ಕೇಂದ್ರ, ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದಂಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿವೆ, ಇದರಿಂದ ಜನತೆ ಅತೀವ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸಿಪಿಐ ಎಂ ರಾಜ್ಯ ಕಾರ್ಯಧರ್ಶಿ ಮಂಡಳಿ ಸದಸ್ಯರಾದ ಕಾಂ.ಮಿನಾಕ್ಷಿ ಸುಂದರಂ ಅವರು ಅರೋಪಿಸಿದರು.
ಶನಿವಾರ ತುಮಕೂರು ನಗದ ಟೌನ್‌ಹಾಲ್ ಮುಂಭಾಗದಲ್ಲಿ ಸಿಪಿಐ ಎಂ ಪಕ್ಷ ಹಾಗು ಸಿಐಟಿಯು ಜಿಲ್ಲಾ ಸಮಿತಿಗಳು ಜಂಟಿಯಾಗಿ ಪೆಟ್ರೋಲ್ – ಡೀಸಲ್, ಅಡಿಗೆ ಅನಿಲ, ಟೋಲ್ ,ವಿದ್ಯುತ್ ದರ ಏರಿಕೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು ಬಿಜೆಪಿ – ಕಾಂಗ್ರೆಸ್ ಪಕ್ಷಗಳಿಗೆ ಜನ ಸಾಮಾನ್ಯರಿಗೆ ಬಗ್ಗೆ ಕಾಳಜಿ ಇದ್ದರೆ ಈ ಬೆಲೆ ಏರಿಕೆ ಹಿಂದಕ್ಕೆ ಪಡೆಯಲಿ ಎಂದು ಅವರು ಒತ್ತಾಯಿಸಿದರು. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾದ ನ್ಯಾಯೋಜಿತ ತೆರಿಗೆ ಪಾಲನ್ನು ನೀಡದೆ ಇರುವ ಕಾರಣ ಹೀಗಾಗುತ್ತಿದೆ ಎಂದರು, ಬಿಜೆಪಿ ರಾಜಕೀಯ ಸೇಡಿಗಾಗಿ ಪಾಲು ನೀಡುವಲ್ಲಿ ಅನ್ಯಾಯ ಮಾಡಬಾರದು ಎಂದರು.
ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್ ಅವರು ಮಾತನಾಡಿ ಅಂತರಾಷ್ಟೀಯ ತೈಲ ಬೇಲೆ ಇಳಿಗೆ ಆದಾಗ ಬಳಕೆದಾರರಿಗೆ ಸಿಗದ ಲಾಭ ಹಚ್ಚಳದ ಹೋರೆಯನ್ನು ವಿಪರೀತ ತೆರಿಗೆ ಹೋರೆ ಬಳಕೆದಾರರಿಗೆ ಹೊರಿಸಲಾಗಿದೆ ಎಂದು ಅರೋಪಿಸಿದರು. ಕಾಂಗ್ರೆಸ್, ಬಿಜಿಪಿ, ಬೆಲೆ ಏರಿಕೆ ವಿರುದ್ದದ ಹೋರಾಟ ಮೊಸಳೆ ಕಣ್ಣಿರು ಎಂದು ಅರೋಪಿಸಿದರು .ಕಾಂಗ್ರೇಸ್, ಬಿಜೆಪಿ, ಜೆಡಿ (ಎಸ್) ಪಕ್ಷಗಳು ರಾಜಕೀಯಾ ಲಾಭಕ್ಕೆ ಬೇಕಾಗಿ ಪ್ರತಿಭಟನೆ ನಡೆಸುತ್ತಿವೆ. ಈ ಪಕ್ಷಗಳಿಗೆ ನಿಜ ಜನಪರ ಕಾಳಜಿ ಇದೆಯೇ ಎಂದು ಕುಟುಕಿದರು. ವಕೀಲ ಶಿವಣ್ಣವರು ಮಾತನಾಡಿ, ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ , ಆಳುವ ಸರ್ಕಾರಗಳು ಗಮನಿಸಿ ಎಂದರು.
ಸಿಪಿಐ (ಎಂ) ಪಕ್ಷದ ತುಮಕೂರು ಜಿಲ್ಲಾ ಕಾರ್ಯಧರ್ಶಿ ಎನ್. ಕೆ. ಸುಬ್ರಮಣ್ಯ ಮಾತನಾಡಿ ಜನ ಸಮಾನ್ಯರ ಸಂಕಟಗಳ ಅರಿವು ಈ ಪಕ್ಷಗಳಿಗೆ ಇಲ್ಲ ಎಂದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಕಮಲಾ,ಜಿಲ್ಲಾ ಕಾರ್ಯಧರ್ಶಿ ಮಂಡಳಿ ಸದಸ್ಯ ಎ. ಲೋಕೆಶ್. ಬಿ. ಉಮೇಶ್, ಪ್ರಾಂತ ರೈತ ಸಂಘ ಅಜಪ್ಪ, ದೊಡ್ಡನಂಜಪ್ಪ, ಜನವಾದಿ ಮಹಿಳಾ ಸಂಘಟನೆ ಟ.ಆರ್. ಕಲ್ಪನಾ, ಸಿಐಟಿಯು ರಂಗಧಾಮಯ್ಯ, ಶಿವಕುಮಾರ್ ಸ್ವಾಮಿ, ಮಧುಸೂಧನ್, ಪುಟ್‌ಪಾತ್‌ವ್ಯಾಪಾರಿಗಳ ಸಂಘ ವಸೀಂ , ಮುತ್ತುರಾಜ್, ಮನೆಕೆಲಸಗಾರರ ಸಂಘದ ಅನಸೂಯ, ಮತ್ತಿತರು ಇದ್ದರು.