ಬೆಂಗಳೂರು: ರಾಜ್ಯ ಸರಕಾರವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೀಸಲಾತಿ ಸೀಟುಗಳನ್ನು 11 ದಿನಗಳಲ್ಲಿ ಪ್ರಕಟಿಸದಿದ್ದರೆ. ಹಾಲಿ ರೋಸ್ಟರ್ ಪ್ರಕಾರವೇ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣ ಆಯೋಗಕ್ಕೆ ನಿರ್ದೇಶನ ನೀಡುವುದಾಗಿ ಹೈಕೋರ್ಟ್ ಮೌಖಿಕವಾಗಿ ಹೇಳಿದೆ. ಸಂಸ್ಥೆ
ಕರ್ನಾಟಕ ಮಹಾನಗರ ಪಾಲಿಕೆ, ನರಗಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಲು ನಿರ್ದೇಶಿಸಬೇಕು ಮತ್ತು ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ದಾವಣಗೆರೆ ಮಹಾನಗರ ಪಾಲಿಕೆ, ಅತ್ತಿಬೆಲೆ, ಬೊಮ್ಮಸಂದ್ರ, ಕಮಲಾಪುರ ನಗರಸಭೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿಲು ನಿರ್ದೇಶನ ಕೋರಿ ರಾಜ್ಯ ಚುನಾವಣ ಆಯೋಗ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಎಂ.ಐ.ಅರುಣ್ ರ ಏಕಸದಸ್ಯ ಪೀಠ ಈ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಸೌಜನ್ಯಳನ್ನು ಅಪಹರಿಸಿ ಕೊಂಡು ಹೋಗುತ್ತಿರುವುದನ್ನು ನೋಡಿರುವುದಾಗಿ ಮಹಿಳೆ ದೂರು
ರಾಜ್ಯ ಚುನಾವಣ ಆಯೋಗ ಪ್ರತಿನಿಧಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ, ಹಲವು ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2023ರಲ್ಲಿ ಮುಗಿದಿದೆ. ನಾವು ಸರಕಾರಕ್ಕೆ ಈ ಬಗ್ಗೆ ಹಲವು ಮನವಿಗಳನ್ನು ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸರಕಾರದ ಈ ನಡೆ ಸಾಂವಿಧಾನಿಕ ಆದೇಶ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ. ಇಷ್ಟು ಸಮಯದ ಒಳಗೆ ಮೀಸಲಾತಿ ನಿಗದಿಪಡಿಸಲಾಗುವುದು ಎಂದು ಸರಕಾರ ಹೇಳಬೇಕು ಎಂದು ವಾದಿಸಿದರು. ಅಂತಿಮವಾಗಿ ಸರಕಾರದ ವಕೀಲರ ಕೋರಿಕೆ ಮೇರೆಗೆ ಕೊನೆಯ ಬಾರಿಗೆ ಕಾಲಾವಕಾಶ ನೀಡಲಾಗುತ್ತಿದೆ ಎಂದ ಪೀಠವು ವಿಚಾರಣೆಯನ್ನು ಸೆ. 11ಕ್ಕೆ ಮುಂದೂಡಿತು.
ಸರಕಾರಕ್ಕೆ ತರಾಟೆ
ಚುನಾವಣೆ ನಡೆಯಬೇಕಲ್ಲವೇ? ನಿಮ್ಮದೇ ಸರಕಾರವಿದೆ, ಪುರಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಗಾಳಿ ನಿಮ್ಮ ಪರವಾಗಿಯೇ ಇರುತ್ತದೆಲ್ಲವೇ? ಅವಧಿ ಮುಗಿಯುವುದ ರೊಳಗೆ ಮೀಸಲಾತಿ ಸಹಿತ ಎಲ್ಲವನ್ನೂ ಪೂರ್ಣಗೊಳಿಸಬೇಕು. ಅವಧಿ ಮುಗಿದು 2 ವರ್ಷಗಳಾದ ಮೇಲೆ ಏನಿದು? ಮೀಸಲಾತಿ ಅಧಿಸೂಚನೆಯನ್ನು ನಿರ್ದಿಷ್ಟ ದಿನಾಂಕದಲ್ಲಿ ಪ್ರಕಟಿಸಲು ಮುಂದಾಗದಿದ್ದರೆ ಹಾಲಿ ಇರುವ ರೋಸ್ಟರ್ ಪ್ರಕಾರ ಚುನಾ ವಣೆ ನಡೆಸಲು ಆಯೋಗಕ್ಕೆ ನಿರ್ದೇಶಿಸ ಲಾಗುವುದು. ಚುನಾವಣೆ ವಿಳಂಬವು ಸಾಂವಿ ಧಾನಿಕ ಆಡಳಿತ ಮುರಿದು ಬಿದ್ದಿರುವುದಕ್ಕೆ ಸಮ ನಾಗುತ್ತದೆ ಎಂದು ನ್ಯಾಯಮೂರ್ತಿಗಳು ಸರಕಾರವನ್ನು ತರಾಟೆಗೆ ತೆಗದುಕೊಂಡರು.
ಇದನ್ನೂ ನೋಡಿ: ಘನತೆಯ ಬದುಕು ನಮ್ಮ ಹಕ್ಕು | ಜನವಾದಿ ಮಹಿಳಾ ಸಂಘಟನೆ ; 12ನೇ ರಾಜ್ಯ ಸಮ್ಮೇಳನJanashakthi Media
