರಗಳು “ಉರಿವ ಮನೆಯ ಗಳ ಹಿರಿಯುವ” ಮನೆ ಮುರುಕ ಕೆಲಸ ಮಾಡುತ್ತಿವೆ. ಕೋಮು ದಳ್ಳುರಿಗೆ ತುಪ್ಪ ಎರೆವ ದುಷ್ಟ ಕಾರ್ಯ ಮಾಡುತ್ತಿವೆ. ನಿತಿಶ್ ರಾಣೆ ಎಂಬ ಮಹಾರಾಷ್ಟ್ರದ ಮಂತ್ರಿ ಮಹೋದಯ ಸ್ಪಷ್ಟವಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ.
ಈ ಸನ್ನಿವೇಶದಲ್ಲಿ ಅಲ್ಪಸಂಖ್ಯಾತರಲ್ಲಿ ಭಯ ಮನೆ ಮಾಡಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಈ ವಾತಾವರಣ ತಿಳಿಗೊಳ್ಳುವ ಅವಶ್ಯಕತೆ ಇದೆ. ಮೋದಿ ಸರ್ಕಾರ ಪರಿಸ್ಥಿತಿಯನ್ನು ತಿಳಿಗೊಳಿಸುವ ಕೆಲಸಕ್ಕೆ ಇಳಿಯಬೇಕು. ತಪ್ಪಿದರೆ ಜನ ಅರ್ಥಮಾಡಿಕೊಳ್ಳುತ್ತಾರೆ. ಮುಂದೆ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಬುದ್ದಿ ಕಲಿಸುತ್ತಾರೆ. ಇಂತಹ ಕಲಿಕೆಯೇ ಬೇಕೆಂದರೆ ದೇಶ/ ಜನ ಬೆಲೆ ತೆರಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ವ್ಯಂಗ್ಯವೆ?
ದೇಶದ ಅಭಿವೃದ್ದಿ ಮಾಡಿ ಅದರ ಆಧಾರದಲ್ಲಿ ವೋಟು ಕೇಳುವ ಬದಲು ಕೋಮು ದಳ್ಳುರಿ ಸೃಷ್ಟಿಸಿ ಅದರ ಆಧಾರದಲ್ಲಿ ವೋಟು ಪಡೆಯುವ ಚಾಳಿ ಬೆಳೆಸಿಕೊಂಡಿರುವ ಬಿಜೆಪಿಗರಿಗೆ ಎಂತಹ ನೈತಿಕತೆ ಇದೆ?
ಇದನ್ನೂ ಓದಿ : ಪಿಯುಸಿ ನಂತರ ಪಶುವೈದ್ಯಕೀಯ ಶಿಕ್ಷಣ ಪಡೆಯುವುದು ಹೇಗೆ? Janashakthi Mediaಕೋಮು