‘ಮೀಸಲಾತಿಗೆ ವಿರುದ್ಧ ಇದ್ದರು’ | ನೆಹರೂ ವಿರುದ್ಧ ಮತ್ತೆ ದಾಳಿ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಕಾಂಗ್ರೆಸ್ ಯಾವಾಗಲೂ ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರ ವಿರುದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದು, ಮತ್ತೊಮ್ಮೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಗುರಿಯಾಗಿಸಿದ್ದಾರೆ. ನೆಹರೂ ಅವರು ಉದ್ಯೋಗದಲ್ಲಿ ಯಾವುದೇ ರೀತಿಯ ಮೀಸಲಾತಿಗೆ ಒಲವು ತೋರಿಲ್ಲ ಎಂದು ಅವರು ಬುಧವಾರ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಮೋದಿ, ಮಾಜಿ ಪ್ರಧಾನಿ ನೆಹರೂ ಅವರು ಅಂದಿನ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಓದಿದ್ದಾರೆ. “ನಾನು ಅದರ ಅನುವಾದವನ್ನು ಓದುತ್ತಿದ್ದೇನೆ: ‘ನಾನು ಯಾವುದೇ ರೀತಿಯ ಮೀಸಲಾತಿಯನ್ನು ಇಷ್ಟಪಡುವುದಿಲ್ಲ, ಅದರಲ್ಲೂ ನಿರ್ದಿಷ್ಟವಾಗಿ ಸೇವೆಗಳಲ್ಲಿ ಮೀಸಲಾತಿಯನ್ನು ಇಷ್ಟಪಡುವುದಿಲ್ಲ. ಅಸಮರ್ಥತೆ ಮತ್ತು ಎರಡನೇ ದರ್ಜೆಯ ಮಾನದಂಡಗಳಿಗೆ ಕಾರಣವಾಗುವ ಯಾವುದನ್ನಾದರೂ ನಾನು ಬಲವಾಗಿ ವಿರೋಧಿಸುತ್ತೇನೆ’. ಅದಕ್ಕಾಗಿಯೇ ನಾನು ಹೇಳುವುದು ಅವರು ಹುಟ್ಟಿನಿಂದಲೆ ಮೀಸಲಾತಿಯನ್ನು ವಿರೋಧಿಸುತ್ತಾರೆ ಎಂದು….” ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಗಮನ ಸೆಳೆದ ಆಕಾಶ ವೀಕ್ಷಣೆ

ಹಿಂದುಳಿದ ವರ್ಗಗಳಿಗೆ ಉತ್ತಮ ಶಿಕ್ಷಣಕ್ಕೆ ಅವಕಾಶ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಅವಶ್ಯಕತೆಯಿದೆಯೇ ಹೊರತು ಜಾತಿಯ ಆಧಾರದ ಮೇಲೆ ಉದ್ಯೋಗಗಳನ್ನು ಮೀಸಲಿಡುವ ಮೂಲಕ ಅಲ್ಲ ಎಂದು 1961ರ ಜೂನ್ 27 ರಂದು ಜವಾಹರಲಾಲ್ ನೆಹರೂ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಒಬಿಸಿಗಳಿಗೆ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಬೋಧಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘‘ಒಬಿಸಿಗೆ ಯಾವತ್ತೂ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡಲಿಲ್ಲ. ಬಾಬಾ ಸಾಹೇಬರನ್ನು ಭಾರತ ರತ್ನಕ್ಕೆ ಅರ್ಹರೆಂದು ಪರಿಗಣಿಸದ ಕಾಂಗ್ರೆಸ್ ತನ್ನ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡುತ್ತಲೇ ಇತ್ತು. ಅವರೀಗ ನಮಗೆ ಸಾಮಾಜಿಕ ನ್ಯಾಯದ ಪಾಠ ಹೇಳಿಕೊಡುತ್ತಿದ್ದಾರೆ. ನಾಯಕರಾಗಿ ಯಾವುದೇ ಗ್ಯಾರಂಟಿ ಇಲ್ಲದವರು ಮೋದಿ ಅವರ ಗ್ಯಾರಂಟಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ” ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ: ಇಂಡಿಯಾ ಅಧಿಕಾರಕ್ಕೆ ಬಂದರೆ ಜಿಎಸ್‌ಟಿ ಮಾರ್ಪಾಡು | ರಾಹುಲ್ ಗಾಂಧಿ ಭರವಸೆ

ಅಧಿವೇಶನದ ಈ ಮೂರು ದಿನಗಳಲ್ಲಿ ಪ್ರಧಾನಿ ಮೋದಿ ಅವರು ನೆಹರೂ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಜವಾಹರಲಾಲ್ ನೆಹರೂ ಅವರು ತಮ್ಮ ಅಮೆರಿಕ ಮತ್ತು ಚೀನಾದ ಸಹವರ್ತಿಗಳಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆ ಹೊಂದಿದ್ದಾರೆಂದು ಭಾವಿಸಿದ್ದರು ಎಂದು ಹೇಳಿದ್ದರು.

“ಪ್ರಧಾನಿ ನೆಹರೂ ಅವರು ಕೆಂಪು ಕೋಟೆಯಿಂದ ಹೇಳಿದ್ದನ್ನು ನಾನು ಓದುತ್ತೇನೆ. ‘ಭಾರತೀಯರಿಗೆ ಸಾಮಾನ್ಯವಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವಿಲ್ಲ. ನಾವು ಯುರೋಪ್ ಅಥವಾ ಜಪಾನ್ ಅಥವಾ ಚೀನಾ ಅಥವಾ ರಷ್ಯಾ ಅಥವಾ ಅಮೆರಿಕದ ಜನರಂತೆ ನಾವು ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದರು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದಿರಾ ಗಾಂಧಿಯವರ ಚಿಂತನೆಯೂ ಭಿನ್ನವಾಗಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ‘ಭಾರತೀಯರು ಕಷ್ಟಗಳಿಂದ ತಪ್ಪಿಸಿಕೊಳ್ಳುತ್ತಾರೆ’ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದ್ದಾರೆ.

ವಿಡಿಯೊ ನೋಡಿ: ನ್ಯಾಶನಲ್ ಕಾಲೇಜ್ ಮುಂದೆ ಜನಾಕ್ರೋಶ :ಡಾ. ರವಿ ಬಾಗಿ ವರ್ಗಾವಣೆ ಹಿಂಪಡೆದ ಆಡಳಿತ ಮಂಡಳಿ Janashakthi Media

Donate Janashakthi Media

Leave a Reply

Your email address will not be published. Required fields are marked *