ಬಾಣಂತಿಯರ ಸರಣಿ ಸಾವಿಗೆ ಆರ್‌ಎಲ್‌ಎಸ್‌ ಐವಿ ಗ್ಲುಕೋಸ್ ಕಾರಣ: ಲೋಕಾಯುಕ್ತ ಔಷಧಿ ಉಗ್ರಾಣದ ಮೇಲೆ ದಿಢೀರ್ ದಾಳಿ

ಬೆಳಗಾವಿ: ಬಿಮ್ ಆಸ್ಪತ್ರೆಯಲ್ಲಿ  ಬಾಣಂತಿಯರ ಸರಣಿ ಸಾವಿಗೆ ಆರ್‌ಎಲ್‌ಎಸ್‌ ಐವಿ ಗ್ಲುಕೋಸ್ ಕಾರಣ ಎಂಬ ವರದಿ ಬಂದಿದೆ, ಇದರ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ಬೆಳಗಾವಿ ಲೋಕಾಯುಕ್ತ ಎಸ್ ಪಿ ಹನುಮಂತರಾಯ ನೇತೃತ್ವದ 8 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದೆ.

ಇದನ್ನೂ ಓದಿ : ಮೈಕ್ರೋ ಫೈನಾನ್ಸ್: ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ಗರ್ಭಿಣಿಯನ್ನು ಮನೆಯಿಂದ ಹೊರ ನೂಕಿ ಕ್ರೌರ್ಯ ಮೆರೆದ ಫೈನಾನ್ಸ್  ಸಿಬ್ಬಂದಿ

ಈ ವೇಳೆ ಆರ್‌ಎಲ್‌ಎಸ್‌ ಐವಿ ಗುಕೋಸ್ ನ 10ಕ್ಕೂ ಹೆಚ್ಚು ಬಾಕ್ಸ್ ಗಳು ಪತ್ತೆಯಾಗಿವೆ. ಬಳ್ಳಾರಿಯಲ್ಲಿ RLS ಐವಿ ಗ್ಲುಕೋಸ್‌ ಬಾಣಂತಿಯರ ಸಾವಿಗೆ ಕಾರಣ ಎಂದು ತಿಳಿಯುತ್ತಿದ್ದಂತೆ ಈ ಗ್ಲುಕೋಸ್ ನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.

ಆರೋಗ್ಯ ಇಲಾಖೆ ಕೂಡ ಎಲ್ಲಾ ಆಸ್ಪತ್ರೆಗಳಿಗೂ RLS ಐವಿ ಗ್ಲುಕೋಸ್ ಬಳಸದಂತೆ ಸೂಚಿಸಿದೆ. ಆದಾಗೂ ಜಿಲ್ಲಾ ಔಷಧ ಉಗ್ರಾಣದಲ್ಲಿ ಇಷ್ಟೊಂದು ಪ್ರಮಾಣದಲ್ಲಿ RLS ಐವಿ ಗ್ಲುಕೋಸ್ ನ ಬಾಕ್ಸ್ ಗಳು ಪತ್ತೆಯಾಗಿರುವುದು ಅಚ್ಚರಿಗೆ ಕರಣವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ನೋಡಿ : ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ಕೊಲ್ಲಲ್ಪಡುತ್ತಿದ್ದಾಳೆ ; ಮನೆಯಲ್ಲೂ ಮಹಿಳೆಗೆ ಸುರಕ್ಷತೆ ಇಲ್ಲJanashakthi Media

Donate Janashakthi Media

Leave a Reply

Your email address will not be published. Required fields are marked *