ಭಾರತ ಬಂದ್‌ : 32 ಸ್ಥಳಗಳಲ್ಲಿ ಜಂಟಿ ಹೋರಾಟ, ನಾಲ್ಕು ಶತಾಬ್ದಿ ರೈಲುಗಳು ರದ್ದು

ನವದೆಹಲಿ : ದೇಶಾದ್ಯಂತ ನಡೆಯುತ್ತಿರುವ ರೈತ ಆಂದೋಲನದ ಮುಷ್ಕರದ ಸಂದರ್ಭದಲ್ಲಿ ಪಂಜಾಬ್‌, ಹರಿಯಾಣ ಮತ್ತು ದೆಯಲಿಯ 32 ಸ್ಥಳಗಳಲ್ಲಿ ಬೃಹತ್‌ ಧರಣಿಯನ್ನು ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ಕೃಷಿ ಕಾನೂನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

ಮುಷ್ಕರದ ಅಂಗವಾಗಿ ಎಲ್ಲಾ ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ಬಂದ್‌ ಮಾಡುವ ಮೂಲಕ ಮುಷ್ಕರದಲ್ಲಿ ಭಾಗಿಯಾದರು. ಪ್ರತಿಭಟನಾಕಾರರು ರಸ್ತೆ ಹಾಗೂ ರೈಲುಗಳನ್ನು ತಡೆಯುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಹಿನ್ನೆಯಲ್ಲಿ ನಾಲ್ಕು ಶತಾಬ್ದಿ ರೈಲುಗಳು ರದ್ದುಗೊಂಡಿವೆ.

ಇದನ್ನು ಓದಿ : ರಾಜಧಾನಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತ ಕಹಳೆ

ಪ್ರತಿಭಟನಾ ನಿರತ ರೈತರು ರೈಲುಗಳನ್ನು ತಡೆಯುವ ಮೂಲಕ ತೀವ್ರತರವಾದ ಹೋರಾಟವನ್ನು ಹಮ್ಮಿಕೊಂಡಿದ್ದರು. ದೆಹಲಿಯ ರೈಲು ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಇಂದು ರೈತರು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ  ದೇಶವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿದ್ದಾವೆ.

ಇದನ್ನು ಓದಿ : ಅಖಿಲ ಭಾರತ ಮುಷ್ಕರ ಬೆಂಬಲಿಸಿ ‘ಕೃಷಿ ಕಾಯ್ದೆಗಳ ಶವಯಾತ್ರೆ’

ಪ್ರತಿಭಟನಾಕಾರರು ನಮ್ಮ ಈ ನಿರಂತರ ಹೋರಾಟ ಶಾಂತಿಯುತವಾಗಿದ್ದು ಇಂದು ಸಹ ಬಂದ್‌ ಶಾಂತಿಯುತವಾಗಿ ನಡೆಸಲಾಗುತ್ತಿದೆ. ಇದು ಹೆಚ್ಚು ಪರಿಣಾಮವನ್ನು ಬೀರಲಿದೆ ಎಂದು ತಿಳಿಸಿದರು.ರೈತರು ದೆಹಲಿ-ಗಾಜಿಪುರ ಗಡಿಗಳನ್ನು ನಿರ್ಬಂಧಿಸಿದ್ದಾರೆ. ಅಂಬಾಲದಲ್ಲಿಯೂ ಜಿಟಿ ರಸ್ತೆ ಮತ್ತು ಶಹಪುರ ಬಳಿ ರೈಲ್ವೆ ಹಳಿಗಳ ಮೇಲೆ ಪ್ರತಿಭಟಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *