ರಸ್ತೆಯಲ್ಲಿ ಅತ್ಯಾಚಾರ ಸಂತ್ರಸ್ತೆ ನರಳಾಟ: ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿ ನಗರದ ಬೀದಿಯಲ್ಲಿ 12 ವರ್ಷದ ಅತ್ಯಚಾರ ಸಂತ್ರಸ್ತ ಬಾಲಕಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ್‌ ಗಾಂಧಿ, ಅಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಸಂತ್ರಸ್ತೆ 

ಬಿಜೆಪಿಯ ದುರಾಡಳಿತದಲ್ಲಿ ಬಾಲಕಿಯರು, ಮಹಿಳೆಯರು ಮತ್ತು ದಲಿತರ, ಆದಿವಾಸಿಗಳು ಸುರಕ್ಷಿತವಲ್ಲ ಎಂದು ಎಕ್ಸ್‌ನಲ್ಲಿ ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ. ಅತ್ಯಚಾರಕ್ಕೊಳ್ಳಗಿದ್ದ ಬಾಲಕಿ ರಕ್ತಸ್ರಾವದಿಂದ ನರಳುತ್ತಿದ್ದ ಘಟನೆ ಉಜ್ಜಯಿನಿ ನಗರದ ರಸ್ತೆಯೊಂದರಲ್ಲಿ ಸೆ-26 ಬುಧವಾರ ನಡೆದಿದೆ. ಬಾಲಕಿಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಜ್ಞ ವೈದ್ಯರ ತಂಡವು ಶಸ್ತ್ರಚಿಕಿತ್ಸೆಗೆ ಒಳಪಡಿಸಿದೆ. ಆದರೂ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಅತ್ಯಾಚಾರ | ರಕ್ತಸಿಕ್ತ ದೇಹದೊಂದಿಗೆ ಅರೆಬೆತ್ತಲೆಯಾಗಿ ಬೀದಿಯಲ್ಲಿ ನಡೆದ ಬಾಲಕಿ; ವಿಡಿಯೊ ವೈರಲ್

ಭಗವಂತ ಮಹಾಕಾಳನ ನಗರವಾದ ಉಜ್ಜಯಿನಿಯಲ್ಲಿ ಪುಟ್ಟ ಬಾಲಕಿಯ ಮೇಲೆ ನಡೆದ ಕ್ರೌರ್ಯವು ಆತ್ಮವನ್ನು ಛಿದ್ರಗೊಳಿಸುವಂತದ್ದಾಗಿದೆ. ಚಿತ್ರಹಿಂಸೆ ತಾಳಲಾಗದೆ ಬಾಲಕಿ ಸಹಾಯಕ್ಕಾಗಿ ಮನೆಯಿಂದ ಮನೆಗೆ ಎರಡೂವರೆ ಗಂಟೆ ಅಲೆದಾಡಿದ್ದಾಳೆ. ಬಳಿಕ, ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದರೂ ಯಾವುದೇ ಸಹಾಯ ಸಿಕ್ಕಿರಲಿಲ್ಲ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

ಇದು ಮಧ್ಯಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಹಿಳೆಯರ ಸುರಕ್ಷತೆಯೇ? ಬಿಜೆಪಿಯ 20 ವರ್ಷಗಳ ದುರಾಡಳಿತದಲ್ಲಿ ಹೆಣ್ಣುಮಕ್ಕಳು, ಮಹಿಳೆಯರು, ಆದಿವಾಸಿಗಳು ಮತ್ತು ದಲಿತರಿಗೆ ರಕ್ಷಣೆ ಸಿಕ್ಕಿಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ. ಹೆಣ್ಣುಮಕ್ಕಳಿಗೆ ರಕ್ಷಣೆ, ಸಹಾಯ ಸಿಗದಿದ್ದಾಗ ಲಾಡ್ಲಿ ಬೆಹನಾ ಹೆಸರಿನಲ್ಲಿ ಚುನಾವಣಾ ಘೋಷಣೆ ಮಾಡಿ ಏನು ಪ್ರಯೋಜನ ಎಂದು ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಪಾಣಿ‌ಪತ್‌:ಕುಟುಂಬ ಸದಸ್ಯರ ಎದುರೇ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಉಜ್ಜಯಿನಿಯ ರಸ್ತೆಯೊಂದರಲ್ಲಿ 12 ವರ್ಷದ ಅತ್ಯಾಚಾರ ಸಂತ್ರಸ್ತೆ ರಕ್ತಸ್ರಾವದಿಂದ ನರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌, ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಘನತೆಯನ್ನು ಕಾಪಾಡಲು ಅಸಮರ್ಥವಾಗಿದೆ ಎಂದು ಕಾಂಗ್ರೆಸ್‌ ಸೆ-26 ಬುಧವಾರ ಟೀಕಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಣ್‌ ಅವರು ಚುನಾವಣಾ ಪ್ರಚಾರದಲ್ಲಿ ಸ್ವಲ್ಪ ಬಿಡುವು ತೆಗೆದುಕೊಂಡರೆ ಮಾತ್ರ ಮಹಿಳೆಯರ ಅಳಲು ಕೇಳಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.ಸಂತ್ರಸ್ತೆ 

ವಿಡಿಯೋ ನೋಡಿ:ಒಂದು ದೇಶ, ಒಂದು ಚುನಾವಣೆ : ಬಿಜೆಪಿ ಸರ್ಕಾರದ ಗುಪ್ತ ಅಜೆಂಡವೇನು? ಈ ವಾರದ ನೋಟ ಕಾರ್ಯಕ್ರಮದಲ್ಲಿ

Donate Janashakthi Media

Leave a Reply

Your email address will not be published. Required fields are marked *