ವಿಎಚ್‌ಪಿ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಮೇಲೆ ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ

ಹುಬ್ಬಳ್ಳಿ: ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಶ್ರೀಕಾಂತ್‌ ಪೂಜಾರಿ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್‌ಗಳಿವೆ. ಒಟ್ಟು 16 ಪ್ರಕರಣಗಳಿವೆ. ಅಕ್ರಮ ಸಾರಾಯಿ, ಮಟ್ಕಾ, ಜೂಜಾಟ ಸೇರಿ 16 ಕೇಸ್‌ಗಳಿವೆ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ‌. ವಿಎಚ್‌ಪಿ

ಹುಬ್ಬಳ್ಳಿಯ ಚನ್ನಪೇಟೆಯ ನಿವಾಸಿಯಾದ ಶ್ರೀಕಾಂತ್ ಪೂಜಾರಿ (51) ಎಂಬುವರ ಬಂಧನವನ್ನು ಪ್ರಶ್ನಿಸಿ ಪರ ಹಾಗೂ ವಿರೋಧದ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಬಾಬ್ರಿ ಮಸೀದಿ ಕುರಿತಾದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ ಎಂದು ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು.

ಇದೆಲ್ಲದರ ನಡುವೆ ಸಿಎಂ ಸಿದ್ದರಾಮಯ್ಯನವರು 1991ರಿಂದ ಇಲ್ಲಿಯವರೆಗೆ ಶ್ರೀಕಾಂತ್ ವಿರುದ್ಧ ಒಟ್ಟು 16 ವಿವಿಧ ಪ್ರಕರಣಗಳು ದಾಖಲಾಗಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದು ಬಿಜೆಪಿಗೆ ಮುಖಂಭಂಗವಾದಂತಾಗಿದೆ. ಶ್ರೀಕಾಂತ್ ಅವರ ಮೇಲೆ ಹಲವಾರು ಕೇಸ್ ಗಳಿದ್ದು, ಆ ಹಳೆಯ ಕೇಸ್ ಗಳ ವಿಚಾರಣೆಗಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಬೇಡ, ತಪ್ಪು ಮಾಡಿದ್ದವರಿಗೆ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವರನ್ನು ಬಿಟ್ಟುಬಿಡೋಕೆ ಆಗುತ್ತೇನ್ರೀ ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿʼರಾಮಮಂದಿರ ಉದ್ಘಾಟನೆʼಗೆ ಹೋಗುವವರಿಗೆ ಸರ್ಕಾರ ರಕ್ಷಣೆ ನೀಡಬೇಕು; ಬಿ.ಕೆ ಹರಿಪ್ರಸಾದ್

ಶ್ರೀಕಾಂತ್‌ ಪೂಜಾರಿ ಮೇಲೆ ದಾಖಲಾಗಿರುವ ಪ್ರಕರಣಗಳು

ಶ್ರೀಕಾಂತ್ ವಿರುದ್ಧ ದಾಖಲಾಗಿರುವ 16 ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಗಲಭೆ ಅಥವಾ ದೊಂಬಿಗೆ ಸಂಬಂಧಿಸಿರುವಂಥವು ಎಂದು ಪೊಲೀಸರು ತಿಳಿಸಿದ್ದಾರೆ. 1991ರ ಗಲಭೆ ಮಾತ್ರವಲ್ಲದೆ, 1999, 2001 ಹಾಗೂ 2014ರಲ್ಲಿ ನಡೆದಿದ್ದ ಗಲಭೆ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಗಲಭೆ, ದೊಂಬಿ ಕೇಸ್ ಗಳ ಹೊರತಾಗಿಯೂ, ಶ್ರೀಕಾಂತ್ ಪೂಜಾರಿ ವಿರುದ್ಧ ಇಸ್ಪೀಟು ಹಾಗೂ ಅಕ್ರಮ ಮದ್ಯ ಕುರಿತಂತೆ ಕೆಲವು ಕೇಸ್ ಗಳು ದಾಖಲಾಗಿವೆ. ಈ ಎಲ್ಲಾ ಕೇಸ್ ಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದ ಕಾರಣಕ್ಕಾಗಿಯೇ ಶ್ರೀಕಾಂತ್ ನನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಡಿಸೆಂಬರ್ 5, 1992 ರಂದು ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೊಲೀಸರು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಾರೆ. ಪೂಜಾರಿ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇತರ ಎಂಟು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಎಚ್‌ಪಿ

ಈ ವಿಡಿಯೋ ನೋಡಿಸಂಸದರನ್ನು ಅಮಾನತು ಮಾಡಿ ಕರಾಳ ಶಾಸನಕ್ಕೆ ಅನುಮೋದನೆ: ನವ ವಸಾಹತೀಕರಣದ ಮತ್ತೊಂದು ರೂಪ!? Janashakthi Media

 

 

Donate Janashakthi Media

Leave a Reply

Your email address will not be published. Required fields are marked *